ಬೆಳುವಾಯಿಯಲ್ಲಿ ತಹಶೀಲ್ದಾರ್ ಗ್ರಾಮ ವಾಸ್ತವ್ಯ: ಹಲವು ಸಮಸ್ಯೆಗಳು ಇತ್ಯರ್ಥ

ಮೂಡುಬಿದಿರೆ: ಇಲ್ಲಿನ ತಾಲೂಕು ತಹಶೀಲ್ದಾರ್ ತಾಲೂಕು ಸತ್ಯಪ್ಪ ಸಚ್ಚಿದಾನಂದ ಕುಚನೂರು ಅವರು ಬೆಳುವಾಯಿ ಗ್ರಾಮ ಪಂಚಾಯತ್‌ನಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳೊಂದಿಗೆ ಪಂಚಾಯತ್ ಸಭಾಂಗಣದಲ್ಲಿ ಗ್ರಾಮ ವಾಸ್ತವ್ಯ ಹೂಡಿದರು.

ಪಂಚಾಯತ್ ಅಧ್ಯಕ್ಷೆ ಸುಶೀಲಾ ಅವರು ಗ್ರಾಮ ವಾಸ್ತವ್ಯ ಕಾರ್ಯಕ್ರಮವನ್ನು ಉದ್ಘಾಟಿಸಿದರು.ಪಂಚಾಯತ್‌ನ ಮಾಜಿ ಅಧ್ಯಕ್ಷ ರಾಘು ಪೂಜಾರಿ ಮಾತನಾಡಿ, ಮನೆಗಳ ಬಳಿ ಮರಗಳಿಲ್ಲದಿದ್ದರೂ ಡೀಮ್ಸ್ ಫಾರೆಸ್ಟ್ ಎಂದು ಪಟ್ಟಿಯನ್ನು ಕೊಟ್ಟಿದ್ದಾರೆ, ಇದಲ್ಲದೇ ಅಕ್ರಮ ಸಕ್ರಮ ಜಾಗದಲ್ಲಿ ಜನರು ಮನೆ ನಿರ್ಮಿಸಿ ವಾಸಿಸುತ್ತಿದ್ದು ಹಕ್ಕು ಪತ್ರ ಸಿಗದೇ ಪರದಾಡುವಂತಾಗಿದೆ. ನವಗ್ರಾಮದಲ್ಲಿ ೨೪ ಮನೆ ನಿರ್ಮಿಸಿ ಫಲಾನುಭವಿಗಳು ಆ ಮ ನಗಳಲ್ಲಿ ವಾಸಿಸುತ್ತಿದ್ದು, ಇಂದಿಗೂ ಅವರಿಗೆ ಹಕ್ಕುಪತ್ರ ಸಿಗದೇ ಗ್ರಾಮಸಭೆಗೆ ಬಂದು ಹೋಗುವಂತಾಗಿದೆ ಏನಃ ಇಷ್ಟೂ ವರ್ಷಗಳಾದರೂ ಅವರಿಗೆ ಹಕ್ಕುಪತ್ರ ನೀಡಿಲ್ಲ ಎಂದು ತಹಶೀಲ್ದಾರ್ ಗಮನಕ್ಕೆ ತಂದರು.

ಇದಕ್ಕುತ್ತರಿಸಿದ ತಹಶೀಲ್ದಾರ್ ಗ್ರಾಮಸ್ಥರ ಯಾವುದೇ ಕುಂದು ಕೊರತೆಗಳಿದ್ದಲ್ಲ ಅಹವಾಲುಗಳಲ್ಲಿ ಸಲ್ಲಿಸಿ ನಿಮ್ಮ ಯಾವುದೇ ತೊಂದರೆಗಳದ್ದಲ್ಲ ತಮ್ಮ ಗಮನಕ್ಕೆ ತಂದರೆ ಸಾಧ್ಯವಾದಷ್ಟು ಇಲ್ಲಿಯೇ ಸಮಸ್ಯೆಯನ್ನು ಬಗೆಹರಿಸಲಾಗುದು. ನವಗ್ರಾಮದಲ್ಲಿ ಮನೆ ಕಟ್ಟಿ ಕುಳಿತುಕೊಂಡಿರುವ 24ಕುಟುಂಬಗಳಿಗೆ ಮುಂದಿನ ದಿನಗಳಲ್ಲಿ ೯೪ ಸಿ ಯಲ್ಲಿ ಹಕ್ಕು ಪತ್ರಗಳನ್ನು ನೀಡುವ ಬಗ್ಗೆ ಭರವಸೆ ನೀಡಿದರು.

