19ನೇ ರಾಜ್ಯಮಟ್ಟದ ಕರಾಟೆ ಕೆಲರಾಯ್ ರೆಡ್‍ಕ್ಯಾಮೆಲ್‍ಗೆ ಸಮಗ್ರ ಪ್ರಶಸ್ತಿ

ಮೂಡುಬಿದಿರೆ : ಶೋರಿನ್ ರಿಯೂ ಕರಾಟೆ ಅಸೋಸಿಯೇಷನ್, ಎಂಕೆ ಅನಂತರಾಜ್ ಕಾಲೇಜು ಓಫ್ ಫಿಸಿಕಲ್ ಎಜುಕೇಶನ್ ಹಾಗೂ ಸ್ವಾಮಿ ಸ್ಟ್ರೆಂತ್ ಟ್ರೈನಿಂಗ್ ಸೆಂಟರ್ ಜಂಟಿಯಾಗಿ ಸಮಾಜಮಂದಿರದಲ್ಲಿ ಆಯೋಜಿಸಿದ 19ನೇ ರಾಜ್ಯ ಮಟ್ಟದ ಕರಾಟೆ ಚಾಂಪಿಯನ್‍ಶಿಪ್‍ನಲ್ಲಿ ಕೆಲರಾಯ ರೆಡ್ ಕ್ಯಾಮಲ್ ಇಂಗ್ಲಿಷ್ ಮೀಡಿಯಂ ಶಾಲೆಯು ಸಮಗ್ರ ತಂಡ ಪ್ರಶಸ್ತಿಯನ್ನು ಗಳಿಸಿದೆ.

ಅಡ್ಯಾರ್ ಕಣ್ಣೂರಿನ ಬರಕ ಇಂಟರ್ನಾಷನಲ್ ಶಾಲೆಯು ತಂಡ ರನ್ನರ್ಸ್ ಗೆದ್ದುಕೊಂಡಿದೆ. ತೃತೀಯ ಸ್ಥಾನವನ್ನು ಮಂಗಳೂರಿನ ಪೀಸ್ ಪಬ್ಲಿಕ್ ಸ್ಕೂಲ್ ಪಡೆಯಿತು ಹಾಗೂ ಉತ್ತಮ ಪ್ರದರ್ಶನ ತಂಡವಾಗಿ ಮೂಡುಜದಿರ ರೋಟರಿ ಆಂಗ್ಲ ಮಾಧ್ಯಮ ಶಾಲೆ, ದ ಕೇಂಬ್ರಿಡ್ ಇಂಟರ್‍ನ್ಯಾಶನಲ್ ಶಾಲೆ, ಶೆಫರ್ಡ್ ಇಂಟರ್ನಾಷನಲ್ ಅಕಾಡೆಮಿ, ದಾರುಲ್ ಐಮನ್ ಸ್ಕೂಲ್, ಕಾರ್ಮಲ್ ಇಂಗ್ಲಿಷ್ ಮೀಡಿಯಂ ಸ್ಕೂಲ್, ದ ಏನೇಪೋಯ ಸ್ಕೂಲ್, ಬುರೂಜ್ ಆಂಗ್ಲ ಮಾಧ್ಯಮ ಶಾಲೆ, ಹಾಗೂ ಪ್ರೆಸ್ಟೀಜ್ ಇಂಟರ್ನಾಷನಲ್ ಸ್ಕೂಲ್, ಎಕ್ಸಲೆಂಟ್ ಸ್ಕೂಲ್ ಪಡೆಯಿತು. ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಮಾಜಿ ಸಚಿವ ಅಭಯಚಂದ್ರ ಜೈನ್, ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್, ಉದ್ಯಮಿ ಅಬುಲ್ ಆಲಾ ದಂತವೈದ್ಯ ಡಾ.ಜಾವಿದ್ ಶೇಕ್, ಸಂಘಟಕರಾದ ಸ್ವಾಮಿ ಪ್ರಸಾದ್, ರಾಜೇಶ್, ರಾಜ್ಯ ಕರಾಟೆ ಶಿಕ್ಷಕರ ಸಂಘದ ಅಧ್ಯಕ್ಷ ನದೀಮ್ ಉಪಸ್ಥಿತರಿದ್ದರು.

Related Posts

Leave a Reply

Your email address will not be published.