ಪಾನಮತ್ತ ತೀರ್ಪುಗಾರರು ಕಂಬಳದಲ್ಲಿ ಭಾಗವಹಿಸುವಂತಿಲ್ಲ || Kambala

ಮೂಡುಬಿದಿರೆ: ತೀರ್ಪುಗಾರರು ಮಧ್ಯಪಾನ ಮಾಡಿ ಕಂಬಳದಲ್ಲಿ ಭಾಗವಹಿಸುವಂತಿಲ್ಲ. ಯಾವುದೇ ಕಾರಣಕ್ಕೂ ಅಶಿಸ್ತು ಪ್ರದರ್ಶಿಸಿದಲ್ಲಿ ಅಂತಹ ತೀರ್ಪುಗಾರರನ್ನು ಮುಂದಿನ ಕಂಬಳಗಳಿಗೆ ಅಮಾನತುಗೊಳಿಸುವುದೆಂದು ಜಿಲ್ಲಾ ಕಂಬಳ ಸಮಿತಿಯ ತುರ್ತು ಸಭೆಯಲ್ಲಿ ತೀರ್ಮಾನಿಸಲಾಗಿದೆ. ಜಿಲ್ಲಾ ಕಂಬಳ ಸಮಿತಿಯ ಆಶ್ರಯದಲ್ಲಿ ಬುಧವಾರ ಸಂಜೆ ಒಂಟಿಕಟ್ಟೆ ಕಡಲಕೆರೆ ನಿಸರ್ಗಧಾಮದ ಬಳಿ ಇರುವ ಸೃಷ್ಠಿ ಗಾರ್ಡನ್ ನ ಹಾಲ್ ನಲ್ಲಿ ಕೋಣಗಳ ಯಜಮಾನರಿಗೆ ನಡೆದ ತುರ್ತುಸಭೆಯಲ್ಲಿ ಮೇಲಿನ ತೀರ್ಮಾನವನ್ನು ಕೈಗೊಳ್ಳಲಾಯಿತು.

ಜಿಲ್ಲಾ ಕಂಬಳ ಸಮಿತಿಯ ಅಧ್ಯಕ್ಷ ರೋಹಿತ್ ಕುಮಾರ್ ಹೆಗ್ಡೆ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕಂಬಳ ಕೂಟಗಳ ನಿಯಮಾವಳಿಗೆ ಸಂಬಂಧಿಸಿದಂತೆ ಕೆಲವೊಂದು ತಿದ್ದುಪಡಿಗಳ ಕುರಿತು ಚರ್ಚೆಗಳಾಗಿದ್ದು ಮಹತ್ವದ ನಿರ್ಣಯಗಳನ್ನು ಕೈಗೊಳ್ಳಲಾಯಿತು.ಮುಂದಿನ ಕಂಬಳಗಳಲ್ಲಿ ಎಸ್‍ಡಿಸಿಸಿನವರು ನೀಡಿದಂತಹ ಸೆನ್ಸಾರ್ ಸಿಸ್ಟಂ ಅನ್ನು ಅಳವಡಿಸುವುದು. ಅದರ ಪೂರ್ಣ ಜವಾಬ್ದಾರಿಯನ್ನು ಕಂಗಿನ ಮನೆ ವಿಜಯಕುಮಾರ್ ಅವರಿಗೆ ನೀಡುವುದೆಂದು ನಿರ್ಮಾಣ ನಿರ್ಧರಿಸಲಾಯಿತು. ತಾಂತ್ರಿಕ ದೋಷಗಳಿಂದ ಸೆನ್ಸಾರ್‍ನಲ್ಲಿ ಸೆನ್ಸರ್ ತೊಂದರೆ ಉಂಟಾದಲ್ಲಿ ಮೂರನೇ ತೀರ್ಪುಗಾರರು ತೀರ್ಪು ನೀಡಲು ಅವಕಾಶ ನೀಡಲಾಯಿತು.

ಸಮಿತಿಯಲ್ಲಿ ನಿಗದಿಪಡಿಸಲಾದ ಕಾಲಮಿತಿ ಆಧಾರದಲ್ಲಿ ನಿರ್ಣಯವನ್ನು ಕೈಗೊಳ್ಳಲಾಗುವುದು. ಮೂರನೇ ತೀರ್ಪುಗಾರರ ನೀಡುವ ತೀರ್ಮಾನ ಸಮಯ ಟಿವಿ ನೋಡಲು ಎರಡು ಕೋಣೆಗಳ ಪ್ರತಿನಿಧಿಗಳಿಗೆ ಅಥವಾ ಯಜಮಾನರಿಗೆ ಅವಕಾಶ ನೀಡಲು ನಿರ್ಧರಿಸಲಾಗಿದೆ. ಕಂಬಳ ಸಮಿತಿಯ ಉಪಾಧ್ಯಕ್ಷ ರಶ್ಮಿತ್ ಶೆಟ್ಟಿ, ಜಿಲ್ಲಾ ಕಂಬಳ ಸಮಿತಿಯ ಜಿಲ್ಲಾ ಕಂಬಳ ಸಮಿತಿಯ ತೀರ್ಪುಗಾರರ ಸಂಚಾಲಕ ಸುರೇಶ್ ಕೆ ಪೂಜಾರಿ ಸಮಿತಿಯ ಜಿಲ್ಲಾ ಕಂಬಳ ಸಮಿತಿಯ ಮಾಜಿ ಅಧ್ಯಕ್ಷ ಭಾಸ್ಕರ ಕೋಟ್ಯಾನ್, ಪಿ.ಆರ್ .ಶೆಟ್ಟಿ ಓಟದ ಕೋಣಗಳ ಯಜಮಾನರಾದ ಶಕ್ತಿಪ್ರಸಾದ್ ಶೆಟ್ಟಿಮ ನಂದಳಿಕೆ ಶ್ರೀಕಾಂತ್ ಭಟ್,ಕೊಳಚೂರು ಕೊಂಡೆಟ್ಟು ಸುಕುಮಾರ ಶೆಟ್ಟಿ, ಬಜ್ಪೆ ಗಂಧಬೆಟ್ಟು ಅರುಣ್ ಶೆಟ್ಟಿ, ಚಂದ್ರಹಾಸ್ ಸನಿಲ್, ರಂಜಿತ್ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.

Related Posts

Leave a Reply

Your email address will not be published.