ಮೂಡುಬಿದರೆ: ಕೋಟಿ-ಚೆನ್ನಯ” ಜೋಡುಕರೆ ಕಂಬಳಕ್ಕೆ ಚಾಲನೆ, ಶೂನ್ಯ ತ್ಯಾಜ್ಯದತ್ತ ಗಮನವಿರಿಸಿ ನಡೆಯುತ್ತಿರುವ ಕಂಬಳ

ಮೂಡುಬಿದಿರೆ: ಹಲವು ವಿಶೇಷಗಳಿಗೆ ಮುನ್ನುಡಿ ಬರೆಯಲಿರುವ, ಶೂನ್ಯತ್ಯಾಜ್ಯದತ್ತ ಗಮನವಿರಿಸಿಕೊಂಡು ಶಾಸಕ ಉಮಾನಾಥ ಕೋಟ್ಯಾನ್ ಅವರ ನೇತೃತ್ವದಲ್ಲಿ ಒಂಟಿಕಟ್ಟೆಯ ಕಡಲಕೆರೆ ನಿಸರ್ಗಧಾಮ, ವೀರರಾಣಿ ಅಬ್ಬಕ್ಕ ಸಂಸ್ಕೃತಿ ಗ್ರಾಮದಲ್ಲಿ ನಡೆಯಲಿರುವ 20ನೇ ವರ್ಷದ ಮೂಡುಬಿದಿರೆಯ ಪ್ರತಿಷ್ಠಿತ ಹೊನಲು ಬೆಳಕಿನ ” ಕೋಟಿ-ಚೆನ್ನಯ” ಜೋಡುಕರೆ ಕಂಬಳವು ಶನಿವಾರ ಬೆಳಿಗ್ಗೆ ಆರಂಭಗೊಂಡಿತು.ಚೌಟರ ಅರಮನೆಯ ಕುಲದೀಪ್ ಎಂ ಅವರು ಮುಹೂರ್ತವನ್ನು ನಡೆಸಿಕೊಟ್ಟು, ಮೂಡುಬಿದಿರೆಯ ಮಣ್ಣಿನ ಮಗಳು ವೀರರಾಣಿ ಅಬ್ಬಕ್ಕ ಪ್ರತಿಮೆಗೆ ಮೂಡುಬಿದಿರೆ ಎಸ್ ಐ ಸಿದ್ದಪ್ಪ ಸಹಿತ ಕಂಬಳ ಸಮಿತಿಯವರು ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು.ಅಲಂಗಾರು ಶ್ರೀ ಬಡಗು ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ವೇ|ಮೂ| ಈಶ್ವರ್ ಭಟ್, ಅಲಂಗಾರು ಪುತ್ತಿಗೆ ನೂರನಿ ಮಸ್ಜೀದ್‍ನ ಮೌಲಾನಾ ಝಿಯಾವುಲ್ಲ್ ಹಕ್ಸ್ ಹಾಗೂ ಕಂಬಳ ಸಮಿತಿಯ ಪ್ರಧಾನ ಕಾರ್ಯದರ್ಶಿ ಗುಣಪಾಲ ಕಡಂಬ ಅವರು ಕಂಬಳದ ಕರೆಯಲ್ಲಿ ದೀಪವನ್ನು ಬೆಳಗಿಸುವ ಮೂಲಕ ಕಂಬಳವನ್ನು ಉದ್ಘಾಟಿಸಿದರು.

ನಂತರ ಮೂಡುಬಿದಿರೆಯ ಆಸುಪಾಸಿನ ದೈವಸ್ಥಾನ ಮತ್ತು ದೇವಸ್ಥಾನಗಳಿಂದ ತಂದಿರುವ ಪ್ರಸಾದವನ್ನು, ಒಂಟಿಕಟ್ಟೆಯ ಅಯ್ಯಪ್ಪ ಮಂದಿರದಲ್ಲಿ ಪೂಜೆ ಸಲ್ಲಿಸಿ ತಂದಿರುವ ಪ್ರಸಾದವನ್ನು ಕಂಬಳದ ಕರೆಗೆ ಸಮರ್ಪಿಸಲಾಯಿತು.ಕುಂಟಾಡಿ ಸುಧೀರ್ ಹೆಗ್ಡೆ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.ಪ್ರಗತಿಪರ ಕೃಷಿಕರು, ಕಂಬಳ ಕೋಣಗಳ ಯಜಮಾನ ಹಾಗೂ ಹಿರಿಯ ದೈವ ಪಾತ್ರಿ ಅಣ್ಣು ಶೆಟ್ಟಿ ಲಾಡಿ ಅವರನ್ನು ಸನ್ಮಾನಿಸಲಾಯಿತು.

