ಮೂಡುಬಿದಿರೆ : ಎಮ್ಮೆ ಮಾಂಸ ಮಾರಾಟ ಮಳಿಗೆಗೆ ಪರವಾನಿಗೆ ನೀಡದಂತೆ ಹಿಂಜಾವೇಯಿಂದ ಮನವಿ

ಮೂಡುಬಿದಿರೆ ಪುರಸಭಾ ವ್ಯಾಪ್ತಿಯಲ್ಲಿ ಎಮ್ಮೆ ಮಾಂಸ ಮಾರಾಟ ಮಳಿಗೆಯನ್ನು ತೆರೆಯಲು ಪರವಾನಿಗೆ ನೀಡಬಾರದೆಂದು ಆಗ್ರಹಿಸಿ ಮೂಡುಬಿದಿರೆ ತಾಲೂಕು ಹಿಂದೂ ಜಾಗರಣ ವೇದಿಕೆಯು ಪುರಸಭಾ ಮುಖ್ಯಾಧಿಕಾರಿ ಇಂದು ಎಂ.ಅವರಿಗೆ ಮನವಿಯನ್ನು ಸಲ್ಲಿಸಿದರು.
ಹಿಂದೂ ಜಾಗರಣಾ ವೇದಿಕೆಯ ಜಿಲ್ಲಾ ಸಹ ಸಂಯೋಜಕ್ ಸಮಿತ್ ರಾಜ್ ದರೆಗುಡ್ಡೆ ಮಾತನಾಡಿ ನಮ್ಮ ಸಂಘವು ನಿರಂತರವಾಗಿ ಗೋಹತ್ಯೆ, ಗೋ ಕಳ್ಳ ಸಾಗಾಟಣೆ ಮತ್ತು ಕಾನೂನು ಬಾಹಿರ ಕಸಾಯಿಖಾನೆ ವಿರುದ್ಧ ನಿರಂತರವಾಗಿ ಹೋರಾಟ ನಡೆಸಿಕೊಂಡು ಬಂದಿದೆ. ಅಲ್ಲದೆ ಈ ಬಗ್ಗೆ ಹಲವು ಪ್ರಕರಣಗಳು ಈಗಾಗಲೇ ಮೂಡುಬಿದಿರೆ ಫೆÇಲೀಸ್ ಠಾಣೆಯಲ್ಲಿ ದಾಖಲಾಗಿದೆ ಮತ್ತು ರಾಜ್ಯದ ಅಲ್ಲದೆ ರಾಜ್ಯದ ಬೇರೆ ಬೇರೆ ಕಡೆಗಳಲ್ಲಿ ನಡೆದ ಗೋ ಕಳ್ಳತನ ಪ್ರಕರಣದಲ್ಲಿ ಮೂಡುಬಿದಿರೆಯ ಹಲವು ಮಂದಿ ಭಾಗಿಯಾಗಿರುತ್ತಾರೆ ಎಂದರು.

ಹಿಂಜಾವೇಯ ಜಿಲ್ಲಾ ಸಂಪರ್ಕ ಪ್ರಮುಖ್ ಸಂದೀಪ್ ಸುವರ್ಣ ಕೆಲ್ಲಪುತ್ತಿಗೆ, ತಾಲೂಕು ಸಂಚಾಲಕ ಸಂದೀಪ್ ಹೆಗ್ಡೆ, ಪುರಸಭಾ ಸ್ಥಾಯಿ ಸಮಿತಿ ಅಧ್ಯಕ್ಷ ನಾಗರಾಜ ಪೂಜಾರಿ, ಹಿಂದೂ ಯುವವಾಹಿನಿಯ ನಾಗೇಂದ್ರ ಭಂಡಾರಿ, ಪ್ರಮುಖರಾದ ರಾಜೇಶ್ ಕೆಲ್ಲಪುತ್ತಿಗೆ, ಶರತ್ ಮಿಜಾರು, ಶುಭಕರ ಶೆಟ್ಟಿ ಮತ್ತಿತರರು ಈ ಸಂದರ್ಭದಲ್ಲಿದ್ದರು

Related Posts

Leave a Reply

Your email address will not be published.