ಮೂಡುಬಿದಿರೆ: ಬ್ಯಾಟರಿ ಕಳವು ಪ್ರಕರಣ – 4 ಬ್ಯಾಟರಿ ಸಹಿತ ಇಬ್ಬರು ಆರೋಪಿಗಳ ಬಂಧನ

ಮೂಡುಬಿದಿರೆ: ಕಳೆದ 6 ತಿಂಗಳ ಹಿಂದೆ ನಾಪತ್ತೆ 25 ಬ್ಯಾಟರಿಗಳಲ್ಲಿ ನಾಲ್ಕು ಬ್ಯಾಟರಿ ಸಹಿತ ಇಬ್ಬರು ಆರೋಪಿಗಳನ್ನು ಮೂಡುಬಿದಿರೆ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಕಳೆದ ವಷ೯ ಏ.24ರಂದು ಮೂಡುಬಿದಿರೆಯ ಮಚ್ಲಿ ಹೊಟೇಲ್ ಬಳಿ ಕೆಲಸ ಮಾಡಲೆಂದು ತೋಡಾರು ಪಂಚಶಕ್ತಿ ರಂಜಿತ್ ಪೂಜಾರಿ ಅವರಿಗೆ ಸೇರಿದ ಹಿಟಾಚಿಯನ್ನು ಕೆಲಸ ಮುಗಿಸಿ ಸಂಜೆ ಸುಮಾರು 7 ಗಂಟೆ ಸಮಯದಲ್ಲಿ ನಿಲ್ಲಿಸಿದ್ದು ಮರುದಿನ ಬೆಳಿಗ್ಗೆ 7 ಗಂಟೆಗೆ ಹಿಟಾಚಿಯ ಬಳಿ ಬಂದು ನೋಡಿದಾಗ ಎರಡೂ ಹಿಟಾಚಿಗಳ 4 ಬ್ಯಾಟರಿಗಳನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುವ ಬಗ್ಗೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಇದೀಗ ಪ್ರಕರಣದ ಬಗ್ಗೆ ಕಾಯ೯ಪ್ರವೃತ್ತರಾದ ಮೂಡುಬಿದಿರೆ ಪೊಲೀಸ್ ವೃತ್ತ ನಿರೀಕ್ಷಕ ಸಂದೇಶ್ ಪಿ.ಜಿ. ನೇತೃತ್ವದ ತಂಡವು ಆರೋಪಿಗಳಾದ ಮಂಗಳೂರು ಅಳಪೆ ಗ್ರಾಮದ ಧನುಷ್ ಸನಿಲ್ (31 ವರ್ಷ) ಮತ್ತು ನಂತೂರು ಬಜಾಲ್ ನ ಆಜ್ಮಲ್ (30 ವರ್ಷ) ಎಂಬವರನ್ನು ಬಂಧಿಸಿ ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ ಡಸ್ಟನ್ ಕಂಪೆನಿ ಯ ರೆಡಿಗೋ ಕಾರು ಮತ್ತು ನಾಲ್ಕು ಬ್ಯಾಟರಿಗಳನ್ನು ಸ್ವಾಧೀನ ಪಡಿಸಿಕೊಂಡಿದ್ದು, ಸ್ವಾಧೀನ ಪಡಿಸಿಕೊಂಡ ಸೊತ್ತುಗಳ ಅಂದಾಜು ಮೌಲ್ಯ 2,80,000/- ಆಗಿರುತ್ತದೆ.

