ಮಿಸ್ ವರ್ಲ್ಡ್ ಯೂನಿವರ್ಸಲ್ ಇಂಟರ್ ನ್ಯಾಶನಲ್ ಸ್ಪರ್ಧೆಯಲ್ಲಿ ರೆನಿ ಜಾರ್ಜ್

ಆಸ್ಟ್ರೇಲಿಯಾದಲ್ಲಿ ನೆಲೆಸಿರುವ ಭಾರತೀಯ ಮೂಲದ ಮೋಡೇಲ್ ರೆನಿ ಜಾರ್ಜ್ ಅವರು ಸದ್ಯದಲ್ಲೇ ಸಿಡ್ನಿಯಲ್ಲಿ ನಡೆಯಲಿರುವ ಮಿಸ್ ವರ್ಲ್ಡ್ ಯೂನಿವರ್ಸಲ್ ಇಂಟರ್ ನ್ಯಾಶನಲ್ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ.

ಹೊಸದಿಲ್ಲಿಯಲ್ಲಿಯ ನಿವಾಸಿಯಾಗಿರುವ ರೆನಿ ಜಾರ್ಜ್ ಅವರು ನರ್ಸಿಂಗ್ ಕ್ಷೇತ್ರದಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದು, ಇದೀಗ ಹದಿನೈದು ವರ್ಷಗಳಿಂದ ಆಸ್ಟ್ರೇಲಿಯಾದಲ್ಲಿ ವೃತ್ತಿಯಲ್ಲಿದ್ದಾರೆ. 2022ರ ಮಿಸ್ ಇಂಡಿಯಾ ವರ್ಲ್ಡ್ ಯೂನಿರ್ವಸಲ್ ಕಿರೀಟ ಗೆದ್ದಿರುವ ರೆನಿ ಜಾರ್ಜ್ ಅವರು ಮುಂಬರುವ ಇಂಟರ್ ನ್ಯಾಶನಲ್ ಪೇಜೆಂಟ್‍ನಲ್ಲಿ ವಿವಿಧ ದೇಶಗಳಿಂದ ಬರುವ ಮೋಡೆಲ್‍ಗಳ ಎದುರು ಸ್ಪರ್ಧಿಸಲಿದ್ದಾರೆ.ರೆನಿ ಜಾರ್ಜ್ ಅವರ ತಂದೆ ತಾಯಿ ಮೂಲತಾ ಕೇರಳದವರಾಗಿದ್ದು, ಹಲವು ವರ್ಷಗಳ ಹಿಂದೆ ದಿಲ್ಲಿಗೆ ಬಂದಿದ್ದರು, ರೆನಿ ಅವರು ದಿಲ್ಲಿಯಲ್ಲಿ ವೃತ್ತಿ ಜೀವನ ಆರಂಭಿಸಿದ ಬಳಿಕ ಆಸ್ಟ್ರೇಲಿಯಾಕ್ಕೆ ತೆರಳಿದ್ದರು. ಸಿಡ್ನಿಯಲ್ಲಿ ತನ್ನ ವೃತ್ತಿಯ ಜೊತೆಗೆ ವಿವಿಧ ಸಮಾಜಮುಖಿ ಕಾರ್ಯದಲ್ಲಿ ರೆನಿ ಜಾರ್ಜ್ ಅವರು ತೊಡಗಿಸಿಕೊಂಡಿದ್ದಾರೆ. ಮುಂದಿನ ಸೆಪ್ಟಂಬರ್‍ನಲ್ಲಿ ನ್ಯೂಯಾರ್ಕ್‍ನಲ್ಲಿ ನಡೆಯುವ ಫ್ಯಾಶನ್ ವೀಕ್ ಇವೆಂಟ್ ನಲ್ಲಿ ಕೂಡ ರೆನಿ ಜಾರ್ಜ್ ಅವರು ಭಾಗವಹಿಸಲಿದ್ದಾರೆ.

ಫ್ಯಾಶನ್ ಹಾಗೂ ಮೊಡೆಲಿಂಗ್ ಕ್ಷೇತ್ರದಲ್ಲಿ ರೆನಿ ಅವರು ಅನೇಕ ರಾಷ್ಟ್ರೀಯ ಅಂತರಾಷ್ಟ್ರೀಯ ಕಿರೀಟಗಳನ್ನು ಗೆದ್ದವರಾಗಿದ್ದಾರೆ. 2020ರಲ್ಲಿ ಮಿಸ್ ಆಸ್ಟ್ರೇಲಿಯಾ ಗ್ಯಾಲಕ್ಸಿ ಸ್ಪಧೆಯಲ್ಲಿ ಅಂತಿಮ ಸುತ್ತಿಗೆ ಆಯ್ಕೆಯಾಗಿದ್ದರು. 2021 ರಲ್ಲಿ ಐಎಂಎಫ್ ಕರ್ವ್ ಮೋಡೆಲ್ ಕಿರೀಟ ಗೆದ್ದಿದ್ದರು. 2021ರಲ್ಲಿ ಆಸ್ಟ್ರೇಲಿಯನ್ ಗೋಲ್ಡನ್ ಸ್ಯಾಶ್ ಪವರ್ ವುಮನ್ ಪ್ರಶಸ್ತಿ ,2021 ರಲ್ಲಿ ಸಿಡ್ನಿಸ್ ಬೆಸ್ಟ್ ಡ್ರೆಸ್ ಪುರಸ್ಕಾರ ಗೆದ್ದುಕೊಂಡಿದ್ದರು.