ಎಮ್.ಜಿ. ಹೆಗ್ಡೆ ಅವರು ಬರೆದಿರುವ ಮಿನುಗು ನೋಟ ಪುಸ್ತಕ ಬಿಡುಗಡೆ

ಗಾಂಧಿ ವಿಚಾರ ವೇದಿಕೆ ವತಿಯಿಂದ ಮಿನುಗು ನೋಟ ಎಮ್.ಜಿ. ಹೆಗ್ಡೆಯವರು ಬರೆದಿರುವ ಗಾಂಧೀಜಿಯವರ ಕುರಿತ ಪ್ರಶ್ನೆಗಳಿಗೆ ಉತ್ತರದ ಪುಸ್ತಕ ಬಿಡುಗಡೆ ಕಾರ್ಯಕ್ರಮವು ನಗರದ ಕದ್ರಿಯಲ್ಲಿರುವ ಲಯನ್ಸ್ ಭವನದಲ್ಲಿ ನಡೆಯಿತು.

ಪುಸ್ತಕವನ್ನು ಪ್ರಸಿದ್ಧ ಅಂಕಣಕಾರರಾದ ಸುಧೀಂದ್ರ ಕುಲಕರ್ಣಿ ಅವರು ಅನಾವರಣಗೊಳಿಸಿದರು. ಬಳಿಕ ಮಾತನಾಡಿದ ಅವರು, ಮಾನವತೆಗೆ ಬೇಕಾದ ವಿಚಾರ ಎಂದೂ ಸಾಯುವುದಿಲ್ಲ. ಮಹಾತ್ಮಾ ಗಾಂಧೀಜಿಯವರು ವಿಶ್ವಶಾಂತಿಗಾಗಿ ಇಡೀ ಜಗತ್ತಿನಲ್ಲಿ ಸಹಬಂಧುತ್ವಕ್ಕಾಗಿ, ಶೋಷಣೆ ಮುಕ್ತ ಸಮಾಜಕ್ಕಾಗಿ ಹೋರಾಡಿದ ನಾಯಕಗಾಂಧೀಜಿಯವರ ತತ್ವ ಆದರ್ಶಗಳನ್ನು ನಾವೆಲ್ಲರೂ ಮೈಗೂಡಿಸಿಕೊಳ್ಳಬೇಕು ಎಂದು ಹೇಳಿದರು.

ಲೇಖಕರಾದ ಎಂ.ಜಿ. ಹೆಗ್ಡೆ ಅವರು ಪುಸ್ತಕದ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಗಾಂಧಿ ವಿಚಾರ ವೇದಿಕೆಯ ಅಧ್ಯಕ್ಷರಾದ ಶ್ರೀಧರ್ ಜಿ. ಭಿಡೆ, ಉಪಾಧ್ಯಕ್ಷರಾದ ಅಣ್ಣಾ ವಿನಯಚಂದ್ರ, ಮಂಗಳೂರು ಘಟಕದ ಗೌರವಾಧ್ಯಕ್ಷರಾದ ಬಿ.ಎಂ. ರೋಹಿಣಿ, ಗಾಂಧಿ ವಿಚಾರ ವೇದಿಕೆಯ ಸಂಚಾಲಕ ಅರವಿಂದ ಚೊಕ್ಕಾಡಿ ಉಪಸ್ಥಿತರಿದ್ದರು.

Related Posts

Leave a Reply

Your email address will not be published.