ಇಟಲ ಶ್ರೀ ಸೋಮನಾಥೇಶ್ವರ ದೇವಸ್ಥಾನ : ಧ್ವಜಸ್ತಂಭದ ಭವ್ಯ ಮೆರವಣಿಗೆ ವಾಹನ ಜಾಥಾ

ಮೂಡುಬಿದಿರೆ: ಮಹತೋಭಾರ ಇಟಲ ಶ್ರೀ ಸೋಮನಾಥೇಶ್ವರ ದೇವಸ್ಥಾನ ದರೆಗುಡ್ಡೆ ಇಲ್ಲಿಗೆ ನೂತನ ಧ್ವಜಸ್ತಂಭ ನಿರ್ಮಾಣಕ್ಕಾಗಿ ಸುಳ್ಯದಿಂದ ತಂದಿರುವ ಕೊಡಿಮರವನ್ನು ಮೂಡುಬಿದಿರೆ ಜೈನ ಪ.ಪೂ.ಕಾಲೇಜು ಮೈದಾನದ ಬಳಿ ಸ್ವಾಗತಿಸಲಾಯಿತು. ನಂತರ ಕೊಂಬು, ಚೆಂಡೆ, ಕುಣಿತ ಭಜನೆ, ನಾಸಿಕ್ ಬ್ಯಾಂಡ್ ಮೂಲಕ ಕಲಾ ತಂಡಗಳು,ಭಜನಾ ತಂಡಗಳೊಂದಿಗೆ ದರೆಗುಡ್ಡೆಗೆ ಹೊರಟ “ಧ್ವಜಸ್ತಂಭದ ಭವ್ಯ ಮೆರವಣಿಗೆ ವಾಹನ ಜಾಥಾ”ಕ್ಕೆ ಶಾಸಕ ಉಮಾನಾಥ ಎ.ಕೋಟ್ಯಾನ್ ಚಾಲನೆಯನ್ನು ನೀಡಿದರು. ದರೆಗುಡ್ಡೆಯ ನಾಗರಾಜ್ ಭಟ್ ಸಹೋದದರು ಪೂಜಾ ವಿಧಿವಿಧಾನಗಳನ್ನು ನೆರವೇರಿಸಿದರು. ಮಧ್ಯಾಹ್ನದ ವೇಳೆಗೆ ಅಳಿಯೂರಿಗೆ ತಲುಪಿದ ಕೊಡಿಮರವನ್ನು ಉಮಲತ್ತಡೆ ಗರಡಿ ಅಳಿಯೂರು ಇಲ್ಲಿ ಭವ್ಯವಾಗಿ ಸ್ವಾಗತಿಸಲಾಯಿತು ನಂತರ ವಿವಿಧ ಕಲಾ ತಂಡಗಳೊಂದಿಗೆ ದರೆಗುಡ್ಡೆ ದೇವಸ್ಥಾನಕ್ಕೆ ಹೊರಟ ಪಾದಯಾತ್ರೆಗೆ ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್ ಎಂ ಚಾಲನೆಯನ್ನು ನೀಡಿದರು.

ಸಚಿವ ವಿ.ಸುನಿಲ್ ಕುಮಾರ್, ಶ್ರೀ ಕ್ಷೇತ್ರ ಇಟಲ ದೇವಸ್ಥಾನದ ಅನುವಂಶಿಕ ಮೊಕ್ತೇಸರ ಬಿ.ವಿಮಲ್ ಕುಮಾರ್, ಸಮಿತಿಯ ಕಾರ್ಯಾಧ್ಯಕ್ಷ ಸುಕೇಶ್ ಶೆಟ್ಟಿ, ಅಳಿಯೂರು ಉಮಲತ್ತಡೆ ಬ್ರಹ್ಮಬೈದರ್ಕಳ ಗರಡಿಯ ಆಡಳಿತ ಸಮಿತಿಯ ಅಧ್ಯಕ್ಷ ಪ್ರವೀಣ್ ಭಟ್ ಕಾನಂಗಿ, ಪ್ರಮೋದ್ ಅರಿಗ ಮಜಲೋಡಿಗುತ್ತು, ಮೂಡುಬಿದಿರೆ ಪುರಸಭಾಧ್ಯಕ್ಷ ಪ್ರಸಾದ್ ಕುಮಾರ್, ಸದಸ್ಯ ಸುರೇಶ್ ಕೋಟ್ಯಾನ್,ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ವಿವೇಕ್ ಆಳ್ವ, ವಾಲ್ಪಾಡಿ ಗ್ರಾ.ಪಂ.ಅಧ್ಯಕ್ಷ ಪ್ರದೀಪ್ ಕುಮಾರ್, ಗುರುವಾಯನಕೆರೆ ನವಶಕ್ತಿ ಗ್ರೂಫ್ಸ್ ನ ರಾಜೇಶ್ ಭಟ್, ಎಂಸಿಎಸ್ ಬ್ಯಾಂಕಿನ ಅಧ್ಯಕ್ಷ ಬಾಹುಬಲಿ ಪ್ರಸಾದ್, ಬಿಲ್ಲವ ಮಹಾಮಂಡಲದ ಅಧ್ಯಕ್ಷ ರಾಜಶೇಖರ್ ಕೋಟ್ಯಾನ್, ಬಿಜೆಪಿ ಮುಖಂಡ ಕೆ.ಪಿ.ಜಗದೀಶ್ ಅಧಿಕಾರಿ, ಉದ್ಯಮಿಗಳಾದ ತಿಮ್ಮಯ್ಯ ಶೆಟ್ಟಿ, ಶ್ರೀಪತಿ ಭಟ್, ರುಕ್ಕಯ ಪೂಜಾರಿ, ಕೆ.ಕೆ.ಪೂಜಾರಿ ದಂಪತಿ, ವಕೀಲ ಮಯೂರ ಕೀರ್ತಿ, ಅಶ್ವಥ್ ಪಣಪಿಲ,ಸಮಿತ್ ರಾಜ್ ದರೆಗುಡ್ಡೆ ಗಣೇಶ್ ಬಿ.ಅಳಿಯೂರು ಈ ಸಂಧರ್ಭದಲ್ಲಿ ಪಾಲ್ಗೊಂಡು ಕೊಡಿಮರಕ್ಕೆ ಪುಷ್ಪಾರ್ಚನೆಗೈದರು.
ವೀರಮಾರುತಿ ದೇವಸ್ಥಾನ ಕೋಟೆಬಾಗಿಲು, ನಡ್ಯೋಡಿ ದೈವಸ್ಥಾನ ಮರಿಯಾಡಿ, ಶಿರ್ತಾಡಿ ಜಂಕ್ಷನ್ ಸಹಿತ ವಿವಿಧ ಗರಡಿ, ದೇವಸ್ಥಾನ, ಬಿಲ್ಲವ ಸಂಘಗಳ ಬಳಿ ಊರಿನ ಗ್ರಾಮಸ್ಥರು ಪೂಜೆಯನ್ನು ಸಲ್ಲಿಸಿದರು.