ಮಂಗಳೂರು : ಮನಪಾ ಮಾಜಿ ಸದಸ್ಯೆ ಮೀರಾ ಅಶೋಕ್ ನಿಧನ

ಮಂಗಳೂರು ಮಹಾನಗರಪಾಲಿಕೆ ತಿರುವೈಲ್ ವಾರ್ಡಿನ ಮಾಜಿ ಸದಸ್ಯರುವಾಮಂಜೂರಿನ ಸದಾಶಿವ ನಗರ ಬಡಾವಣೆಯ ನಿವಾಸಿ ಶ್ರೀಮತಿ ಮೀರಾ ಅಶೋಕ್ ರವರು ಅಲ್ಪಕಾಲದ ಅನಾರೋಗ್ಯದಿಂದಾಗಿ ಇದೆ ಮಾರ್ಚ್ ತಿಂಗಳ 19ನೇ ತಾರೀಖಿನಭಾನುವಾರದಂದು ನಗರದ ಕೆ .ಎಂ .ಸಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು .ಮಂಗಳೂರು ಮಹಾನಗರಪಾಲಿಕೆಯ ಸದಸ್ಯರಾಗಿ ಸೇವೆ ಸಲ್ಲಿಸಿದ್ದು ಮಾತರವಲ್ಲದೆವಿವಿಧ ಸಂಘಸಂಸ್ಥೆಗಳ ಲ್ಲಿ ಮುಖ್ಯ ಹುದ್ದೆಯನ್ನು ಅಲಂಕರಿಸಿಕೊಂಡು ಸದಾ ಚಟುವಟಿಕೆಯಿಂದ ಜನರನ್ನು ಸಂಘಟಿಸಿಕೊಂಡು ಸಮಾಜ ಸೇವೆ ಮಾಡುತಿದ್ದರು .ಅವರುಇಬ್ಬರು ಪುತ್ರರು,ಸೊಸೆಯಂದಿರು ಹಾಗೂ ಮೊಮ್ಮಕ್ಕಳನ್ನು ಅಗಲಿದ್ದಾರೆ. ಮೃತರ ಆತ್ಮಸದ್ಗತಿಗಾಗಿ ಉತ್ತರ ಕ್ರಿಯೆಯು ಇದೆ ಬರುವ ಏಪ್ರಿಲ್ ತಿಂಗಳ ಒಂದನೇ ತಾರೀಖಿನ ಶನಿವಾರದಂದು ಮಧ್ಯಾಹ್ನ ಘಂಟೆ 12:30ಗೆ ಸರಿಯಾಗಿ ವಾಮಂಜೂರಿನ “ಶ್ರೀ ರಾಮ ಭಜನಾ ಮಂದಿರ” ದಲ್ಲಿ ಜರುಗಲಿರುವುದು .