ಮನೆಗೆ ನುಗ್ಗಿ ಒಂಟಿ ಮಹಿಳೆಗೆ ಹಲ್ಲೆ ನಡೆಸಿ ಚಿನ್ನಾಭರಣ ಸುಲಿಗೆ ಪ್ರಕರಣ: ಮೂವರ ಬಂಧನ
ಮೂಡುಬಿದಿರೆ ತಾಲೂಕಿನ ಅಶ್ವಥಪುರದ ಬೇರಿಂಜೆ ಗುಡ್ಡ ಎಂಬಲ್ಲಿ ಒಂಟಿ ಮಹಿಳೆ ಕಮಲ ಅವರ ಮನೆಗೆ ಕಳೆದ 15 ದಿನಗಳ ಹಿಂದೆ ನುಗ್ಗಿ ಕುತ್ತಿಗೆ ಹಿಡಿದು ಚಿನ್ನಾಭರಣ ಕಳವು ಮಾಡಿದ ಮೂವರು ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಅಶ್ವತ್ಥಪುರದ ನಿವಾಸಿಗಳಾದ ದಿನೇಶ್ ಪೂಜಾರಿ, ಸುಕೇಶ್ ಪೂಜಾರಿ ಹಾಗೂ ಹರೀಶ್ ಪೂಜಾರಿ ಬಂಧಿತ ಆರೋಪಿಗಳು. ಅಂಗನವಾಡಿ ಸಹಾಯಕಿಯಾಗಿ ದುಡಿಯುತ್ತಿದ್ದ ಕಮಲ ಒಂಟಿಯಾಗಿ ವಾಸವಿದ್ದು. ಇದರ ಮಾಹಿತಿ ಇದ್ದ ಆರೋಪಿಗಳು ಕಳೆದ ತಿಂಗಳು 2 ಜನ ಮಂಕಿಕ್ಯಾಪ್ ಹಾಕಿ ಕೈಗೆ ಹ್ಯಾಂಡ್ ಗೌಸ್ ಹಾಕಿ ಕೈಯಲ್ಲಿ ತಲವಾರು ಹಿಡಿದು ಕೊಂಡು ಬಂದು ಕಮಲರವರ ಕುತ್ತಿಗೆ ಅದುಮಿ ಹಿಡಿದು ಹಲ್ಲೆ ನಡೆಸಿ ಕುತ್ತಿಗೆಯಲ್ಲಿದ್ದ ಚಿನ್ನದ ಕರಿಮಣಿ ಸರ ಮತ್ತು ಚಿನ್ನದ 2 ಬಳೆಗಳನ್ನು ಬಲವಂತದಿಂದ ತೆಗೆದು ಸುಲಿಗೆ ಮಾಡಿದ್ದು, ಈ ಬಗ್ಗೆ ಮೂಡಬಿದ್ರೆ ಠಾಣೆಯಲ್ಲಿ ಪ್ರಕಣ ದಾಖಲಾಗಿತ್ತು.
