ಮೂಡುಬಿದರೆ : ಸಾಹಿತ್ಯ ಸಂಜೆಯ ಕವಿಗೋಷ್ಟಿ

ಕಾವ್ಯ ಹುಟ್ಡುವದಾ ಕಟ್ಟುವುದು ಎಂಬ ಪ್ರಶ್ನೆ ಇದೆ.ಹುಟ್ಟಿದ ಕಾವ್ಯ, ಬೇರೆ ಕಟ್ಟಿದ ಕಾವ್ಯ ಬೇರೆ.ಕಟ್ಟಿದ ಕಾವ್ಯವು ಕಾವುಗೊಳ್ಳಬೇಕು.ಅದಕ್ಕಿಷ್ಟು ಉಪಮೇ,ಅಲಂಕಾರ, ಲಯ,ರೂಪಕಗಳು ಇರಬೇಕು,ಎಂದು ಖ್ಯಾತ ಹಿರಿಯ ಸಾಹಿತಿ ಬಿ ಎಂ ರೋಹಿಣಿ ಅವರು ನುಡಿದರು. ಅವರು ಮೂಡುಬಿದಿರೆಯಲ್ಲಿ ಅರವಿಂದ ಚೊಕ್ಕಾಡಿ ಅವರ ಮನೆಯಲ್ಲಿ ರೇಮಂಡ್ ಡಿಕೂನಾ ತಾಕೊಡೆ ಸಾರಥ್ಯದಲ್ಲಿ ಪಿಂಗಾರ ಸಾಹಿತ್ಯ ಬಳಗದಿಂದ ಹಮ್ಮಿಕೊಂಡ ಸಾಹಿತ್ಯ ಸಂಜೆಯ ಕವಿಗೋಷ್ಟಿಯ ಅದ್ಯಕ್ಷತೆ ವಹಿಸಿ ಮಾತನಾಡಿದರು. ಕವಿಗೋಷ್ಟಿಗೆ ಚಾಲನೆ ನೀಡಿದ ಪೆÇ್ರ ಅಜಿತ್ ಪ್ರಸಾದ್ ಮಾತನಾಡಿ,ಬರೆದು ಹಾಕುವ ಸಂಸ್ಕೃತಿ ಬಿಡಬೇಕು. ರನ್ನ, ಪಂಪ,ಕುಮಾರವ್ಯಾಸ,ಮತ್ತಿತರರ ಸ್ವಲ್ಪ ಆದರೂ ಕವಿತೆಯ ಸಾರ ಓದಿ ತಿಳಿಯಬೇಕು, ಎಂದರು. ಖ್ಯಾತ ವಿಮರ್ಶಕ ಅರವಿಂದ ಚೊಕ್ಕಾಡಿ ಅವರು ತಮ್ಮ ಮನೆಯಂಗಳದಲ್ಲಿ ಸಗಣಿ ಸಾರಿಸಿ ಬೇಕಾದ ಪರಿಕರಗಳ ವ್ಯವಸ್ಥೆಯನ್ನು ಮಾಡಿದರು.

ನಂತರ ನಡೆದ ಕವಿಗೋಷ್ಟಿಯಲ್ಲಿ ಕನ್ನಡ ಹಾಗೂ ತುಳು ಭಾಷೆಯಲ್ಲಿ ಇಪ್ಪತ್ತು ಕವಿಗಳು ಕವಿತೆಗಳು ಸಾಧರ ಪಡಿಸಿದರು.
ಶರಣ್ಯ ಬೆಳುವಾಯಿ,ಪರಿಮಳ ಮಹೇಶ್, ಗೀತಾ ಲಕ್ಷ್ಮೀಶ್,ನಾಗ ಶ್ರೀ ಭಂಡಾರಿ, ಸುಮಂಗಲ ಕಿಣಿ,ಜಯಾನಂದ ಪೆರಾಜೆ,ಶಾಂತ ಪುತ್ತೂರು, ಶಾಮ್ ಪ್ರಸಾದ್ ಕಾರ್ಕಳ, ಅಶ್ರಫ್ ಅಲಿ ಕುಂಜ್ ಮುಂಡಾಜೆ,ಶಾಮ್ ರಾಜ್‍ಪಟ್ರಮೆ,ಎ ಕೆ ಕುಕ್ಕಿಲ,ಸಿಹಾನ ಬಿ ಎಂ, ಸುರೇಶ್ ನೆಗಳಗುಳಿ, ಶ್ರೀಕೃಷ್ಣ ಉಪಾಧ್ಯಾಯ, ನಾಗರಾಜ ಬಾಳೆಗದ್ದೆ,ಸೌಮ್ಯ ಕುಗ್ವೆ,ಡಾ ರಶ್ಮಿ ಅರಸ್,ರೇಮಂಡ್ ಡಿಕೂನಾ ತಾಕೊಡೆ. ಮೊದಲಿಗೆ ಪಿಂಗಾರ ಸಾಹಿತ್ಯ ಬಳಗದ ಸಂಚಾಲಕರಾದ ರೇಮಂಡ್ ಡಿಕೂನಾ ತಾಕೊಡೆ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ವೈದ್ಯ ಡಾ ಸುರೇಶ ನೆಗಳಗುಳಿ ಅವರು ಪ್ರಾಸ್ತಾವಿಕ ಮಾತನಾಡಿದರು. ಜಯಾನಂದ ಪೆರಾಜೆ ಶುಭಾಶಯ ಮಾತುಗಳು ಆಡಿದರು.ಅರವಿಂದ ಚೊಕ್ಕಾಡಿ ಅವರು ಊಟದ ಜೊತೆಗೆ ಗುಲಾಬಿ ಗಿಡ ಸಹಿತ ನೂರೊಂದು ರೂಪಾಯಿ ದಕ್ಷಿಣೆ ತಾಂಬೂಲ ನೀಡಿ ಗೌರವಿಸಿದರು. ಪಿಂಗಾರ ಸಾಹಿತ್ಯ ಬಳಗದಿಂದ ಎಲ್ಲಾರಿಗೂ ಪ್ರಮಾಣ ಪತ್ರದ ಗೌರವ ನೀಡಲಾಯಿತು.
