ಬಾವಿಗೆ ಹಾರಿದ ಯುವತಿಯ ರಕ್ಷಣೆ

ಮೂಡುಬಿದಿರೆಯ ವಿಶಾಲನಗರದ ನಿವಾಸಿ ಯುವತಿಯೋರ್ವಳು ಬಾವಿಗೆ ಹಾರಿ ಆತ್ಮಹತ್ಯೆ ಯತ್ನಿಸಿದ್ದು ಅವಳನ್ನು ಮೂಡುಬಿದಿರೆ ಅಗ್ನಿಶಾಮಕದಳದ ಸಿಬಂದಿಗಳು ರಕ್ಷಿಸಿದ ಘಟನೆ
ಮೂಡುಬಿದಿರೆ ಪೋಲೀಸ್ ಠಾಣಾ ವ್ಯಾಪ್ತಿಯ ಪ್ರಾಂತ್ಯದಲ್ಲಿ ನಡೆದಿದೆ. ತಮಿಳುನಾಡು ಮೂಲದ ವಿಶಾಲ್ ನಗರದ ನಿವಾಸಿ ರಾಬಿತ್ ಎಂಬವರ ಪುತ್ರಿ 22ರ ಹರೆಯದ ನಿವೇತಾ ಬಾವಿಗೆ ಹಾರಿದ ಯುವತಿ. ಈಕೆ ಇಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ನರ್ಸ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು.

ಇಂದು ಬೆಳಗಿನ ವೇಳೆ ಪ್ರಾಂತ್ಯದ ಬಳಿ ಇರುವ 25 ಅಡಿ ಆಳದ ಬಾವಿಯೊಂದಕ್ಕೆ ಹಾರಿದ್ದಾರೆ. ಆಗ ಪಕ್ಕದ ಮನೆಯವರು ನೋಡಿ ಮೂಡುಬಿದಿರೆ ಅಗ್ನಿಶಾಮಕ ಠಾಣೆಗೆ ಕರೆ ಮಾಡಿ ತಿಳಿಸಿದ್ದಾರೆ. ತಕ್ಷಣ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ಸಹಾಯಕ ಠಾಣಾಧಿಕಾರಿ ಸ್ಟೀಫನ್ ಡಿ’ಸಿಲ್ವ ಅವರ ನೇತೃತ್ವದಲ್ಲಿ ಅಗ್ನಿಶಾಮಕ ಚಾಲಕ ಕಿರಣ್ ಕುಮಾರ್ ಎಸ್., ಸಿಬಂದಿಗಳಾದ ನವೀನ್ ರಾಜ್, ಪ್ರವೀಣ್ ಕುಮಾರ್ ದೊಡ್ಮನಿ, ಪುಂಡಲೀಕ, ಗೃಹರಕ್ಷಕ ದಳದ ಸಿಬಂದಿಗಳಾದ ಲತೀಶ್, ಸನ್ಮತ್, ಸುದರ್ಶನ್ ಅವರು ಯುವತಿಯನ್ನು ಬಾವಿಯಿಂದ ಮೇಲಕ್ಕೆತ್ತಿ ರಕ್ಷಿಸಿದ್ದಾರೆ.