ಪಂಚಾಯತ್ ಸದಸ್ಯ ಸೂರಜ್ ಆಳ್ವ ಮಾತನಾಡಿ ಬೆಳುವಾಯಿ ಗ್ರಾಮ ಪಂಚಾಯತ್ ಅಮೃತ್ ಯೋಜನೆಗೆ ಆಯ್ಕೆಯಾಗಿದೆ. ಆದರೆ ಇಲ್ಲಿ ಈಗಾಗಲೇ ಮನೆ ಕಟ್ಟಿರುವಂತವರಿಗೆ ಹಕ್ಕುಪತ್ರ ಇನ್ನೂ ಸಿಕ್ಕಿಲ್ಲ. ಅದಲ್ಲದೇ ಇತ್ತೀಚಿಗೆ ನಂತರ ಗ್ರಾಮಸಭೆಯಲ್ಲಿ ಹೌಸ್ ಸೈಟ್‌ಗಾಗಿ ಬಹಳ ಜನ ಅರ್ಜಿಯನ್ನು ಸಲ್ಲಿಸಿದ್ದೆವು ಆದರೆ ಇದನ್ನೂ ಕಾದಿರಿಸಲು ಕೂಡ ಡೀಮ್ಡ್ ಫಾರೆಸ್ಟ್ ಸಮಸ್ಯೆ ಇದ್ದು ಸಮಸ್ಯೆಯಿಂದ ಮುಕ್ತಿ ಯಾವಾಗ ಎಂದು ಪ್ರಶ್ನಿಸಿದರು. ಸರ್ಕಾರದಿಂದ ಈಗಾಗಲೇ ಹೊಸದಾದ ಪಟ್ಟಿಯೊಂದು ರಚನೆಯಾಗಿದ್ದು ಅದರಲ್ಲಿ ಡೀಮ್ಡ್ ಪಾರೆಸ್ಟ್ ನಿಂದ ಕೈಬಿಟ್ಟಿದ್ದರೆ ಹಕ್ಕು ಪತ್ರ ಕೊಡಬಹುದೆಂದು ತಿಳಿಸಿದರು. ಸದಾಶಿವ ಶೆಟ್ಟಿ ಅವರು ಮಾತನಾಡಿ ಖಂಡಿಗೆ ಎಂಬಲ್ಲಿ ರಸ್ತೆ ಸಮಸ್ಯೆ ಇದೆ. ಇಲ್ಲಿ ಜಾಗವನ್ನು ಅತಿಕ್ರಮಣ ಮಾಡಲಾಗಿದೆ ಎಂದು ತಹಶೀಲ್ದಾರ್ ಗಮನಕ್ಕೆ ತಂದರು. ಸಮಸ್ಯೆಯನ್ನು ಆಲಿಸಿದ ತಹಶೀಲ್ದಾರ್ ಸತ್ಯಪ್ಪ ಕುಚನೂರು ಅವರು ಸ್ಥಳಕ್ಕೆ ನೀಡಿ ಪರಿಶೀಲನೆ ನಡೆಸಿದಾಗ, ಆರೋಪ ಸತ್ಯಕ್ಕೆ ದೂರವಾಗಿದೆ ಎಂದು ಪ್ರಕರಣವನ್ನು ಕೈ ಬಿಟ್ಟರು.

ಸಂದರ್ಭದಲ್ಲಿ ಉಪ ತಹಶೀಲ್ದಾರ್ ರಾಮ್, ತಿಲಕ್, ಪೊಲೀಸ್ ನಿರೀಕ್ಷಕ ನಿರಂಜನ್ ಕುಮಾರ್, ವಿವಿಧ ಇಲಾಖೆಯ ಅಧಿಕಾರಿಗಳು, ಪಂಚಾಯತ್ ಸದಸ್ಯರುಗಳು ಉಪಸ್ಥಿತರಿದ್ದರು.

Related Posts

Leave a Reply

Your email address will not be published.