ಭ್ರಷ್ಟಾಚಾರ ಮಾಡಿದ್ದರೆ ದೇವಸ್ಥಾನದಲ್ಲಿ ಪ್ರಮಾಣ ಮಾಡಲು ಸಿದ್ಧ : ಅಭಯಚಂದ್ರ ಜೈನ್ ಗೆ ಶಾಸಕ ಕೋಟ್ಯಾನ್ ಸವಾಲು

ಮಾಜಿ ಸಚಿವ ಅಭಯಚಂದ್ರ ಜೈನ್ ಅವರು ನನ್ನನ್ನು ಟಾರ್ಗೆಟ್ ಮಾಡಿ ಏಕವಚನ ಉಪಯೋಗಿಸಿ ಮಾತನ್ನಾಡಿರುವುದು ಹಿರಿಯರಾದ ಅವರಿಗೆ ಶೋಭೆ ತರುವಂತದಲ್ಲ.ತಾನು 500 ಕೋ.ಭ್ರಷ್ಟಾಚಾರ ಮಾಡಿದ್ದೇನೆಂದು ಅವರು ಆರೋಪಿಸುತ್ತಿದ್ದಾರೆ ಆದರೆ ನಾನು 500 ಅಲ್ಲ ರೂ 5 ಕೋ.ಭ್ರಷ್ಟಾಚಾರ ಮಾಡಿದ್ದರೂ ಧರ್ಮಸ್ಥಳ ಅಥವಾ ಹನುಮಂತ ದೇವಸ್ಥಾನದಲ್ಲಿ ಪ್ರಮಾಣ ಮಾಡಲು ಸಿದ್ಧ ಜೈನ್ ಅವರು ಆ ಕ್ಷೇತ್ರಗಳಿಗೆ ಬಂದು ಪ್ರಮಾಣ ಮಾಡಲು ಸಿದ್ಧರಿದ್ದಾರೆಯೇ ಎಂದು ಸವಾಲು ಹಾಕಿದ್ದಾರೆ.

ಅವರು ಬಿಜೆಪಿ ಕಛೇರಿಯಲ್ಲಿ ಶುಕ್ರವಾರ ಮಾಧ್ಯಮ ಮಿತ್ರರ ಪ್ರಶ್ನೆಗಳಿಗೆ ಉತ್ತರಿಸಿದರು. ಮಾಜಿ ಸಚಿವ ಜೈನ್ ಅವರಿಗೆ ನಾನು ನನ್ನ ಹೃದಯದಲ್ಲಿ ಅಣ್ಣನ ಸ್ಥಾನವನ್ನು ನೀಡಿದ್ದೇನೆ. ತಾನು ಕ್ಷೇತ್ರದ ಎರಡೂವರೆ ಲಕ್ಷ ಜನರ ಪ್ರತಿನಿಧಿಯಾಗಿದ್ದೇನೆ ಆದ್ದರಿಂದ ಹಿರಿಯರಾದ ಅವರು ಏಕವಚನ ಬಳಸಿ ಮಾತನಾಡುವುದು ಸರಿಯಲ್ಲ. ತಾನು ಶಾಸಕನಾಗುವ ಮೊದಲೇ ಬೇರೆ ಬೇರೆ ವ್ಯವಹಾರಗಳಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದೆ ಅದರಲ್ಲಿ ತನಗೆ ಆದಾಯ ಬರುತ್ತಿದೆ ಆದ್ದರಿಂದ ತನಗೆ ಭ್ರಷ್ಟಾಚಾರ ಮಾಡುವ ಅಗತ್ಯವಿಲ್ಲ ಎಂದು ಉತ್ತರಿಸಿದ್ದಾರೆ.

Related Posts

Leave a Reply

Your email address will not be published.