ಮೂಡುಬಿದಿರೆ : ಜಿಲ್ಲಾ ಮಟ್ಟದ ಭಾಷಣ ಸ್ಪರ್ಧೆ: ಜೈನ ಪ.ಪೂ.ಕಾಲೇಜಿನ ಕೃತಿ, ಸಮೀಕ್ಷಾ ಶೆಟ್ಟಿ ಆಯ್ಕೆ
ಮೂಡುಬಿದಿರೆ : ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕರ್ನಾಟಕ ಸರಕಾರದ ವತಿಯಿಂದ ಸುವರ್ಣ ಕರ್ನಾಟಕ ಸಂಭ್ರಮ 50ರ ಪ್ರಯುಕ್ತ ಮೂಡುಬಿದಿರೆ ತಾಲೂಕು ಮಟ್ಟದ ಭಾಷಣ ಸ್ಪರ್ಧೆಯಲ್ಲಿ ಜೈನ ಪದವಿಪೂರ್ವ ಕಾಲೇಜಿನ ಕೃತಿ ಮತ್ತು ಸಮೀಕ್ಷಾ ಶೆಟ್ಟಿ, ವಿಜೇತರಾಗಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
“ಕರ್ನಾಟಕದ ಬಹುತ್ವದ ಸಂಸ್ಕೃತಿಗೆ ಕರಾವಳಿ ಕರ್ನಾಟಕದ ಕೊಡುಗೆಗಳು ಮತ್ತು ಸವಾಲುಗಳು” ಎನ್ನುವ ವಿಚಾರದಲ್ಲಿ ನಡೆದ ಈ ಸ್ಪರ್ಧೆಯಲ್ಲಿ ಹಿರಿಯ ಸಾಹಿತಿ ಸದಾನಂದ ನಾರಾವಿ, ಪತ್ರಕರ್ತ ಹರೀಶ್ ಆದೂರು, ಉಪನ್ಯಾಸಕಿ ಮಲ್ಲಿಕಾ
ಇವರು ನಿರ್ಣಾಯಕ ರಾಗಿ ಭಾಗವಹಿಸಿದ್ದರು.
ಕಾಲೇಜಿನ ಪ್ರಾಂಶುಪಾಲರಾದ ಡಾ. ಪ್ರಭಾತ್ ಬಲ್ನಾಡು ಉಪನ್ಯಾಸಕ, ಉದಯ್, ಪ್ರಶಸ್ತಿ ಹಾಗೂ ಶ್ರೀರಾಮಚಂದ್ರ ಭಟ್ ಇವರು ಉಪಸ್ಥಿತರಿದ್ದರು.