ಈ ಪ್ರಕರಣವು ಗಂಭೀರ ಪ್ರಕರಣವಾದ್ದರಿಂದ ಈ ಪ್ರಕರಣದ ಪತ್ತೆಗೆ ಬಗ್ಗೆ ಸಿಸಿಬಿ ಘಟಕದ ವಿಶೇಷ ತಂಡ ರಚನೆ ಮಾಡಿದ್ದು, ಸಿಸಿಬಿ ಘಟಕದ ವಿಶೇಷ ತಂಡದವರು ಆರೋಪಿಗಳ ಬಗ್ಗೆ ಮಾಹಿತಿ ಸಂಗ್ರಹಿಸಿಕೊಂಡು ಪತ್ತೆಗೆ ಬಲೆ ಬೀಸಿದ್ದರು.ಸುಲಿಗೆ ಮಾಡಿದ ಆರೋಪಿಗಳು 3 ಜನ ಸೇರಿ ಚಿನ್ನಾಭರಣಗಳನ್ನು ಮಾರಾಟ ಮಾಡಲು ಮಂಗಳೂರಿಗೆ ಬರುತ್ತಿದ್ದಾರೆಂದು ಮಾಹಿತಿ ಪಡೆದು 3 ಜನ ಆರೋಪಿಗಳನ್ನು ಕುಲಶೇಖರ ಚರ್ಚ್ ಗೇಟ್ ಬಳಿ ಸಿಸಿಬಿ ಪೆÇಲೀಸರು ದಸ್ತಗಿರಿ ಮಾಡಿ ಅವರಿಂದ ಸುಲಿಗೆ ಮಾಡಿದ ಚಿನ್ನಾಭರಣಗಳನ್ನು ಮತ್ತು ಕೃತ್ಯಕ್ಕೆ ಬಳಸಿದ 2 ಸ್ಕೂಟರ್ ಮತ್ತು 3 ಮೊಬೈಲ್ ಫೆÇೀನ್, 1 ತಲವಾರು, 2 ಮಂಕಿಕ್ಯಾಪ್ ಗಳನ್ನು ಸ್ವಾಧೀನ ಪಡಿಸಿಕೊಂಡಿದ್ದಾರೆ.
ಫಿರ್ಯಾದಿದಾರರಾದ ಒಂಟಿ ಮಹಿಳೆ ಕಮಲಾರವರಿಗೆ ಹಿಂದೆ ಮುಂದೆ ಯಾರೂ ಸಂಬಂಧಿಕರಿಲ್ಲವೆಂದು, ಅವರಿಗೆ ಹಲ್ಲೆ ನಡೆಸಿ, ಸುಲುಗೆ ಮಾಡಿದರೆ ಯಾರೂ ಕೂಡ ಪೆÇಲೀಸ್ ಠಾಣೆಗೆ ದೂರು ನೀಡಲು ಬರುವುದಿಲ್ಲವೆಂದು. ನಡೆದು ಸುಲಿಗೆ ಯಾದ ನಂತರ ಸಹಾಯ ಮಾಡುವ ಹಾಗೆ ನಾಟಕಮಾಡಿಕೊಂಡು ಈ ಕೃತ್ಯ ಎಸಗಿರುತ್ತಾರೆ. ಅರೋಪಿಗಳಾದ ದಿನೇಶ್ ಪೂಜಾರಿ, ಸುಕೇಶ್ ಪೂಜಾರಿ ಮತ್ತು ಹರೀಶ್ ಪೂಜಾರಿ ರವರ ವಿರುದ್ಧ ಮೂಡುಬಿದಿರೆ ಪೆÇಲೀಸ್ ಠಾಣೆಯಲ್ಲಿ ಅಡಿಕೆ ಕಳವು ಪ್ರಕರಣವು ದಾಖಲಾಗಿದ್ದು, 3 ಜನ ಕೂಡ ಸದ್ರಿ ಪ್ರಕರಣದಲ್ಲಿ ಆರೋಪಿಗಳಾಗಿರುತ್ತಾರೆ. ಆರೋಪಿಗಳ ಪೈಕಿ ಸುಕೇಶ್ ಪೂಜಾರಿ ಎಂಬಾತನ ವಿರುದ್ಧ ಮೂಡಬಿದ್ರೆ ಪೆÇಲೀಸ್ ಠಾಣೆಯಲ್ಲಿ ಪೋಸ್ಕೊ ಪ್ರಕರಣದ ದಾಖಲಾಗಿದ್ದು, ಮಣಿಪಾಲ ಪೆÇಲೀಸ್ ಠಾಣೆಯಲ್ಲಿ ಕಲಂ:307 ಐಪಿಸಿ ಯಂತೆ ಕೊಲೆ ಯತ್ನ ಪ್ರಕರಣವು ದಾಖಲಾಗಿದ್ದುಈ ಎರಡೂ ಪ್ರಕರಣದಲ್ಲೂ ಕೂಡ ಸುಕೇಶ್ ಪೂಜಾರಿ ಆರೋಪಿಯಾಗಿರುತ್ತಾನೆ.