ರಾಷ್ಟ್ರೀಯ ಶಿಕ್ಷಣ ನೀತಿಯಿಂದ ರಾಷ್ಟ್ರೀಯತೆಯ ಅರಿವು ಮೂಡಲು ಸಾಧ್ಯ : ಶಾಸಕ ಉಮಾನಾಥ ಕೋಟ್ಯಾನ್

ಮೂಡುಬಿದಿರೆ : ಪ್ರತಿಯೊಬ್ಬ ಮಗುವಿನಲ್ಲೂ ಅದರದ್ದೇ ಆದ ಪ್ರತಿಭೆ ಇರುತ್ತದೆ ಅದನ್ನು ಗುರುತಿಸಿ ಹೊರಗೆಳೆಯುವ ಪ್ರಯತ್ನವನ್ನು ಶಿಕ್ಷಕರು ಮಾಡಬೇಕಾಗಿದೆ. ನಮ್ಮ ಉಸಿರು ಇರುವವರೆಗೆ ನಾವು ವಿದ್ಯಾರ್ಥಿಗಳೇ. ಹಾಗಾಗಿ ನಾವು ನಮ್ಮ ಜವಾಬ್ದಾರಿಯನ್ನು ಅರಿತು ಕೆಲಸ ಮಾಡಿದಾಗ ಸಮಾಜಕ್ಕೆ ಉತ್ತಮವಾದ ಕೊಡುಗೆಯನ್ನು ನೀಡಿದಂತ್ತಾಗುತ್ತದೆ. ಅಲ್ಲದೆ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯ ಅನುಷ್ಠಾನದಿಂದ ರಾಷ್ಟ್ರೀಯತೆಯ ಅರಿವು ಮೂಡಲು ಸಾಧ್ಯ ಎಂದು ಶಾಸಕ ಉಮಾನಾಥ ಎ. ಕೋಟ್ಯಾನ್ ಹೇಳಿದರು.

ದ.ಕ.ಜಿ.ಪಂ.ಶಾಲಾ ಶಿಕ್ಷಣ ಮತ್ತು ಸಾಕ್ಷರತ ಇಲಾಖೆ, ಮೂಡುಬಿದಿರೆ ತಾಲೂಕು ಶಿಕ್ಷಕರ ದಿನಾಚರಣ ಸಮಿತಿ ಆಶ್ರಯದಲ್ಲಿ ಇಲ್ಲಿನ ಸೌಟ್ಸ್ ಗೈಡ್ಸ್ ಕನ್ನಡ ಭವನದಲ್ಲಿ ಸೋಮವಾರ ನಡೆದ ‘ಡಾ. ಎಸ್. ರಾಧಾಕೃಷ್ಣನ್ ಜನ್ಮ ಜಯಂತಿ ಮತ್ತು ಶಿಕ್ಷಕರ ದಿ ನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

moodabidre teachers day

ಕಾರ್ಕಳ ಶ್ರೀ ಭುವನೇಂದ್ರ ಕಾಲೇಜಿನ ಪ್ರಾಚಾರ್ಯ ಡಾ. ಮಂಜುನಾಥ ಕೋಟ್ಯಾನ್ ದಿ ಕೂಚಿ ಭಾಷಣ ಮಾಡಿದರು.

ಇದೇ ವೇಳೆ ನಿವೃತ್ತ ಶಿಕ್ಷಕರು, ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಮಾಡಿದ ಶಿಕ್ಷಕರಿಗೆ ಸನ್ಮಾನಿಸಿ ಗೌರವಿಸಲಾಯಿತು.

moodabidre teachers day

ಮುಖ್ಯ ಅತಿಥಿಯಾಗಿ ಪುರಸಭಾ ಅಧ್ಯಕ್ಷ ಪ್ರಸಾದ್ ಕುಮಾರ್, ವಿಶೇಷ ಆಹ್ವಾನಿತರಾಗಿ ಮಾಜಿ ಸಚಿವ ಕೆ. ಅಭಯಚಂದ್ರ, ದ.ಕ. ಹಾಲು ಒಕ್ಕೂಟದ ಅಧ್ಯಕ್ಷ ಕೆ.ಪಿ. ಸುಚರಿತ ಶೆಟ್ಟಿ, ಡಯಟ್ ಉಪನ್ಯಾಸಕರಾದ ಶಂಕರಪ್ಪ, ವೇದಾವತಿ, ಪೂರ್ವಪ್ರಭಾರ ಬಿಇಓ ಡಾ. ರಾಜಶ್ರೀ ಚಿ. ಭಾಗವಹಿಸಿದ್ದರು. ವಿವಿಧ ಶಿಕ್ಷಕರ ಸಂಘಟನೆಗಳ ಅಧ್ಯಕ್ಷರಾದ ನಾಗೇಶ್ ಎಸ್. ಶಶಿಕಾಂತ ವೈ., ರಾಮಕೃಷ್ಣ ಶಿರೂರು, ಸುನಿಲ್ ಮಿರಾಂದ, ಶಿವಾನಂದ ಕಾಯ್ಕಿಣಿ, ಜೋನ್ ರೊನಾಲ್ಡ್ ಡಿ’ಸೋಜ, ದೊರೆಸ್ವಾಮಿ, ಸೀಮಾ ನಾಯಕ್ ಉಪಸ್ಥಿತರಿದ್ದರು.

Related Posts

Leave a Reply

Your email address will not be published.