ಮೂಡುಬಿದಿರೆ: ವಸತಿ ಯೋಜನಾ ಫಲಾನುಭವಿಗಳಿಗೆ ಆದೇಶ ಪತ್ರ ಹಾಗೂ ನೋಂದಾಯಿತ ಕಟ್ಟಡ ಕಾರ್ಮಿಕರಿಗೆ ಕಿಟ್ ವಿತರಣೆ

ಮೂಡುಬಿದಿರೆ: ಕಲ್ಲಮುಂಡ್ಕೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ವಸತಿ ಯೋಜನಾ ಫಲಾನುಭವಿಗಳಿಗೆ ಆದೇಶ ಪತ್ರ ಹಾಗೂ ನೋಂದಾಯಿತ ಕಟ್ಟಡ ಕಾರ್ಮಿಕರಿಗೆ ಶಾಸಕ ಉಮಾನಾಥ ಕೋಟ್ಯಾನ್ ಪಂಚಾಯತ್ ಸಭಾಂಗಣದಲ್ಲಿ ಕಿಟ್ ವಿತರಿಸಿದರು.

ನಂತರ ಮಾತನಾಡಿದ ಶಾಸಕ ಕೋಟ್ಯಾನ್ ಮನೆ ನಿರ್ಮಾಣದ ಪ್ರತಿ ಹಂತದಲ್ಲಿ ಫೋಟೋ ತೆಗೆದು ಪಂಚಾಯತ್ ಗೆ ನೀಡಿದರೆ ಹಂತ ಹಂತವಾಗಿ ಹಣ ಮಂಜೂರಾಗುತ್ತದೆ. ಈ ಬಗ್ಗೆ ಪಂಚಾಯತ್ ನಲ್ಲಿ ಸೂಕ್ತ ಮಾಹಿತಿಗಳನ್ನು ಪಡೆದು ಮನೆ ನಿರ್ಮಾಣ ಕಾರ್ಯ ಮಾಡಬೇಕು. ಸರಕಾರಿ ಜಾಗದಲ್ಲಿ ಮನೆ ಕಟ್ಟಿ ಕುಳಿತವರಿಗೆ 94 ಸಿ ಯಲ್ಲಿ ಹಕ್ಕುಪತ್ರವನ್ನು ನೀಡುವ ಕೆಲಸವನ್ನು ಕಳೆದ 15 ದಿನಗಳಿಂದ ಮಾಡಲಾಗುತ್ತಿದೆ ಎಂದರು.ಪಂಚಾಯತ್ ಅಧ್ಯಕ್ಷ ಕೇಶವ್ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು.

ಪಂಚಾಯತ್ ಉಪಾಧ್ಯಕ್ಷೆ ಕಲ್ಯಾಣಿ, ಸದಸ್ಯರುಗಳಾದ ಸಂಜೀವ ಪೂಜಾರಿ, ವಸಂತ್ ನಾಯ್ಕ್, ಗಿರೀಶ್ ಪೂಜಾರಿ, ಪ್ರೇಮ ಶೆಟ್ಟಿ, ಆಶಾಲತಾ ಶೆಟ್ಟಿ, ಲೀಲಾ, ಶಕುಂತಲಾ ಪೂಜಾರಿ, ಲೋಕಾಪಯೋಗಿ ಇಲಾಖೆಯ ಇಂಜಿನಿಯರ್ ಸಂಜೀವ ನಾಯ್ಕ್, ಹಿರಿಯ ಕಾರ್ಮಿಕ ನಿರೀಕ್ಷಕ ರಾಜಶೇಖರ್ ರೆಡ್ಡಿ, ಜಲಜೀವನ್ ಮಿಷನ್ ಯೋಜನೆಯ ಸಹಾಯಕ ಇಂಜಿನಿಯರ್ ಸಂದೀಪ್, ಪಿಡಿಓ ಪ್ರಶಾಂತ್ ಶೆಟ್ಟಿ, ಕಾರ್ಯದರ್ಶಿ ಶೇಖರ್, ಮತ್ತಿತರರು ಈ ಸಂದರ್ಭದಲ್ಲಿದ್ದರು.

Related Posts

Leave a Reply

Your email address will not be published.