ಕಡಂದಲೆ : ವಿದ್ಯುತ್ ಸಬ್ ಸ್ಟೇಶನ್ , ಗ್ರಾಮಸ್ಥರಿಗೆ ಸುಳ್ಳು ಮಾಹಿತಿ ನೀಡಿ ಸರ್ವೆ ನಡೆಸಿದ್ದು ಯಾಕೆ

ಮೂಡುಬಿದಿರೆ: ಪಾಲಡ್ಕ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಡಂದಲೆ ಗ್ರಾಮದಲ್ಲಿ 400/220 ಕೆ.ವಿ ವಿದ್ಯುತ್ ಸ್ಥಾಪನೆಯ ಕುರಿತು ಈಗಾಗಲೇ ಪಂಚಾಯತ್‍ಗೆ ಮಾಹಿ ತಿಯನ್ನು ನೀಡಿದ್ದೇವೆ ಎಂದು ಸುಳ್ಳು ಮಾಹಿತಿಯನ್ನು ನೀಡಿ ಪಂಚಾಯತ್‍ನ ಅಭಿವೃದ್ಧಿ ಅಧಿಕಾರಿ, ಅಧ್ಯಕ್ಷರು, ಸದಸ್ಯರ ಹಾಗೂ ಗ್ರಾಮಸ್ಥರ ಯಾರ ಗಮನಕ್ಕೂ ಬಾರದೇ ಜನ ವಾಸ್ತವ್ಯವಿರುವ ಪ್ರದೇಶ, ಕೃಷಿ ಭೂಮಿಯಲ್ಲಿ ವಿದ್ಯುತ್ ಸಬ್ ಸ್ಟೇಶನ್ ಅನುಷ್ಠಾನಗೊಳಿಸಲು ಕೆ.ಪಿ.ಟಿ.ಸಿ.ಎಲ್‍ನ ಇಂಜಿನಿಯರ್‍ಗಳು ಈಗಾಗಲೇ ಸರ್ವೇಯನ್ನು ನಡೆಸಿದ್ದೀರಿ. ಗ್ರಾಮಸ್ಥರಿಗೆ ಸರಿಯಾದ ಮಾಹಿತಿಯನ್ನು ನೀಡದೇ ಏಕೆ ಸುಳ್ಳು ಮಾಹಿತಿಯನ್ನು ನೀಡಿ ಸರ್ವೇಯನ್ನು ನಡೆಸಿದ್ದೀರಿ ಎಂದು ಪಾಲಡ್ಕ ಪಂಚಾಯತ್ ವ್ಯಾಪ್ತಿಯ ಗ್ರಾಮಸ್ಥರು ಕೆ.ಪಿ.ಟಿ.ಸಿ.ಎಲ್ ನ ಎಕ್ಸಿಕ್ಯುಟಿವ್ ಇಂಜಿನಿಯರ್‍ಗಳನ್ನು ತರಾಟೆಗೆ ತೆಗೆದುಕೊಂಡ ಘಟನೆ ಗುರುವಾರ ಪಾಲಡ್ಕದ ಪೂಪಾಡಿಕಲ್ಲಿನ ಬೃಹ್ಮಶ್ರೀ ನಾರಾಯಣಗುರು ಸಭಾಭವನದಲ್ಲಿ ನಡೆದ ವಿಶೇಷ ಗ್ರಾಮಸಭೆಯಲ್ಲಿ ನಡೆದಿದೆ.

