ಮೂಡುಬಿದಿರೆ: ಬಾವಿಗೆ ಬಿದ್ದ ವ್ಯಕ್ತಿಯನ್ನು ರಕ್ಷಿಸಿದ ಅಗ್ನಿಶಾಮಕ ದಳ

ಮೂಡುಬಿದಿರೆ: ಅಕಸ್ಮಿಕವಾಗಿ ಕಾಲು ಜಾರಿ ಬಾವಿಗೆ ಬಿದ್ದು ಪ್ರಾಣಾಪಾಯದಲ್ಲಿದ್ದ ವ್ಯಕ್ತಿಯನ್ನು ಮೂಡುಬಿದಿರೆ ಅಗ್ನಿಶಾಮಕದ ದಳದ ಸಿಬಂಧಿಗಳು ರಕ್ಷಿಸಿದ ಘಟನೆ ಶುಕ್ರವಾರ ಬೆಳಿಗ್ಗೆ ಬೆಳುವಾಯಿಯಲ್ಲಿ ನಡೆದಿದೆ. ಪಡುಮಾರ್ನಾಡಿನ ನಿವಾಸಿ ಅರವತ್ತರ ಹರೆಯದ ಶ್ರೀನಿವಾಸ ಎಂಬವರು ಪ್ರಾಣಾಪಾಯದಿಂದ ಪಾರಾದ ವ್ಯಕ್ತಿ. ಶ್ರೀನಿವಾಸ ಅವರು ಕೂಲಿ ಕೆಲಸಕ್ಕೆಂದು ಬೆಳುವಾಯಿಗೆ ಹೋಗಿದ್ದು ಅಲ್ಲಿ ಗೀತಾ ಕ್ಲಿನಿಕ್ ನ ಮುಂಭಾಗದಲ್ಲಿರುವ ಬಾವಿಗೆ ಅಕಸ್ಮಿಕವಾಗಿ ಕಾಲು ಜಾರಿ ಬಿದ್ದರೆನ್ನಲಾಗಿದೆ.

ಅಗ್ನಿಶಾಮಕ ಠಾಣಾಧಿಕಾರಿ ಸ್ಟೀಫನ್ ಡಿ ಸಿಲ್ವಾ ಅವರ ನೇತೃತ್ವದಲ್ಲಿ ಪ್ರಮುಖ ಅಗ್ನಿಶಾಮಕ ಮಹಮ್ಮದ ಕೆ ಅಗ್ನಿಶಾಮಕ ಚಾಲಕ ಸುರೇಶ ರಾಠೋಡಾ, ಅಗ್ನಿಶಾಮಕ ಪುಂಡಲೀಕ ಎನ್ ಗೃಹರಕ್ಷಕ ಸಿಬ್ಬಂದಿಯವರಾದ ಆನಂದ, ಲತೇಶ್,ಸನ್ಮತ್ ಅವರು ಸಾರ್ವಜನಿಕರ ಸಹಕಾರದೊಂದಿಗೆ ಶ್ರೀನಿವಾಸ ಅವರನ್ನು ರಕ್ಷಿಸಲಾಗಿದೆ. ಮೂಡುಬಿದಿರೆ ಪೆÇಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Related Posts

Leave a Reply

Your email address will not be published.