ಮೂಡುಬಿದಿರೆ : ಕುಂಬಳದಾಳ್ ನೆರವಂಡ ತಂಗಮ್ಮ ನಿಧನ

ಮೂಡುಬಿದಿರೆ : ಮೂಲತ: ಕೊಡಗಿನ ಮೂರ್ನಾಡ್ ನಿವಾಸಿ ಕುಂಬಳದಾಳ್ ನೆರವಂಡ ತಂಗಮ್ಮ (88) ಶನಿವಾರ ರಾತ್ರಿ ಮೂಡುಬಿದ್ರಿ ಆಳ್ವಾಸ್ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾರೆ. ಆಳ್ವಾಸ್ ಸಮೂಹ ಸಂಸ್ಥೆಯ ಉದ್ಯೋಗಿ ಮೋಹನ್ ಭೋಪಯ್ಯ ಸೇರಿದಂತೆ 3ಗಂಡು 1ಹೆಣ್ಣು ಮಗಳು ಸಹಿತ ಅಪಾರ ಬಂಧು ವರ್ಗವನ್ನು ಅಗಲಿದ್ದಾರೆ. ಅವರ ಪಾರ್ಥಿವ ಶರೀರವನ್ನು ಮೂರ್ನಾಡಿನ ನಿವಾಸದಲ್ಲಿ ಮಧ್ಯಾಹ್ನ 1 ಗಂಟೆಯವರೆಗೆ ಇರಿಸಲಾಗಿದ್ದು ಮಧ್ಯಾಹ್ನ 2 ಗಂಟೆಗೆ ಕೊಡವ ಸಮಾಜ ಮಡಿಕೇರಿಯ ಸ್ಮಶಾನದಲ್ಲಿ ಅಂತ್ಯಸಂಸ್ಕಾರವನ್ನು ಕೊಡವ ಸಂಸ್ಕಾರದಂತೆ ನಡೆಸಲಾಯಿತು.