ಮಠದಕಣಿ : ಮಳೆ ನೀರು ಹರಿಯುವ ತೋಡಲ್ಲೇ ಡ್ರೈನೇಜ್ ನೀರು

ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಮಠದಕಣಿಯಲ್ಲಿ ಮಳೆ ನೀರು ಹರಿಯುವ ತೋಡಿನಲ್ಲೇ ಡ್ರೈನೇಜ್ ನೀರು ಕೂಡ ಹರಿಯುತ್ತಿದೆ. ಸ್ಥಳೀಯರು ಮೂಗು ಮುಚ್ಚಿ ಓಡಾಡುವ ಪರಿಸ್ಥಿತಿ ಉಂಟಾಗಿದೆ.

ನಗರದ ಮಠದಕಣಿಯಲ್ಲಿ ಬರ್ಕೆ ಠಾಣೆಗೆ ತೆರಳುವ ರಸ್ತೆಯ ಬದಿಯಲ್ಲಿ ಮಳೆ ನೀರು ಹರಿದು ಹೋಗುವ ತೋಡಿನಲ್ಲಿ ಡ್ರೈನೇಜ್ ನೀರು ಹರಿಯುತ್ತಿದೆ. ಒಳಚರಂಡಿ ವ್ಯವಸ್ಥೆ ಹದಗೆಟ್ಟಿರುವ ಕಾರಣ ಚರಂಡಿ ನೀರು ರಸ್ತೆ ಹಾಗೂ ಮಳೆ ನೀರು ಹರಿಯುವಂತಹ ತೋಡಿನಲ್ಲೇ ಹರಿಯುವಂತಾಗಿದೆ. ಡ್ರೈನೇಜ್ ನೀರು ಸೋರಿಕೆಯಿಂದ ಕೆಟ್ಟ ದುರ್ವಾಸನೆ ಬೀರುತ್ತಿದೆ. ಕಳೆದ ಹಲವಾರು ದಿನಗಳಿಂದ ಡ್ರೈನೇಜ್ ಸಮಸ್ಯೆ ಇದ್ದರೂ ಯಾವುದೇ ಜನಪ್ರತಿನಿಧಿಗಳು ಸಮಸ್ಯೆಗೆ ಗಮನಿಸದೆ ಇರುವುದು ವಿಪರ್ಯಾಸ. ಕೂಡಲೇ ಈ ಸಮಸ್ಯೆಯನ್ನು ಸಂಬಂಧಪಟ್ಟ ಅಧಿಕಾರಿಗಳು ಗಮನಹರಿಸಿ ಬಗೆಹರಿಸಬೇಕು ಎಂದು ಸಾರ್ವಜನಿಕರ ಆಗ್ರಹವಾಗಿದೆ.