ಮೂಡುಬಿದಿರೆ ಪುರಸಭಾಧ್ಯಕ್ಷ ಪ್ರಸಾದ್ ಕುಮಾರ್, ಉಪಾಧ್ಯಕ್ಷೆ ಸುಜಾತ, ಸ್ಥಾಯಿ ಸಮಿತಿ ಅಧ್ಯಕ್ಷ ನಾಗರಾಜ ಪೂಜಾರಿ, ಪುರಸಭಾ ಸದಸ್ಯರಾದ ಧನಲಕ್ಷ್ಮೀ, ಶ್ವೇತಾ ಕುಮಾರಿ, ರಾಜೇಶ್ ನಾಯ್ಕ್,ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್ ಎಂ, ಬಿಜೆಪಿ ಮಂಡಲಾಧ್ಯಕ್ಷ ಸುನಿಲ್ ಆಳ್ವ, ಆನಡ್ಕ ದಿನೇಶ್ ಕುಮಾರ್, ರೋಟರಿ ಕ್ಲಬ್ ಮೂಡುಬಿದಿರೆ ಇದರ ಅಧ್ಯಕ್ಷ ಮಹಮ್ಮದ್ ಆರಿಫ್, ಜೇಸಿಐನ ಅಧ್ಯಕ್ಷೆ ಶಾಂತಲಾ ಆಚಾರ್ಯ, ಕಾಳಿಕಾಂಬಾ ದೇವಸ್ಥಾನದ ಆಡಳಿತ ಮೊಕ್ತೇಸರ ಜಯಕರ ಪುರೋಹಿತ್, ರೋಟರಿ ಕ್ಲಬ್ ಆಫ್ ಮೂಡುಬಿದಿರೆ ಟೆಂಪಲ್ ಟೌನ್ ನ ಅಧ್ಯಕ್ಷ ಪ್ರವೀಣ್ ಪಿರೇರಾ, ಹನುಮಂತ ಮತ್ತು ವೆಂಕಟರಮಣ ದೇವಸ್ಥಾನಗಳ ಆಡಳಿತ ಮೊಕ್ತೇಸರ ಉಮೇಶ್ ಪೈ, ಉದ್ಯಮಿಗಳಾದ ತಿಮ್ಮಯ್ಯ ಶೆಟ್ಟಿ,ಶ್ರೀಪತಿ ಭಟ್, ಅಬುಲ್ ಅಲಾ ಪುತ್ತಿಗೆ, ಮೂಡಾದ ಮಾಜಿ ಅಧ್ಯಕ್ಷ ಮೇಘನಾಥ ಶೆಟ್ಟಿ, ವಕೀಲರಾದ ಎಂ.ಎಸ್.ಕೋಟ್ಯಾನ್, ಶಾಂತಿಪ್ರಸಾದ್ ಹೆಗ್ಡೆ, ಮನೋಜ್ ಶೆಣೈ,ಆಲಂಗಾರು ಲಯನ್ಸ್ ಕ್ಲಬ್ ನ ಅಧ್ಯಕ್ಷ ವಿನೋದ್ ನಜ್ರತ್,ಪುರಸಭಾ ಮುಖ್ಯಾಧಿಕಾರಿ ಇಂದು ಎಂ, ಜಾಯ್ಲಸ್ ಡಿಸೋಜಾ, ಪುಷ್ಪರಾಜ್ ಜೈನ್, ಬಿಜೆಪಿ ಮುಖಂಡ ಜಗದೀಶ ಅಧಿಕಾರಿ, ಕಂಬಳ ಸಮಿತಿಯ ರಂಜಿತ್ ಪೂಜಾರಿ, ಸುರೇಶ್ ಕೆ.ಪೂಜಾರಿ,ಗೋಪಾಲ್ ಶೆಟ್ಟಿಗಾರ್, ಅಜಯ್ ರೈ, ಪ್ರಶಾಂತ್ ಭಂಡಾರಿ ಮತ್ತಿತರರು ಈ ಸಂದರ್ಭದಲ್ಲಿದ್ದರು.

Related Posts

Leave a Reply

Your email address will not be published.