ಮೂಡುಬಿದಿರೆ : ಸುರತ್ಕಲ್ ಟೋಲ್‍ಗೇಟ್ ತೆರವಿಗೆ ಆಗ್ರಹ,ವಿವಿಧ ಸಂಘಟನೆಗಳಿಂದ ಪ್ರತಿಭಟನೆ
ಮೂಡುಬಿದಿರೆ : ಅನಧಿಕೃತ ಮತ್ತು ಅವೈಜ್ಞಾನಿಕ ರೀತಿಯಲ್ಲಿ ಕಾರ್ಯಚರಿಸುತ್ತಿರುವ ಸುರತ್ಕಲ್ ಟೋಲ್ಗೇಟನ್ನು ತೆರವುಗೊಳಿಸುವಂತೆ ಆಗ್ರಹಿಸಿ ಮೂಡುಬಿದಿರೆಯ ಬ್ಲಾಕ್ ಕಾಂಗ್ರೆಸ್, ಸಿಪಿಐಎಂ ಮತ್ತು ಕರ್ನಾಟಕ ರಾಜ್ಯ ರೈತ ಸಂಘದ ವತಿಯಿಂದ ತಾಲೂಕು ಆಡಳಿತ ಸೌಧದ ಮುಂಭಾಗ ಪ್ರತಿಭಟನೆ ನಡೆಯಿತು. ಮಾಜಿ ಸಚಿವ ಕೆ.ಅಭಯಚಂದ್ರ ಜೈನ್ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿ ಸುರತ್ಕಲ್ ಟೋಲ್ ಎಂದರೆ ರೌಡಿಗಳನ್ನು ಸಾಕುವಂತಹ ವ್ಯವಸ್ಥೆಯಾಗಿದೆ. 400 ಕೋಟಿ ರೂಪಾಯಿ ಸಂಗ್ರಹಿಸಿ ಇಡೀ ಜಿಲ್ಲೆಯಲ್ಲಿ ರೌಡಿಸಂ ಮಾಡುವ ಕೆಲಸವನ್ನು ಬಿಜೆಪಿ ಪಕ್ಷವು ಮಾಡುತ್ತಿದೆ. ಹೋರಾಟಗಳಗೆ ಟೋಲ್ನಿಂದ ಬರುವ ಅಕ್ರಮ ದುಡ್ಡುಗಳ ನ್ನೆಲ್ಲಾ ಬಳಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.
ಸಿಪಿಐಎಂನ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಯಾದವ ಶೆಟ್ಟಿ ಮಾತನಾಡಿ ಈ ಹಿಂದೆ 15ಕ್ಕಿಂತ ಹೆಚ್ಚು ಟೋಲ್ಗೇಟನ್ನು ರದ್ದುಗೊಳಿಸಲಾಗುವುದೆಂದು ಭರವಸೆಯನ್ನು ನೀಡುತ್ತಾ ಬಂದಿದ್ದರೂ ಈವರೆಗೆ ರದ್ದಾಗಿಲ್ಲ. ದ.ಕ.ಜಿಲ್ಲೆಯಲ್ಲಿ ಅದೆಷ್ಟೂ ಸಮಸ್ಯೆಗೆ ಆದ್ದರೂ ಕೋಮು ದೃಢೀಕರಣದ ಮೂಲಕ ಎಂ.ಪಿ., ಎಂಎಲ್‍ಎಗಳು ಗೆಲ್ಲುತ್ತಾ ಬಂದಿದ್ದಾರೆ. ಬಸ್ಗಳಿಂದಲೂ ಟೋಲ್ಗೇಟಿನಲ್ಲಿ ಹೆಚ್ಚುವರಿ ಸುಂಕವನ್ನು ಸಂಗ್ರಹಿಸುವ ಮೂಲಕ ಲಕ್ಷಾಂತರ ರೂಗಳನ್ನು ಗಳಸುತ್ತಿದೆ ಎಂದು ಕಿಡಿಕಾರಿದರು.
ಕೆಪಿಸಿಸಿ ಕಾರ್ಯದರ್ಶಿ ಮಿಥುನ್ ರೈ ಮಾತನಾಡಿ, ಮಂಗಳೂರು ಭಾಗದ ಬಿಜೆಪಿ ಶಾಸಕರುಗಳಿಗೆಲ್ಲಾ ಟೋಲ್ನಿಂದ ಶೇ 40 ಕಮಿಷನ್ ಬರುತ್ತಿರುವುದರಿಂದಲೇ ಟೋಲ್ನ್ನು ಮುಚ್ಚುವಂತಹ ಪ್ರಾಮಾಣಿಕ ಪ್ರಯತ್ನವನ್ನು ಮಾಡಿಲ್ಲವೆಂದು ಆರೋಪಿಸಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಲೇರಿಯನ್ ಸಿಕ್ಕೇರಾ, ಯುವ ಕಾಂಗ್ರೆಸ್ ಅಧ್ಯಕ್ಷ ಜಯಕುಮಾರ್ ಶೆಟ್ಟಿ, ಪುರಸಭಾ ಸದಸ್ಯರಾದ ಸುರೇಶ್ ಕೋಟ್ಯಾನ್, ಕೊರಗಪ್ಪ, ಪಿ.ಕೆ.ಗೋಮಸ್, ಇಕ್ವಾಲ್ ಕರೀಂ, ಪುರಂದರ ದೇವಾಡಿಗ, ಜೊಸ್ಸಿ ಮಿನೇಜಸ್, ಮುತ್ತಿಗೆ ಗ್ರಾ.ಪಂ.ಅಧ್ಯಕ್ಷೆ ಪ್ರವೀಣ್ ಶೆಟ್ಟಿ, ಸದಸ್ಯರಾದ ಮುರಆದರೆ, ಮರುಷೋತ್ತಮ ನಾಯಕ್ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.