ಮಿಸ್ಟರ್ ಅಂಡ್ ಮಿಸೆಸ್ ಯುಎಇ ಇಂಟರ್ ನ್ಯಾಶನಲ್ ಸ್ಪರ್ಧೆ : ಶೈನಿಂಗ್ ಸ್ಟಾರ್ ಆಗಿ ಬೋಳಾರದ ಪ್ರಾಪ್ತಿ ರಿತೇಶ್ ಶೆಟ್ಟಿ
ಯುಎಇ: ಜನಪ್ರಿಯ ಸೌಂದರ್ಯ ಸ್ಪರ್ಧೆ “ಮಿಸ್ಟರ್ ಅಂಡ್ ಮಿಸೆಸ್ ಯುಎಇ ಇಂಟರ್ ನ್ಯಾಶನಲ್ ಸ್ಪರ್ಧೆಯನ್ನು ಪುರುಷರು ಮತ್ತು ಮಹಿಳೆಯರಿಗಾಗಿ ಆಯೋಜನೆ ಮಾಡಿದ್ದು, ಮಂಗಳೂರಿನ ಬೋಳಾರದ ಪ್ರಾಪ್ತಿ ರಿತೇಶ್ ಶೆಟ್ಟಿ ಅವರು ಶೈನಿಂಗ್ ಸ್ಟಾರ್ ಆಗಿ ಹೊರಹೊಮ್ಮಿದ್ದಾರೆ.
ದುಬೈನಲ್ಲಿರುವ ಯುಎಇಯ ಸಿಲಿಕಾನ್ ಓಯಸಿಸ್‍ನ ರಾಡಿಸನ್ ಪಂಚತಾರ ಹೋಟೆಲ್‍ನ ಸಭಾಂಗಣದಲ್ಲಿ ಬಹಳ ವಿಜೃಂಭಣೆಯಿಂದ ನಡೆಯಿತು. ಪ್ರಾಪ್ತಿ ರಿತೇಶ್ ಶೆಟ್ಟಿ ಯವರು ಅಬುಧಾಬಿ ಯ ಶಾಲೆಯಲ್ಲಿ ಪ್ರಿನ್ಸಿಪಾಲ್ ಸೆಕ್ರೆಟರಿ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ . 1ನೇ ರನ್ನರ್ ಅಪ್ ಮಾಧವ್ ನಂಬಿಯಾರ್ ಮತ್ತು 2ನೇ ರನ್ನರ್ ಅಪ್ ನಾವೇದ್ ಜೆ ಮತ್ತು ಶ್ರೀಮತಿ ಯುಎಇ ಶೈನಿಂಗ್ ಸ್ಟಾರ್ ಪ್ರಶಸ್ತಿಯನ್ನು ಪ್ರಾಪ್ತಿ ರಿತೇಶ್ ಶೆಟ್ಟಿ ಯವರು ಪಡೆದು ನಮ್ಮ ತುಳು ನಾಡಿಗೆ ಹೆಮ್ಮೆಯನ್ನು ತಂದು ಕೊಟ್ಟ ಹೆಗ್ಗಳಿಕೆ ಇವರದು.