ಗಣೇಶನ ಹಬ್ಬ: ಕಬ್ಬು ಬೆಳೆಗಾರರ ಮೊಗದಲ್ಲಿ ಮಂದಹಾಸ

ಮೂಡುಬಿದಿರೆ : ಗಣೇಶನ ಹಬ್ಬ ಹಾಗೂ ತೆನೆ ಹಬ್ಬದ ಸಂದರ್ಭಗಳಲ್ಲಿ ಕರಾವಳಿಯ ಉಭಯ ಜಿಲ್ಲೆಗಳಲ್ಲಿ ಕಬ್ಬಿಗೆ ಸಕತ್ ಬೇಡಿಕೆ ಇರುತ್ತದೆ. ಕಳೆದ ಎರಡು ವರ್ಷ ಕೋರೋನಾ ಕಾರಣದಿಂದ ಚೌತಿ ಮತ್ತು ತೆನೆ ಹಬ್ಬ ಸರಳವಾಗಿ ಆಚರಿಸಿದ ಕಾರಣ ಕಬ್ಬಿಗೆ ಬೇಡಿಕೆ ಇರಲಿಲ್ಲ. ಕೊರೋನಾ ಕಾರಣದಿಂದ ಸಂಕಷ್ಟಕೊಳಗಾದ ಕಬ್ಬು ಬೆಳೆದ ರೈತರ ಮೊಗದಲ್ಲಿ ಇದೀಗ ಈ ಬಾರಿ ಮಂದಹಾಸ ಮೂಡಿದೆ.

ಕರಾವಳಿಯಲ್ಲಿ ಚೌತಿ ಹಬ್ಬಕ್ಕೆ ಪ್ರಮುಖವಾಗಿ ಕಬ್ಬು ಉಪಯೋಗಿಸುತ್ತಿದ್ದು ಮನೆ ಗಣಪನಿಗೆ ಅರ್ಪಿಸುವ ಸಂಪ್ರದಾಯವಿದೆ, ಕಳೆದೆರಡು ವರ್ಷಗಳಲ್ಲಿ ಕಬ್ಬು ಬೆಳೆದ ರೈತರು ಕಬ್ಬು ಮಾರಾಟವಾಗದೆ ಸಂಕಷ್ಟಕ್ಕೆ ಒಳಗಾಗಿದ್ದರು. ಈ ಬಾರಿ ಕಬ್ಬಿನ ಕಟಾವು ಕಾರ್ಯ ಈಗಾಗಲೇ ಆರಂಭವಾಗಿದ್ದು, ನಾಲ್ಕು ತಿಂಗಳ ಹಿಂದೆಯೇ ಕಬ್ಬು ಖರೀದಿಗಾಗಿ ಮುಂದೆ ಬಂದಿದ್ದಾರೆ, ಈ ಬಾರಿ ಉತ್ತಮ ಬೆಲೆ ದೊರಕ್ಕಿದ್ದು, ಒಂದು ಕಬ್ಬಿಗೆ 24 ರಿಂದ 25 ರೂಪಾಯಿ ಬೆಲೆ ಸಿಕ್ಕಿದೆ, ರೈತರು ತಾವು ಬೆಳೆದ ಕಬ್ಬುನ್ನು ಕಡಿದು 12 ಕಬ್ಬಿನ ಒಂದೊಂದು ಕಟ್ಟು ತಯಾರಿಸಿ ರಖಂ ಖರೀದಿಸಿದವರಿಗೆ ಕೊಡಲಾಗುತ್ತದೆ.

ಉಭಯ ಜಿಲ್ಲೆಗಳಲ್ಲಿ ಹೆಚ್ಚಾಗಿ ಕಬ್ಬು ಬೆಳೆಯುವುದು ಕಿನ್ನಿಗೋಳಿ ಸಮೀಪದ ಬಳ್ಕುಂಜೆ, ಕರ್ನಿರೆ, ಕವತ್ತಾರು ಪ್ರದೇಶಗಳಲ್ಲಿ ಕಬ್ಬು ಬೆಳೆಯುತ್ತಿದ್ದು, ಕಪ್ಪು ಮಣ್ಣು ಕಬ್ಬು ಬೆಳೆಯಲು ಉತ್ತಮವಾಗಿದೆ, ಈ ಕಾರಣ ಈ ಭಾಗಗಳಲ್ಲಿ ಹೆಚ್ಚಾಗಿ ಕಬ್ಬು ಬೆಳೆಯುತ್ತಿದ್ದು, ಇಲ್ಲಿನ ರೈತರು ಸುಮಾರು 30 ಎಕ್ಕರೆ ಪ್ರದೇಶಗಳಲ್ಲಿ ಕಬ್ಬನ್ನು ಬೆಳೆಸುತ್ತಾರೆ, ಎಕ್ಕರೆಗೆ ಸುಮಾರು 10000 ಕಬ್ಬು ಬೆಳೆಯಲಾಗುತ್ತಿದ್ದು ಪ್ರತೀ ವರ್ಷ ಆಕ್ಟೋಬರ್ ತಿಂಗಳಲ್ಲಿ ಬಿತ್ತನೆ ಕಾರ್ಯ ನಡೆಯುತ್ತದೆ, ಕಬ್ಬನ್ನು ರೈತರು ರಖಂ ಆಗಿ ಮಾರಾಟ ಮಾಡುತ್ತಿದ್ದು, ಚೌತಿ ಹಬ್ಬಕ್ಕೆ ಸುಮಾರು 4-5 ತಿಂಗಳ ಹಿಂದೆಯೇ ಮಾರಾಟವಾಗುತ್ತದೆ, ಇಲ್ಲಿನ ರೈತರು ಸಂಘಟಿತರಾಗಿ ಕಬ್ಬು ಬೆಳೆಗಾರರ ಸಂಘ ರಚಿಸಿ ಈ ಮೂಲಕ ಪ್ರತೀ ವರ್ಷ ಬೆಲೆ ನಿಗದಿ ಮಾಡಿ ನಂತರ ಮಾರಾಟ ಮಾಡುತ್ತಾರೆ, ಹೆಚ್ಚಾಗಿ ಚೌತಿ ಹಬ್ಬಕ್ಕೆ ಮಾರಾಟವಾದರೆ ನಂತರ ತೆನೆ ಹಬ್ಬಕ್ಕೆ ಉಭಯ ಜಿಲ್ಲೆಯ ಹಲವು ಚರ್ಚ್ ಗಳಿಗೆ ಸರಬರಾಜಾಗುತ್ತದೆ, ಎರಡು ವರ್ಷ ಕೊರೋನಾ ಕಾರಣದಿಂದ ಬೆಲೆ ಇಲ್ಲದೆ ಕಂಗೆಟ್ಟಿದ್ದ ರೈತನ ಮೊಗದಲಿದಿದೀಗ ಮಂದಾಹಾಸ ಮೂಡಿದೆ.
