ಕೂಳೂರಿನ ಗೋಲ್ಡ್ ಪಿಂಚ್ ಸಿಟಿಯತ್ತ ಜನಸಾಗರ

ಕೂಳೂರಿನ ಗೋಲ್ಡ್ ಪಂಚ್ ಸಿಟಿಯಲ್ಲಿ ನಡೆಯಲಿರುವ ಸಾರ್ವಜನಿಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಹಿನ್ನೆಲೆಯಲ್ಲಿ ಗೋಲ್ಡ್ ಪಿಂಚ್ ಸಿಟಿಯತ್ತ ಜನಸಾಗರ ಹರಿಯಲಾರಂಭಿಸಿದೆ.
ಬಿಜೆಪಿ ಕಾರ್ಯಕರ್ತರು, ಹಿಂದೂ ಸಂಘಟನೆಗಳ ಪ್ರತಿನಿಧಿಗಳು ಹಾಗೂ ಸಾರ್ವಜನಿಕರು ತಂಡೋಪತಂಡವಾಗಿ ಗೋಲ್ಡ್ ಪಿಂಚ್ ಸಿಟಿಯತ್ತ ಹೆಜ್ಜೆ ಹಾಕಲಾರಂಭಿಸಿದ್ದಾರೆ. ಬೆಳಗ್ಗೆ 11ರಿಂದ ಗೋಲ್ಡ್ ಪಂಚ್ ಸಿಟಿ ಮೈದಾನದತ್ತ ಜನರು ಮುಖ ಮಾಡಿದ್ದಾರೆ. ಮಂಗಳೂರಿನ ಪ್ರತಿ ವಾರ್ಡ್ ನಿಂದ ಜನರನ್ನು ಕಾರ್ಯಕ್ರಮಕ್ಕೆ ಕರೆದೊಯ್ಯಲು ವ್ಯವಸ್ಥೆ ಮಾಡಲಾಗಿದೆ. ಮಂಗಳೂರು ನಗರದಲ್ಲಿ ಬಹುತೇಕವಾಗಿ ಸಿಟಿ ಬಸ್, ಸರ್ವಿಸ್ ಬಸ್ ಓಡಾಟ ನಿಲ್ಲಿಸಿದೆ. ಒಂದು ರೀತಿಯಲ್ಲಿ ಕರ್ಫ್ಯೂ ವಾತಾವರಣ ನೆಲಸಿದೆ. ಪ್ರಧಾನಿ ಕಾರ್ಯಕ್ರಮದಲ್ಲಿ ಸುಮಾರು 1 ಲಕ್ಷ ಜನರು ಪಾಲ್ಗೊಳ್ಳುವ ಸಾಧ್ಯತೆಗಳಿವೆ. ಸಭೆಯಲ್ಲಿ ಪಾಲ್ಗೊಳ್ಳುವವರಿಗೆ ನೀರು ಮತ್ತು ಆಹಾರದ ವ್ಯವಸ್ಥೆ ಮಾಡಲಾಗಿದೆ.