ಮಂಗಳೂರು :ಮೂಡುಶೆಡ್ಡೆ- ಬೋಂದೆಲ್ ಸಂಪರ್ಕ ರಸ್ತೆ ಮಧ್ಯೆ ಸುರಿದ ತ್ಯಾಜ್ಯ ರಾಶಿ
ಮಂಗಳೂರು ಪಾಲಿಕೆ ವ್ಯಾಪ್ತಿಯ ಮೂಡುಶೆಡ್ಡೆ-ಬೋಂದೆಲ್ ಸಂಪರ್ಕ ರಸ್ತೆ ಮಧ್ಯೆ ಕಿಡಿಗೇಡಿಕಗಳು ತ್ಯಾಜ್ಯ ತಂದು ಸುರಿದಿದ್ದು, ತ್ಯಾಜ್ಯ ರಸ್ತೆ ಮಧ್ಯೆ ಚೆಲ್ಲಾಪಿಲ್ಲಿಯಾಗಿದ್ದು, ಇದರಿಂದ ವಾಹನ ಸಂಚಾರಕ್ಕೆ ತೊಂದರೆ ಉಂಟಾಗಿದೆ. ಕಿಡಿಗೇಡಿಗಳ ಕೃತ್ಯದ ವಿರುದ್ಧ ಇಲಾಖೆಗೆ ದೂರು ನೀಡಿದ್ದು, ಕೃತ್ಯ ಎಸಗಿದವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕೆಂದು ತಾಲೂಕು ಪಂಚಾಯತ್‌ನ ಮಾಜಿ ಅಧ್ಯಕ್ಷ ಹರೀಶ್ ಮೂಡುಶೆಡ್ಡೆ ಆಗ್ರಹಿಸಿದ್ದಾರೆ.