ಮೂಡುಬಿದಿರೆ :ಜೆ ಸಿ ಸಪ್ತಾಹ 2024: ಚಿತ್ರಕಲಾ ಸ್ಪರ್ಧೆ
ಮೂಡುಬಿದಿರೆ : ಜೇಸಿ ಸಪ್ತಾಹದಂಗವಾಗಿ ಜೆಸಿಐ ಮೂಡುಬಿದಿರೆ ತ್ರಿಭುವನ್ ಮತ್ತು ಇನ್ನರ್ ವೀಲ್ ಕ್ಲಬ್ ನ ಜಂಟಿ ಆಶ್ರಯದಲ್ಲಿ ಮಾಸ್ತಿಕಟ್ಟೆ ಅರ್ಹತಾ ಸ್ಪೋರ್ಟ್ಸ್ ಅಕಾಡೆಮಿಯಲ್ಲಿ ನ ಚಿತ್ರಕಲಾ ಸ್ಪರ್ಧೆ ನಡೆಯಿತು.
ಎಲ್ ಕೆಜಿಯಿಂದ 7ನೇ ತರಗತಿಯವರೆಗೆ ವಿವಿಧ ವಿಭಾಗದಲ್ಲಿ ನಡೆದ ಸ್ಪರ್ಧೆಯನ್ನು ಇನ್ನರ್ ವೀಲ್ ಅಧ್ಯಕ್ಷೆ ಬಿಂದಿಯಾ ಎಸ್.ಶೆಟ್ಟಿ ಉದ್ಘಾಟಿಸಿದರು.
ಜೆಸಿಐ ನ ಅಧ್ಯಕ್ಷ ಪ್ರದೀಪ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅತಿಥಿಯಾಗಿ ಜೆಸಿಐ ಸೀನಿಯರ್ ಚೇಂಬರಿನ ಚಂದ್ರಹಾಸ ದೇವಾಡಿಗ ಉಪಸ್ಥಿತರಿದ್ದರು.
ಜೆಸಿ ಪೂರ್ವ ಅಧ್ಯಕ್ಷರುಗಳಾದ ಸಂಗೀತ ಪ್ರಭು, ಸಂತೋಷ್ ಕುಮಾರ್, ಜೆಸಿ ನವೀನ್ ಟಿ ಆರ್ ಉಪಸ್ಥಿತರಿದ್ದರು.
ಹತ್ತಕ್ಕಿಂತ ಮೇಲ್ಪಟ್ಟ ಶಾಲೆಯ160ಕ್ಕಿಂತಲೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದರು.