ಮಂಗಳೂರು : ಮಾಸ್ಟರ್ ಚೆಫ್ ವಿನ್ನರ್ ಮಹಮ್ಮದ್ ಆಶಿಕ್‍ರಿಂದ ಲೈವ್ ಕುಕ್ಕಿಂಗ್ ಶೋ
ಸ್ಪಾರ್ಕಲ್ ಇವೆಂಟ್ಸ್ ಆಂಡ್ ಡೆಕೋರ್ಸ್, ಸಿಟಿ ಸೆಂಟರ್ ಮಂಗಳೂರು, ಸುಮಯ್ಯ ಶೇಖ್ ಸಂಯೋಜನೆಯ, ಎರೊಡೈನಾಮಿಕ್ ಮತ್ತು ಮೋತಿಶಾಮ್ ಸಹಯೋಗದೊಂದಿಗೆ “ಫೀಸ್ಟ್ ಯುವರ್ ಐಸ್” ವಿತ್ ಮಾಸ್ಟರ್ ಚೆಫ್ ವಿನ್ನರ್ ಮಹಮ್ಮದ್ ಆಶಿಕ್ ಕಾರ್ಯಕ್ರಮವು ಮಂಗಳೂರಿನ ಸಿಟಿ ಸೆಂಟರ್ ಮಾಲ್ ನಲ್ಲಿ ನೆರವೇರಿತು.
ಕಾರ್ಯಕ್ರಮದಲ್ಲಿ ಮಾಸ್ಟರ್ ಚೆಫ್ ವಿನ್ನರ್ ಮಹಮ್ಮದ್ ಆಶಿಕ್ ಅವರಿಗೆ ಗೌರವ ಸನ್ಮಾನ ನಡೆಯಿತು… ಈ ವೇಳೆ ಮಾಸ್ಟರ್ ಚೆಫ್ ವಿನ್ನರ್ ಮಹಮ್ಮದ್ ಆಶಿಕ್ ಅವರಿಂದ ಮೊಟ್ಟ ಮೊದಲ ಬಾರಿಗೆ ಮಂಗಳೂರಿನಲ್ಲಿ ಲೈವ್ ಕುಕ್ಕಿಂಗ್ ಶೋ ಮತ್ತು ಸಂವಾದ ಕಾರ್ಯಕ್ರಮ ನಡೆಯಿತು..ಈ ವೇಳೆ ಕಾರ್ಯಕ್ರಮ ಸಂಯೋಜಕಿ ಸುಮಯ್ಯ ಶೇಖ್ ಮಾತನಾಡಿ ಫೀಸ್ಟ್ ಯುವರ್ ಐಸ್” ವಿತ್ ಮಾಸ್ಟರ್ ಚೆಫ್ ವಿನ್ನರ್ ಮಹಮ್ಮದ್ ಆಶಿಕ್ ಕಾರ್ಯಕ್ರಮ ಅದ್ದೂರಿಯಾಗಿ ನಡೆದಿದೆ ಮಂಗಳೂರಿಗರು ಉತ್ತಮ ರೀತಿಯ ಸ್ಪಂದನೆ ನೀಡಿದ್ದಾರೆ. ಈ ಕಾರ್ಯಕ್ರಮ ಸ್ಪಾರ್ಕಲ್ ಇವೆಂಟ್ಸ್ ಆಂಡ್ ಡೆಕೋರ್ಸ್ ಮೈಲಿಗಲ್ಲಿನ ಕಾರ್ಯಕ್ರಮ ಆಗಲಿದೆ ಎಂದು ಹೇಳಿದರು….ಕಾರ್ಯಕ್ರಮದಲ್ಲಿ ಮೋತಿಶಾಮ್ ಗ್ರೂಪ್ ಎಕ್ಸಿಕ್ಯೂಟಿವ್ ಡೈರೆಕ್ಟರ್ ಎಸ್ ಎಂ ಸಹೂದ್, ಎರೊಡೈನಾಮಿಕ್ ಗ್ರೂಪ್ ಕ್ಯಾಪ್ಟನ್ ಸುಧೀರ್ ಅಮೀನ್ ಮತ್ತಿತರರು ಉಪಸ್ಥಿತರಿದ್ದರು….