ಮೂಡುಬಿದರೆ: ನಿವೃತ್ತ ಸುಬೇದಾರ್ ರಾಮಚಂದ್ರ ಭಟ್ ನಿಧನ
ಮೂಡುಬಿದರೆಯ: ಭಾರತೀಯ ಸೇನೆಯ ನಿವೃತ್ತ ಸುಬೇದಾರ್ ರಾಮಚಂದ್ರ ಭಟ್ ಮೂಡುಬಿದರೆಯ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ 77 ವರ್ಷ ವಯಸ್ಸಾಗಿತ್ತು.ಮೂಡುಬಿದರೆಯ ಹನುಮಂತನಗರ ನಿವಾಸಿಯಾಗಿದ್ದಾರೆ,. 28ವರ್ಷಗಳ ಸುದೀರ್ಘ ಅವಧಿಯಲ್ಲಿ ಸೇನೆಯಲ್ಲಿ ಸೇವೆ, ಸಲ್ಲಿಸಿದ್ದರು, ಪಂಜಾಬ್, ಹರಿಯಾಣ, ಕೋಲ್ಕತ್ತಾ, ಬರೇಲಿ ಸೇರಿದಂತೆ ಹಲವು ಪ್ರದೇಶಗಳಲ್ಲಿ ಸೇನೆಯಲ್ಲಿ ಸೇವೆ ಸಲ್ಲಿಸಿ ದೇಶಪ್ರೇಮ ಮೆರೆದಿದ್ದಾರೆ, ಪತ್ನಿ ದೇವಕಿ ಭಟ್ ಮೂಡುಬಿದರೆ ರೋಟರಿ ಆಂಗ್ಲ ಮಾಧ್ಯಮ ಶಾಲೆಯ ನಿವೃತ್ತ ಶಿಕ್ಷಕಿ ಇಬ್ಬರು ಪುತ್ರರು ಸೇರಿದಂತೆ ಅಪಾರ ಬಂಧುಗಳನ್ನು ಅಗಲಿದ್ದಾರೆ.