ನವಮಂಗಳೂರು ಬಂದರಿಗೆ ಅಗಮಿಸಿದ 5ನೇ ಹಡಗು ‘ಎಂಎಸ್ ನಾಟಿಕಾ’ : MS NAUTICA

ನವ ಮಂಗಳೂರು ಬಂದರಿಗೆ 5ನೇ ಪ್ರಯಾಣಿಕರ ಹಡಗು `ಎಂಎಸ್ ನಾಟಿಕಾ’ ಮಂಗಳವಾರ ಬೆಳಗ್ಗೆ ಆಗಮಿಸಿತು. 550 ಪ್ರಯಾಣಿಕರು ಹಾಗೂ 400 ಸಿಬ್ಬಂದಿಯನ್ನು ಒಳಗೊಂಡ ಹಡಗು ಬರ್ತ್ ಸಂಖ್ಯೆ 4ರಲ್ಲಿ ನಿಂತಿತು.

MS NAUTICA

ಈ ಹಡಗಿನ ಒಟ್ಟು ಉದ್ದ 180.5 ಮೀಟರ್. ಇದು 30,277 ಟನ್ ಭಾರವನ್ನು ಸಾಗಿಸುವ ಸಾಮರ್ಥ್ಯ ಹೊಂದಿದೆ. ಈ ಹಡಗು ಮಸ್ಕತ್‍ನಿಂದ ಮಾಲ್ಡಿವ್ಸ್ ಮೂಲಕ ಭಾರತಕ್ಕೆ ಆಗಮಿಸಿದೆ. ಈ ಹಡಗು ಹಿಂದೆ ಮುಂಬೈ ಹಾಗೂ ಮುರ್ಮುಗೋವಾ ಬಂದರಿನಲ್ಲಿ ನಿಂತಿತ್ತು. ಈ ಹಡಗಿನಲ್ಲಿ ಆಗಮಿಸಿದ ಪ್ರಯಾಣಿಕರನ್ನು ಯಕ್ಷಗಾನ ಹಾಗೂ ಚೆಂಡೆಯಂತಹ ಸಾಂಪ್ರದಾಯಿಕ ಕಲೆಗಳ ಮೂಲಕ ಸ್ವಾಗತಿಸಲಾಯಿತು. ಪ್ರಯಾಣಿಕರು 2 ಸೆಟಲ್ ಬಸ್‍ಗಳು ಸೇರಿದಂತೆ 15 ಬಸ್‍ಗಳಲ್ಲಿ ಮಂಗಳೂರಿನ ವಿವಿಧ ಪ್ರವಾಸಿ ಸ್ಥಳ, ದೇವಾಲಯ, ಚರ್ಚ್, ಸ್ಥಳೀಯ ಮಾರುಕಟ್ಟೆ ಹಾಗೂ ಇತರ ಸ್ಥಳಗಳಿಗೆ ಭೇಟಿ ನೀಡಿದರು.

Related Posts

Leave a Reply

Your email address will not be published.