ಮಂಗಳೂರು ಅಮೃತಾ ವಿದ್ಯಾಲಯಂ ಶಾಲೆಗೆ ಶೇ.100 ಫಲಿತಾಂಶ
ಸಿಬಿಎಸ್‌ಇ 10ನೇ ತರಗತಿ ಪರೀಕ್ಷೆಯಲ್ಲಿ ಮಂಗಳೂರಿನ ಅಮೃತಾ ವಿದ್ಯಾಲಯಂನ ವಿದ್ಯಾರ್ಥಿಗಳು ಶೇ.100 ಫಲಿತಾಂಶ ದಾಖಲಿಸಿದ್ದಾರೆ.
ದೇವಿಕಾ ಜಯರಾಜ್ ಶೇ.96.80 ಪ್ರಥಮ, ಅದಿತೇಯ ಶೇ.93.4 ದ್ವಿತೀಯ, ಸುಮೇದಾ ಶೇ. 92.6 ತೃತಿಯಾ, ರಿಯಾ ಸಿಂಗ್ ಶೇ.91 ಚತುರ್ಥ ಸ್ಥಾನ ಪಡೆದಿದ್ದಾರೆ. ಮೂವರು ವಿದ್ಯಾರ್ಥಿಗಳು ಶೇ.90ಕ್ಕಿಂತ ಹೆಚ್ಚು. ಎಂಟು ವಿದ್ಯಾರ್ಥಿಗಳು ಶೇ.85ಕ್ಕಿಂತ ಅಧಿಕ, ಆರು ವಿದ್ಯಾರ್ಥಿಗಳು ಶೇ. 80ಕ್ಕಿಂತ ಅಧಿಕ, ಏಳು ವಿದ್ಯಾರ್ಥಿಗಳು ಶೇ.70ಕ್ಕಿಂತ ಅಧಿಕ, ಎಂಟು ವಿದ್ಯಾರ್ಥಿಗಳು ಶೇ.60ಕ್ಕಿಂತ ಅಧಿಕ ಅಂಕವನ್ನು ಪಡೆದಿದ್ದಾರೆ.