ಮೂಡುಬಿದಿರೆ ” ಸ್ಬಚ್ಚತಾ ಹೀ ಸೇವಾ” ಆಂದೋಲನ ಕಾರ್ಯಕ್ರಮ

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಸ್ವಚ್ಚ ಭಾರತ್ ಮಿಷನ್ (ಗ್ರಾಮೀಣ), ದ.ಕ ಜಿಲ್ಲಾ ಪಂಚಾಯತ್ ಮಂಗಳೂರು, ತಾಲೂಕು ಪಂಚಾಯತ್ ಮೂಡುಬಿದಿರೆ, ರೇಡಿಯೋ ಸಾರಂಗ್, ಮಂಗಳೂರು ಸಹಭಾಗಿತ್ವದಲ್ಲಿ ” ಸ್ಬಚ್ಚತಾ ಹೀ ಸೇವಾ” ಆಂದೋಲನ ಕಾರ್ಯಕ್ರಮವನ್ನು ಮೂಡುಬಿದಿರೆ ತಾಲೂಕಿನ ಐತಿಹಾಸಿಕ ತಾಣ ಸಾವಿರ ಕಂಬದ ಬಸದಿ ಆವರಣದಲ್ಲಿ ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮವನ್ನು ಸ್ವಚ್ಚತೆ ಹಾಗೂ ಪ್ಲಾಸ್ಟಿಕ್ ನಿಷೇಧ ಮಾಹಿತಿಯನ್ನೊಳಗೊಂಡ ಕರಪತ್ರ ಬಿಡುಗಡೆಗೊಳಿಸುವ ಮೂಲಕ ಭಟ್ಟಾರಕ ಚಾರುಕೀರ್ತಿ ಸ್ವಾಮೀಜಿಯವರು ಉದ್ಘಾಟಿಸಿದರು.ಮೂಡುಬಿದಿರೆ ತಾಲೂಕು ಪಂಚಾಯತ್ ವ್ಯಾಪ್ತಿಯ ಗ್ರಾಮ ಪಂಚಾಯತ್ ಗಳಲ್ಲಿ ಕಾರ್ಯನಿರ್ವಹಿಸುವ ಪೌರ ಕಾರ್ಮಿಕರನ್ನು ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ, ಪುರಸಭೆ ಅಧ್ಯಕ್ಷರು, ಸ್ವಚ್ಚತಾ ಭಾರತ್ ಮಿಷನ್ ಸಮಾಲೋಚಕರು, ದೈಹಿಕ ಶಿಕ್ಷಕರು, ಆಡಳಿತ ಮುಕ್ತೇಸರರು, ರೇಡಿಯೋ ಸಾರಂಗ್ ಕಾರ್ಯಕ್ರಮ ನಿರ್ವಾಹಕರು, ಪುರಸಭೆ ಸದಸ್ಯರು, ಕಾಲೇಜು ಶಿಕ್ಷಕರು, ವಿದ್ಯಾರ್ಥಿಗಳು, ಜಲ ಜೀವನ್ ಮಿಷನ್ ಅನುಷ್ಠಾನ ಬೆಂಬಲ ಸಂಸ್ಥೆ ಸಿಬ್ಬಂದಿ, ತಾ.ಪಂ. ಸಿಬ್ಬಂದಿ,ಗ್ರಾ.ಪಂ ಸಿಬ್ಬಂದಿ ಉಪಸ್ಥಿತರಿದ್ದರು.