ಮೂಡುಬಿದಿರೆ : ಮಾರೂರಿನಲ್ಲಿ ನಿವೇಶನ ಹಂಚಿಕೆಯಲ್ಲಿ 6 ಫಲಾನುಭವಿಗಳಿಗೆ ತಡೆ

ಮೂಡುಬಿದಿರೆ: ಮಾರೂರು ಗ್ರಾಮದಲ್ಲಿ 36 ಫಲಾನುಭವಿಗಳ ಪೈಕಿ 30 ಫಲಾನುಭವಿಗಳಿಗೆ ನಿವೇಶನ ಹಂಚಿಕೆಯಾಗಿ ಉಳಿದ 6 ಫಲಾನುಭವಿಗಳ ಅರ್ಜಿಯನ್ನು ತಡೆಹಿಡಿದ ಮಂಗಳೂರಿನ ಹೌಸಿಂಗ್ ಕನ್ಸಲ್ಟೆಂಟ್ ಅಧಿಕಾರಿ ಗಿರೀಶ್ ಅವರನ್ನು ದ.ಕ. ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ ಅವರು ದೂರವಾಣಿ ಮೂಲಕ ತರಾಟೆಗೆ ತೆಗೆದುಕೊಂಡು ಒಂದು ವಾರದೊಳಗೆ ಸಮಸ್ಯೆ ಬಗೆಹರಿಸಿಕೊಡುವಂತೆ ಸೂಚಿಸಿದರಲ್ಲದೆ ಈ ವಿಷಯವನ್ನು ನೀವು ಕೂಡ ಫಾಲೊಅಪ್ ಮಾಡಬೇಕು ಎಂದು ಪುರಸಭೆ ಮುಖ್ಯಾಧಿಕಾರಿ ಇಂದು ಅವರಿಗೆ ಸೂಚನೆಯನ್ನು ನೀಡಿದ ಘಟನೆ ಬುಧವಾರ ಮೂಡುಬಿದಿರೆಯಲ್ಲಿ ನಡೆದಿದೆ.

ಸಾರ್ವಜನಿಕರ ಕು ಂದುಕೊರತೆಗಳನ್ನು ಪರಿಶೀಲಿಸಿ ಬಗೆಹರಿಸಲು ಬುಧವಾರ ಇಲ್ಲಿನ ತಾಲ್ಲೂಕು ಆಡಳಿತ ಸೌಧದಲ್ಲಿ ಅಧಿಕಾರಿಗಳ ಸಭೆ ನಡೆಸಿದ ಜಿಲ್ಲಾಧಿಕಾರಿಯವರಿಗೆ ಪತ್ರಕರ್ತ ಕೃಷ್ಣ ಕುಮಾರ್ ಅವರು ಸಾರ್ವಜನಿಕರಿಗೆ ಮಾರೂರಿನಲ್ಲಿ ನಿವೇಶನ ಹಂಚಿಕೆಯಲ್ಲಿ ಆಗುತ್ತಿರುವ ತೊಂದರೆಗಳ ಬಗ್ಗೆ ಗಮನ ಸೆಳೆದಾಗ ಈ ಬಗ್ಗೆ ತನಿಖೆ ನಡೆಸುವಂತೆ ಪುರಸಭೆಯ ಮುಖ್ಯಾಧಿಕಾರಿಗೆ ತಿಳಿಸಿದರು.

ಸಭೆಯನ್ನುದ್ದೇಶಿಸಿ ಮಾತನಾಡಿದ ಜಿಲ್ಲಾಧಿಕಾರಿ ಹಳ್ಳಿಯ ಜನರು ಕೆಲಸಕ್ಕೆ ಬಂದಾಗ ಅವರೊಂದಿಗೆ ಸೌಜನ್ಯದಿಂದ ವರ್ತಿಸಿ ವಿಷಯವನ್ನು ಮನವರಿಕೆ ಮಾಡಿ ಸೂಕ್ತ ಮಾಹಿತಿ ಕೊಡಬೇಕು. ಆದರೆ ಕೆಲವು ಗ್ರಾಮಕರಣಿಕರು ಸಾರ್ವಜನಿಕರೊಂದಿಗೆ ತಾಳ್ಮೆ ಕಳಕೊಂಡವರಂತೆ ವರ್ತಿಸುತ್ತಿರುವ ದೂರುಗಳು ಕೇಳಿ ಬರುತ್ತಿವೆ, ಇಂತಹ ದೂರುಗಳು ಬರದಂತೆ ಎಚ್ಚರಿಕೆ ವಹಿಸಬೇಕು ಎಂದರು. ಚುನಾವಣೆ ಗುರುತಿನ ಚೀಟಿಗೆ ಆಧಾರ್ ಲಿಂಕ್ ಮಾಡಿಸುವುದು ಕಡ್ಡಾಯವಲ್ಲ. ಆದರೆ ಆಧಾರ್ ಲಿಂಕ್ ಮಾಡಿಸಲಿಚಿಚ್ಚಿಸುವವರಿಗೆ ಸರಕಾರ ಅವಕಾಶ ಕಲ್ಪಿಸಲಾಗಿದ್ದು ಚುನಾವಣೆ ಸುಧಾರಣೆಗಾಗಿ ಇಂತಹ ಕ್ರಮ ಕೈಗೊಳ್ಳಲಾಗಿದೆ ಎಂದರು.

Related Posts

Leave a Reply

Your email address will not be published.