ಮೂಡುಬಿದರೆಯಲ್ಲಿ ಎಳ್ಳಮವಾಸ್ಯೆ ಪ್ರಯುಕ್ತ ತೀರ್ಥಸ್ನಾನ

ಮೂಡುಬಿದಿರೆ: ಎಳ್ಳಮವಾಸ್ಯೆಯ ಪ್ರಯುಕ್ತ ಹನ್ನೆರಡು ಕವಲಿನಲ್ಲಿ ಸಾವಿರಾರು ಭಕ್ತರು ತೀರ್ಥಸ್ಥಾನ ಮಾಡಿದರು.
ಮೂಡುಬಿದಿರೆಯಿಂದ ಸುಮಾರು 8 ಕಿ.ಮೀ ದೂರದಲ್ಲಿರುವ ತಾಕೊಡೆಯ ಬಳಿಯ ಹನ್ನೆರಡು ಕವಲಿನಲ್ಲಿ ಭಕ್ತರು ತೀರ್ಥಸ್ನಾನ ಮಾಡಿ ನಂತರ ಶ್ರೀ ಪಂಚಲಿಂಗೇಶ್ವರ ದೇವಾಲಯದಲ್ಲಿ ಹಣ್ಣುಕಾಯಿ ಮಾಡಿ, ಪೂಜೆ ಸಲ್ಲಿಸಿ ತದ ನಂತರ ನದಿಯ ನಡುವಿನಲ್ಲಿರುವ ಪಂಚ ಮಹಾಲಿಂಗೇಶ್ವರ ದೇವಾಲಯಕ್ಕೆ ಪೂಜೆಗೈದು ನದಿಯಲ್ಲಿ ದಾನ ಬಿಟ್ಟು ದೇವರ ಕೃಪೆಗೆ ಪಾತ್ರರಾಗುತ್ತಾರೆ.

ಈ ದೇವಾಲಯದಲ್ಲಿ ವರ್ಷಾಂಪ್ರತಿಯು ಭಕ್ತರು ಮುಂಜಾನೆ 5 ಗಂಟೆಗೆ ಎಳ್ಳಮಾವಾಸ್ಯೆ ಸ್ನಾನಕ್ಕೆ ಬರಲಾರಂಭಿಸಿದರೆ ನಿರಂತರವಾಗಿ ದೂರದ ಊರುಗಳಿಂದ ಭಕ್ತಾಧಿಗಳು ಬಂದು ತಮ್ಮ ಕಷ್ಟ-ಕಾರ್ಪಣ್ಯಗಳನ್ನು ದೂರ ಮಾಡೆಂದು ಭಕ್ತಿಯಿಂದ ಪೂಜೆ ಸಲ್ಲಿಸುತ್ತಾರೆ. ಈ ದೇವಾಲಯದ ವಿಶೇಷತೆಯೇನೆಂದರೆ ಈ ದೇವಾಲಯದ ಸುತ್ತಲೂ ನದಿಗಳು ಹರಿಯುತ್ತಿರುವುದರಿಂದ ನಡುವಿನಲ್ಲಿ ಪಂಚ ಲಿಂಗಗಳನ್ನೊಳಗೊಂಡ ದೇಗುಲವಿದೆ. ಇಲ್ಲಿ ಮುಡಿ ತೆಗಿಯುವ ಕಾರ್ಯವೊಂದನ್ನು ಬಿಟ್ಟು ಎಲ್ಲಾ ಕಾರ್ಯಗಳು ನಡೆಯುತ್ತದೆ.

ಈ ದೇವಾಲಯವು ತೀರಾ ಹಳ್ಳಿಯ ನಡುವೆ ಇರುವುದರಿಂದ ಇಲ್ಲಿನ ಕಾರಣಿಕತೆಯ ಕುರಿತು ಜನರಿಗೆ ಅಷ್ಟೊಂದು ಮಾಹಿತಿ ತಿಳಿದಿಲ್ಲದಿದ್ದರೂ, ಇಲ್ಲಿ ಬಂದು ತಮ್ಮ ಕೋರಿಕೆಯನ್ನು ಈಡೇರಿಸಿಕೊಂಡವರ ಮಾತಿನಿಂದ ಇಲ್ಲಿ ಯಾವುದೇ ಪ್ರಚಾರವಿಲ್ಲದಿದ್ದರೂ ಹೆಚ್ಚು ಭಕ್ತಾಧಿಗಳು ಆಗಮಿಸುತ್ತಿದ್ದಾರೆ. ಇದೀಗ ಈ ದೇವಾಲಯದ ಜೀರ್ಣೋದ್ಧಾರ ಕೆಲಸಗಳು ನಡೆಯುತ್ತಿದೆ
