ಮೂಡುಬಿದಿರೆ: ಗ್ಯಾಸ್ ಗೀಸರ್ ಕೆಮಿಕಲ್ ಸ್ಪ್ರೆಡ್: ಉಸಿರುಗಟ್ಟಿ ಮೃತಪಟ್ಟ ಯುವಕ
ಸ್ನಾನಗೃಹದಲ್ಲಿ ಗ್ಯಾಸ್ ಗೀಸರ್ ಕೆಮಿಕಲ್ ಸ್ಪ್ರೆಡ್ ಆಗಿ ಸ್ನಾನಗೃಹದಲ್ಲಿ ಯುವಕನೋರ್ವ ಉಸಿರುಗಟ್ಟಿ ಮೃತಪಟ್ಟ ಘಟನೆ ಭಾನುವಾರ ರಾತ್ರಿ ಕೋಟೆಬಾಗಿಲಿನಲ್ಲಿ ಸಂಭವಿಸಿದೆ.
ಕೋಟೆಬಾಗಿಲಿನ ಪ್ಲಾಟ್ ಒಂದರಲ್ಲಿ ವಾಸವಾಗಿರುವ ದಿ.ಅನ್ಸಾರ್ ಎಂಬವರ ಪುತ್ರ ಶಾರಿಕ್ ( 18) ಎಂಬವನೇ ಮೃತಪಟ್ಟ ಯುವಕ.
ಪ್ಲಾಟ್ ನಲ್ಲಿ ಶಾರಿಕ್ ಮತ್ತು ಆತನ ತಾಯಿ ವಾಸವಾಗಿದ್ದರು.ರಾತ್ರಿ ಶಾರಿಕ್ ಸ್ನಾನಕ್ಕೆಂದು ಹೋಗಿದ್ದ.ಆತ ಸ್ನಾನ ಮುಗಿಸಿಕೊಂಡು ಬರುವಾಗ ಯಾವತ್ತೂ ತಡವಾಗುತ್ತಿತ್ತೆಂದು ಆತನ ತಾಯಿ ಮಲಗಿದ್ದರು.ಆದರೆ ತುಂಬಾ ಹೊತ್ತಾದರೂ ಶಾರಿಕ್ ಹೊರಬರಲಿಲ್ಲ.ರಾತ್ರಿ ಮನೆಗೆ ಬಂದಿದ್ದ ಶಾರಿಕ್ ನ ಸಹೋದರ ಶಾರಿಕ್ ನ ಸುದ್ಧಿ ಇಲ್ಲದ್ದನ್ನು ಗಮನಿಸಿ ಸ್ನಾನಗೃಹದ ಬಾಗಿಲು ಒಡೆದು ನೋಡಿದಾಗ ಈ ದುರ್ಘಟನೆ ಬೆಳಕಿಗೆ ಬಂದಿದೆ.
ಸ್ನಾನಗೃಹದ ತುಂಬಾ ಬಂದ್ ಮಾಡಲಾಗಿದ್ದು ಗ್ಯಾಸ್ ಗೀಸರ್ ನ ಕೆಮಿಕಲ್ ಹೊರಹೋಗದೆ ಅದು ಸ್ಪ್ರೆಡ್ ಆಗಿ ಆತ ಉಸಿರುಗಟ್ಟಿ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ.
ಶಾರಿಕ್ ದ್ವಿತೀಯ ಪಿಯುಸಿ ಮುಗಿಸಿ ಮೂಡುಬಿದಿರೆಯ ಕಾಲೇಜೊಂದರಲ್ಲಿ ಪ್ರಥಮ ವರ್ಷದ ಡಿಗ್ರಿ ವಿದ್ಯಾರ್ಥಿಯಾಗಿದ್ದು ಕಲಿಕೆಯಲ್ಲಿ ಮುಂದಿದ್ದ ವಿದ್ಯಾರ್ಥಿಯಾಗಿದ್ದನೆಂದು ತಿಳಿದು ಬಂದಿದೆ.