ಈ ಪ್ರಕರಣದಲ್ಲಿ ಮಂಗಳೂರು ನಗರದ ಪೊಲೀಸ್ ಆಯುಕ್ತರಾದ ಅನುಪಮ್ ಅಗರ್ವಾಲ್ ಅವರ ಮಾರ್ಗದರ್ಶನದಂತೆ ಐಪಿಎಸ್ ಸಿದ್ದಾರ್ಥ ಗೊಯಲ್ (ಕಾ&ಸು), ಡಿಸಿಪಿ ರವಿಶಂಕರ್ (ಅ & ಸಂ) ಮತ್ತು ಮಂಗಳೂರು ಉತ್ತರ ಉಪ ವಿಭಾಗದ ಎಸಿಪಿ ಶ್ರೀಕಾಂತ್. ಕೆ ಅವರ ನಿರ್ದೇಶನದಂತೆ ಈ ಕಾರ್ಯಚರಣೆ ಆರಂಭಿಸಿದ್ದು ಮೂಡುಬಿದಿರೆ ಠಾಣಾ ಪೊಲೀಸ್ ನಿರೀಕ್ಷಕ ಸಂದೇಶ್ ಪಿ.ಜಿ ರವರ ನೇತೃತ್ವದ ತಂಡದಲ್ಲಿ ಪಿ.ಎಸ್.ಐ ಸಿದ್ದಪ್ಪ ನರನೂರ ಮತ್ತು ಠಾಣಾ ಅಪರಾಧ ವಿಭಾಗದ ಸಿಬ್ಬಂಧಿಯವರಾದ ಮೊಹಮ್ಮದ್ ಇಕ್ಷಾಲ್, ಮೊಹಮ್ಮದ್ ಹುಸೇನ್, ಅಕೀಲ್ ಅಹಮ್ಮದ್, ನಾಗರಾಜ್, ವೆಂಕಟೇಶ್ ಅವರುಗಳು ಕಾರ್ಯಚರಣೆಯಲ್ಲಿ ಪಾಲ್ಗೊಂಡಿದ್ದರು.

ಮೂಡುಬಿದಿರೆಯಲ್ಲಿ ಕಳೆದ ಆರು ತಿಂಗಳ ಹಿಂದೆ ಹಿಟಾಚಿ, ಜೆಸಿಬಿ, ಟಿಪ್ಪರ್ ಗಳಿಂದ 25ಕ್ಕೂ ಅಧಿಕ ಬ್ಯಾಟರಿಗಳು ಕಳವಾಗಿದ್ದರೂ ಪೊಲೀಸರು ಪತ್ತೆ ಮಾಡದಿರುವ ಬಗ್ಗೆ ಕಳೆದ ಬುಧವಾರ ಮಾಧ್ಯಮವು ವರದಿ ಮಾಡಿ ಎಚ್ಚರಿಸಿತ್ತು.
ಈ ಬಗ್ಗೆ ಚಾಲೆಂಜಿಂಗ್ ಆಗಿ ತೆಗೆದುಕೊಂಡ ಮೂಡುಬಿದಿರೆ ಪೊಲೀಸ್ ನಿರೀಕ್ಷಕ ಸಂದೇಶ್ ಪಿ.ಜಿ.ಅವರು ಕಾಯ೯ಪ್ರವೃತ್ತರಾಗಿ ಇಬ್ಬರು ಆರೋಪಿಗಳನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

ಪತ್ತೆಯಾಗದಿರುವ 21 ಬ್ಯಾಟರಿ ಗಳನ್ನು ಕರಗಿಸಲಾಗಿದೆ. ಬ್ಯಾಟರಿ ಕಳವುಗೈಯ್ಯುವ ಎರಡು ತಂಡವಿದ್ದು ಅದರಲ್ಲಿ ಒಂದು ತಂಡವನ್ನು ವಶಕ್ಕೆ ಪಡೆದುಕೊಂಡಿದ್ದು ಇನ್ನೊಂದು ತಂಡವನ್ನು ಆದಷ್ಟು ಬೇಗ ಸೆರೆ ಹಿಡಿಯಲಾಗುವುದು ಎಂದು ಸಂದೇಶ್ ಪಿ.ಜಿ. ತಿಳಿಸಿದ್ದಾರೆ.

Related Posts

Leave a Reply

Your email address will not be published.