ಕೆಪಿಟಿಸಿಎಲ್ ಎಕ್ಸಿಕ್ಯೂಟಿವ್ ಎಂಜಿನಿಯರ್ ಗಂಗಾಧರ ಯೋಜನೆಯ ಕುರಿತು ವಿವರಿಸಿದರು. ಯೋಜನೆ ಅನುಷ್ಠಾನದಿಂದ ಅವಿಭಜಿತ ಜಿಲ್ಲೆಯಲ್ಲಿ ಆಗುತ್ತಿರುವ ವಿದ್ಯುತ್ ಪೂರೈಕೆ ನಿಯಂತ್ರಿಸಬಹುದು. ಕಾರ್ಕಳ, ಬಜ್ಪೆ ಮತ್ತು ಕಾವೂರಿಗೆ ವಿದ್ಯುತ್ ಪೂರೈಸಲಾಗುವುದು. ಕಡಂದಲೆಯ ಕಲ್ಲೋಳಿಯಿಂದ 4.5 ಕಿ.ಮಿ. ಲೈ ನ್ ಎಳೆಯಲಾಗುವುದು, ಮಲ್ಟಿ ಸರ್ಕ್ಯೂಟ್ ಅಳವಡಿಸಲಾಗುವುದು. ಯುಪಿಸಿಎಲ್ ಲೈನ್‍ಗೆ ಸ0ಪರ್ಕ ನೀಡಲಾಗುವುದು. ಒಟ್ಟು ಯೋಜನೆಗೆ ಟೆಂಡರ್ ಆಗಿದೆ. ಯೋಜನೆ ಕುರಿತು ಪೂರ್ಣ ಮಾಹಿತಿಯನ್ನು ಮುಂದಿನ ಸಭೆಯಲ್ಲಿ ನೀಡುತ್ತೆವೆ ಎಂದು ಹೇಳಿದರು.

ಗ್ರಾಮಸ್ಥರೊಬ್ಬರು ಸಂಸದ ನಳಿನ್ ಕುಮಾರ್ ಅವರ ಹೆಸರನ್ನು ಪ್ರಸ್ತಾಪಿಸುವ ಸಂದರ್ಭ ಜಿ.ಪಂ. ಮಾಜಿ ಅಧ್ಯಕ್ಷ, ದ.ಕ. ಹಾಲು ಒಕ್ಕೂಟದ ಅಧ್ಯಕ್ಷ ಕೆ.ಪಿ. ಸುಚರಿತ ಶೆಟ್ಟಿ, ಅವರು ಗ್ರಾಮಸ್ಥರ ಪರವಾದ ನಡೆಯುವ ಈ ವಿಶೇಷ ಗ್ರಾಮಸಭೆಯಲ್ಲಿ ರಾಜಕೀಯ ವ್ಯಕ್ತಿಗಳ ಹೆಸರು ಉಲ್ಲೇಖಿಸಿ ಸಭೆಯನ್ನು ರಾಜಕೀಯ ಆಟಕ್ಕೆ ಬಳಸಿಕೊಳ್ಳಬೇಡಿ ಎಂದು ಎಚ್ಚರಿಸಿದರು.ರಿಗೆ ಅನ್ಯಾಯವಾದರೆ ನಾನು ಬಿಡುವುದಿಲ್ಲ. ಊರಿಗೆ ಒಳ್ಳೆಯದಾಗುವುದಾದರೆ ಮಾತ್ರ ಯೋಜನೆ’ ಬರಲಿ ಅವರು ಹೇಳಿದರು. ಜಿಪಂ ಮಾಜಿ ಸದಸ್ಯೆ ಸುನೀತಾ ಎಸ್. ಶೆಟ್ಟಿ ಅವರೂ ದ ನಿಗೂಡಿಸಿದರು. ಗ್ರಾಪಂ ಅಧ್ಯಕ್ಷ ದಿನೇಶ್ ಕಾಂಗ್ಲಾಯಿ ಅಧ್ಯಕ್ಷತೆ ವಹಿಸಿದ್ದರು. ಕೆಪಿಟಿಸಿಎಲ್ ಸಹಾಯಕ ಇ.ಇ ಶ್ರೀನಾಥ್ ಸಹಿತ ಇತರ ಅಧಿಕಾರಿಗಳು, ಉಪಾಧ್ಯಕ್ಷ ಸುಕೇಶ್ ಶೆಟ್ಟಿ ಕೇಮಾರು, ಸದಸ್ಯರು,ಆ?ಯಂಡ್ರ್ಯೂ ಡಿಸೋಜ, ಓಸ್ವಾಲ್ಡ್ , ಪ್ರವೀಣ್ ಸಿಕ್ವೇರಾ ಮೊದಲಾದವರು. ಚರ್ಚೆಯಲ್ಲಿ ಭಾಗವಹಿಸಿದರು.

Related Posts

Leave a Reply

Your email address will not be published.