ಪ್ರಧಾನಿ ಮೋದಿ ಅವರಿಂದ 8 ಯೋಜನೆಗಳ ಲೋಕಾರ್ಪಣೆ ಮತ್ತು ಶಿಲಾನ್ಯಾಸ

ಕಂಟೇನರ್‍ಗಳು ಹಾಗೂ ಇತರೆ ಸರಕು ನಿರ್ವಹಣೆಗಾಗಿ ಬರ್ತ್ ಸಂಖ್ಯೆ 14ರ ಯಾಂತ್ರೀಕರಣ, ಬಿಎಸ್ 6 ಶ್ರೇಣಿ ಇಂಧನಗಳ ಉತ್ಪಾದನೆ, ಪರಿಸರ ಸಂರಕ್ಷಣೆ, ಮಾಲಿನ್ಯ ನಿಯಂತ್ರಣ, ಸಮುದ್ರ ಲವಣ ನೀರು ಶುದ್ಧೀಕರಣ ಘಟಕ. ಶುದ್ಧ ನೀರಿನ ಸಂರಕ್ಷಣೆ, 30 ಎಂಎಲ್‍ಡಿ ಲವಣ ನೀರು ಶುದ್ಧೀಕರಣ ಸಾಮಥ್ರ್ಯದೊಂದಿಗೆ ಸುಸ್ಥಿರತೆಗೆ ಉತ್ತೇಜನ. ಎನ್‍ಎಂಪಿಯಲ್ಲಿ ಸಮಗ್ರ ಎಲ್‍ಪಿಜಿ ಹಾಗೂ ಬೃಹತ್ ಪಿಒಎಲ್ ಸೌಲಭ್ಯ ಸ್ಥಾಪನೆ. 2,200 ಜನರಿಗೆ ಉದ್ಯೋಗವಕಾಶಗಳು, ದ್ರವರೂಪದ ಸರಕಗಳು ಅನ್‍ಲೋಡಿಂಗ್ ಸಮಯದಲ್ಲಿ ಉಳಿತಾಯ, ಎಲ್‍ಪಿಜಿಯ ಒಟ್ಟಾರೆ ಆಮದು ವೆಚ್ಚದಲ್ಲಿ ಇಳಿಕೆ, ಪಿಎಂ ಉಜ್ವಲ ಯೋಜನೆಗೆ ನೇರ ಬೆಂಬಲ. ಎನ್‍ಎಂಪಿಯಲ್ಲಿ ಶೇಖರಣಾ ಟ್ಯಾಂಕ್‍ಗಳು ಹಾಗೂ ಖಾದ್ಯ ತೈಲ ಸಂಸ್ಕರಣಾಗಾರ ನಿರ್ಮಾಣ. ಎನ್‍ಎಂಪಿಯಲ್ಲಿ ಬಿಟುಮೆನ್ ಶೇಖರಣಾ ಟ್ಯಾಂಕ್ ಘಟಕಗಳ ನಿರ್ಮಾಣ. ಎನ್‍ಎಂಪಿಯಲ್ಲಿ ಬಿಟುಮೆನ್, ಖಾದ್ಯ ತೈಲ ಶೇಖರಣಾ ಟ್ಯಾಂಕ್‍ಗಳು ಹಾಗೂ ಸಂಬಂಧಿತ ಸೌಲಭ್ಯಗಳ ನಿರ್ಮಾಣ. ಕುಳಾಯಿಯಲ್ಲಿ ಇಪಿಸಿ ಮಾದರಿಯಲ್ಲಿ ಮೀನುಗಾರಿಕೆ ಬಂದರು ಅಭಿವೃದ್ಧಿ.
