ಗಾಂಧಿ ವಿಚಾರ ವೇದಿಕೆಯಿಂದ ಮಿನುಗು ನೋಟ ಅನಾವರಣ ಕಾರ್ಯಕ್ರಮ

ಗಾಂಧಿ ವಿಚಾರ ವೇದಿಕೆ ವತಿಯಿಂದ ಮಿನುಗು ನೋಟ ಎಮ್.ಜಿ. ಹೆಗ್ಡೆಯವರು ಬರೆದಿರುವ ಗಾಂಧೀಜಿಯವರ ಕುರಿತ ಪ್ರಶ್ನೆಗಳಿಗೆ ಉತ್ತರದ ಪುಸ್ತಕ ಬಿಡುಗಡೆ ಕಾರ್ಯಕ್ರಮವು ಜನವರಿ 15ರಂದು ಬೆಳಿಗ್ಗೆ 10 ಗಂಟೆಗೆ ನಗರದ ಕದ್ರಿಯಲ್ಲಿರುವ ಲಯನ್ಸ್ ಭವನದಲ್ಲಿ ನಡೆಯಲಿದೆ.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗಾಂಧಿ ವಿಚಾರ ವೇದಿಕೆಯ ಅಧ್ಯಕ್ಷರಾದ ಶ್ರೀಧರ್ ಜಿ. ಭಿಡೆ ವಹಿಸಲಿದ್ದಾರೆ. ಪುಸ್ತಕವನ್ನು ಪ್ರಸಿದ್ಧ ಅಂಕಣಕಾರರಾದ ಸುಧೀಂದ್ರ ಕುಲಕರ್ಣಿ ಅವರು ಅನಾವರಣ ಮಾಡಲಿದ್ದಾರೆ. ಎಮ್.ಜಿ. ಹೆಗ್ಡೆ ಅವರು ಪ್ರಸ್ತಾವಿಕವಾಗಿ ಮಾತನಾಡಲಿದ್ದಾರೆ. ಮಧ್ಯಾಹ್ನ 2 ಗಂಟೆಯಿಂದ ಗಾಂಧಿ ವಿಚಾರ ವೇದಿಕೆ ಕುರಿತು ಚರ್ಚೆ ನಡೆಯಲಿದೆ.

Related Posts

Leave a Reply

Your email address will not be published.