ಮೂಡುಬಿದರೆಯಲ್ಲಿ ತುಳು ಮಹಾಕೂಟ-2023ಕ್ಕೆ ಚಾಲನೆ
ಮೂಡುಬಿದಿರೆ: ಅಖಿಲ ಭಾರತ ತುಳು ಒಕ್ಕೂಟ(ರಿ.) ಮತ್ತು ತುಳುಕೂಟ ಬೆದ್ರ ಸಹಯೋಗದಲ್ಲಿ ಮೂಡುಬಿದಿರೆ ಸ್ಕೌಟ್ಸ್ ಮತ್ತು ಗೈಡ್ಸ್ ಕನ್ನಡ ಭವನದಲ್ಲಿ ತುಳು ಮಹಾಕೂಟ-2023ಕ್ಕೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಶನಿವಾರ ಚಾಲನೆ ನೀಡಿದರು.
ನಂತರ ಮಾತನಾಡಿದ ಆಳ್ವರು, ಬೇರೆ ಬೇರೆ ಸಮುದಾಯದವರು ತುಳು ಭಾಷೆಯನ್ನು ಅಪ್ಪಿ ಒಪ್ಪಿಕೊಂಡಿದ್ದಾರೆ. ಇತರ ಸಮುದಾಯಗಳು ಇರುವಲ್ಲಿ ಅಲ್ಲಲ್ಲಿ ತುಳು ಸಂಘಟನೆಗಳನ್ನು ಮಾಡಬೇಕಾಗಿದೆ ಆ ಮೂಲಕ ಮುಂದಿನ ದಿನಗಳಲ್ಲಿ ಯಾವುದೇ ಸರಕಾರ ಬಂದರೂ ತುಳುವನ್ನು ಎರಡನೇಯ ಅಧಿಕೃತ ಭಾಷೆಯನ್ನಾಗಿ ಮಾಡುವಂತೆ ನಾವು ಒತ್ತಾಯಿಸಬೇಕಾಗಿದೆ ಎಂದರು.
ತುಳುಕೂಟ ಕುಡ್ಲ ಇದರ ಅಧ್ಯಕ್ಷ ಧಾಮೋದರ ನಿಸರ್ಗ, ಅಖಿಲ ಭಾರತ ತುಳು ಒಕ್ಕೂಟದ (ರಿ) ಮಾಜಿ ಅಧ್ಯಕ್ಷ ಧರ್ಮಪಾಲ ಯು.ದೇವಾಡಿಗ, ಮೂಡುಬಿದಿರೆ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಅಧ್ಯಕ್ಷ , ಉದ್ಯಮಿ ಕೆ.ಶ್ರೀಪತಿ ಭಟ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಅಖಿಲ ಭಾರತ ತುಳು ಒಕ್ಕೂಟದ ಉಪಾದ್ಯಕ್ಷರುಗಳಾದ ಜಯಕರ ಶೆಟ್ಟಿ ಇಂದ್ರಾಳಿ, ವಿಜಯಲಕ್ಷ್ಮೀ ಬಿ.ಶೆಟ್ಟಿ, ತಾರನಾಥ ಶೆಟ್ಟಿ ಬೋಳಾರ, ಪ್ರಧಾನ ಕಾರ್ಯದರ್ಶಿ ಮುಲ್ಕಿ ಕರುಣಾಕರ ಶೆಟ್ಟಿ,ಕೋಶಾಧಿಕಾರಿ ಎಂ.ಚಂದ್ರಹಾಸ ದೇವಾಡಿಗ, ಜೊತೆ ಕಾರ್ಯದರ್ಶಿಗಳಾದ ಸಿ.ಎ.ಪೂಜಾರಿ ಮತ್ತು ಹರೀಶ್ ನೀರುಮಾರ್ಗ, ಸಂಘಟನಾ ಕಾರ್ಯದರ್ಶಿ ಡಾ.ರಾಜೇಶ್ ಆಳ್ವ ಬದಿಯಡ್ಕ ಉಪಸ್ಥಿತರಿದ್ದರು. ತುಳುಕೂಟ ಬೆದ್ರ ಇದರ ಅಧ್ಯಕ್ಷ ಧನಕೀರ್ತಿ ಬಲಿಪ ಸ್ವಾಗತಿಸಿದರು.ಅಖಿಲ ಭಾರತ ತುಳು ಒಕ್ಕೂಟದ ಅಧ್ಯಕ್ಷ ಎ.ಸಿ.ಭಂಡಾರಿ ಪ್ರಾಸ್ತಾವಿಕವಾಗಿ ಮಾತನಾಡಿ ತುಳುವಿನ ಸ್ಥಿತಿಗತಿಗಳ ಬಗ್ಗೆ ಹೇಳಿದರು. ನವನೀತ ಶೆಟ್ಟಿ ಕದ್ರಿ ಕಾರ್ಯಕ್ರಮ ನಿರೂಪಿಸಿದರು.