ಚಾಲಕನ ನಿಯಂತ್ರಣ ತಪ್ಪಿ ಮಾರುತಿ ಕಾರು ಅಪಘಾತ : ಕಾರು ಚಾಲಕ ದಿವಾಕರ್ ಶೆಟ್ಟಿ ಮೃತ್ಯು

ಮೂಡುಬಿದಿರೆ: ಚಾಲಕನ ನಿಯಂತ್ರಣ ತಪ್ಪಿ ಮಾರುತಿ ಕಾರೊಂದು ರಸ್ತೆಯಲ್ಲಿ ಪಲ್ಟಿಯಾಗಿ 15 ಅಡಿ ಆಳದಲ್ಲಿದ್ದ ಶಾಲಾ ಮೈದಾನಕ್ಕೆ ಬಿದ್ದ ಪರಿಣಾಮವಾಗಿ ಚಾಲಕ ಮೃತಪಟ್ಟ ಘಟನೆ ನಿನ್ನೆ (ಭಾನುವಾರ) ರಾತ್ರಿ ತಾಲೂಕಿನ ಕಡಂದಲೆಯಲ್ಲಿ ನಡೆದಿದೆ. ಪಾಲಡ್ಕ ಗ್ರಾಮ ಪಂಚಾಯತ್ ವ್ಯಾಪ್ತಿಯ ಮಾಗಂದಾಡಿ ನಿವಾಸಿ ದಿವಾಕರ ಶೆಟ್ಟಿ (58ವ) ಮೃತಪಟ್ಟ ದುರ್ದೈವಿ. ಕಡಂದಲೆ ಗ್ರಾಮದ ಜೋಡಿಕಟ್ಟೆ ಮುಕ್ಕಡಪ್ಪು ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಪಿ ಬಿ. ರಸ್ತೆಯ ಬಳಿಯಲ್ಲಿ ಘಟನೆ ನಡೆದಿದ್ದು ಈ ಬಗ್ಗೆ ಯಾರ ಗಮನಕ್ಕೂ ಬಂದಿರಲಿಲ್ಲ ಎನ್ನಲಾಗಿದೆ. ಇಂದು ಬೆಳಿಗ್ಗೆ ಅದೇ ರಸ್ತೆಯಲ್ಲಿ ನೆಲ್ಯಾಡಿಕೆಯ ಯೊಗೀಶ್ ಗೌಡ ಬೈಕಲ್ಲಿ ಹೋಗುವಾಗ ನೋಡಿದ್ದು ತಕ್ಷಣ ಮೂಡುಬಿದಿರೆ ಪೆÇಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಪಾಲಡ್ಕ ಪಂಚಾಯತ್ ಅಧ್ಯಕ್ಷರು ದಿನೇಶ್ ಕಾಂಗ್ಲಾಯ್, ಹಾಲು ಒಕ್ಕೂಟದ ಜಿಲ್ಲಾಧ್ಯಕ್ಷರು ಕೆ ಪಿ ಸುಚರಿತ ಶೆಟ್ಟಿ, ಗ್ರಾ ಪಂಚಾಯತ್ ಉಪಾಧ್ಯಕ್ಷ ಸುಕೇಶ್ ಶೆಟ್ಟಿ, ಸದಸ್ಯರಾದ ಜಗದೀಶ್ ಕೋಟ್ಯಾನ್, ಅಮಿತಾ ನಾಗೇಶ್ ಪೂಜಾರಿ, ಕಾಂತಿ ಉದಯ ಶೆಟ್ಟಿ, ಸುರೇಶ್ ಪೂಜಾರಿ, ಸುಧೀರ್ ಶೆಟ್ಟಿ ಸ್ಥಳಕ್ಕೆ ಭೇಟಿ ನೀಡಿದ್ದರು.

Related Posts

Leave a Reply

Your email address will not be published.