ಮೂಡುಬಿದಿರೆ : 2ನೇ ವಷ೯ದ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾಟ

ಮೂಡುಬಿದಿರೆ : ಶ್ರೀ ಇಟಲ ಬಾಕ್ಯಾರ್ ಫ್ರೆಂಡ್ಸ್ ದರೆಗುಡ್ಡೆ ಇದರ ವತಿಯಿಂದ ದಿ |ಬಿ. ಜಯರಾಜ್ ಕೆಲ್ಲಪುತ್ತಿಗೆ ಅರಮನೆ ಇವರ ಸ್ಮರಣಾರ್ಥ 2ನೇ ವರ್ಷದ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾಟ ಶನಿವಾರ ನಡೆಯಿತು.
ರಾಜವರ್ಮ ಬೈಲಂಗಡಿ ಹಾಗೂ ರಾಜೇಂದ್ರ ಬೈಲಂಗಡಿ ಪೆರಿಂಜೆ ಅವರು ಪಂದ್ಯಾಟವನ್ನು ಉದ್ಘಾಟಿಸಿ ಶುಭ ಹಾರೈಸಿದರು.

ದರೆಗುಡ್ಡೆ ಗ್ರಾಮ ಪಂಚಾಯತ್ ನ ಅಧ್ಯಕ್ಷ ಅಶೋಕ್ ಶೆಟ್ಟಿ ಬೇಲೊಟ್ಟು ಅಧ್ಯಕ್ಷತೆಯಲ್ಲಿ ನಡೆದ ಕಾಯ೯ಕ್ರಮದಲ್ಲಿ ಎಸ್ ಎಸ್ ಎಲ್ ಸಿ ಹಾಗೂ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ 85% ಶೇಕಡಾಕ್ಕಿಂತ ಹೆಚ್ಚು ಅಂಕ ಪಡೆದ ದರೆಗುಡ್ಡೆ ಗ್ರಾಮದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.
ದರೆಗುಡ್ಡೆ ಗ್ರಾಮದ 3 ಅಶಕ್ತ ಕುಟುಂಬಗಳಿಗೆ ತಂಡದ ವತಿಯಿಂದ ಸಹಾಯಧನ ನೀಡಲಾಯಿತು.
ದರೆಗುಡ್ಡೆ ಗ್ರಾಮ ಪಂಚಾಯತ್ ಸದಸ್ಯರಾದ ದೀಕ್ಷಿತ್ ಪಣಪಿಲ, ಸುಭಾಷ್ಚಂದ್ರ ಚೌಟ ಉಪಸ್ಥಿತರಿದ್ದರು. ಜಯಕುಮಾರ್ ಶೆಟ್ಟಿ,ಅಶ್ವಥ್ ಕೆ ಪಣಪಿಲ, ಗೋಪಾಲ್ ರಾವ್, ಗೋಪಾಲ್ ಶೆಟ್ಟಿ ನರಂಗೋಟ್ಟು, ನಾರಾಯಣ ದೇವಾಡಿಗ ಉಪಸ್ಥಿತರಿದ್ದರು.
ಸಂದೀಪ್ ಕೆಲ್ಲಪುತ್ತಿಗೆ ಕಾರ್ಯಕ್ರಮ ನಿರೂಪಿಸಿ ಪಂದ್ಯಾಟದ ವೀಕ್ಷಕ ವಿವರಣೆಯನ್ನು ನಿರ್ವಹಿಸಿದರು.
ಪಂದ್ಯಾಕೂಟದ ವಿನ್ನರ್ಸ್ ಆಗಿ ನಮನ ಯುವ ಬಾಂಧವೆರ್ ಕೆಲ್ಲಪುತ್ತಿಗೆ ಹಾಗೂ ಗುತ್ತು ಫ್ರೆಂಡ್ಸ್ ದರೆಗುಡ್ಡೆ ರನ್ನರ್ ಅಪ್ ಪ್ರಶಸ್ತಿಯನ್ನು ಪಡೆದುಕೊಂಡವು.
