ಮುಳಿಯ ಜ್ಯುವೆಲ್ಸ್ ನಿಂದ ಚಿನ್ನ-ವಜ್ರಾಭರಣಗಳ ಪ್ರದರ್ಶನ ಮತ್ತು ಮಾರಾಟ

ಮಂಗಳೂರಿನ ನವಭಾರತ್ ವೃತ್ತದ ಓಷಿಯನ್ ಪರ್ಲ್‍ನಲ್ಲಿ ಮುಳಿಯ ಜ್ಯುವೆಲ್ಸ್ ನಿಂದ ಚಿನ್ನ ಮತ್ತು ವಜ್ರಾಭರಣಗಳ ಪ್ರದರ್ಶನ ಮತ್ತು ಮಾರಾಟಕ್ಕೆ ಚಾಲನೆ ಸಿಕ್ಕಿತ್ತು. ಸೆ.8ರಿಂದ ಸೆ.11ರ ವರೆಗೆ ಚಿನ್ನ -ವಜ್ರಾಭರಣಗಳ ಪ್ರದರ್ಶನ ಮತ್ತು ಮಾರಾಟ ನಡೆಯಲಿದ್ದು, ಮುಳಿಯ ಚಿನ್ನಾಭರಣ ಮತ್ತು ಕಿಸ್ನ ಡೈಮಂಡ್ ಆಭರಣಗಳ ಪ್ರದರ್ಶನ ಮತ್ತು ಮಾರಾಟದ ಎಕ್ಸಿಬಿಶನ್‍ನ್ನು ಏರ್ಪಡಿಸಿದ್ದಾರೆ.

ಎಪ್ಪತ್ತೆಂಟು ವರ್ಷಗಳ ಪರಂಪರೆ ಮತ್ತು ನಂಬಿಕೆಯ ಮುಳಿಯ ಜ್ಯುವೆಲ್ಸ್ ನಿಂದ ಮಂಗಳೂರಿನ ಓಷಿಯನ್ ಪರ್ಲ್‍ನಲ್ಲಿ ಹೋಟೆಲ್‍ನಲ್ಲಿ ಆಯೋಜಿಸಲಾದ ಮುಳಿಯ ಚಿನ್ನಾಭರಣಗಳ ಹಾಗೂ ಕಿಸ್ನ ಡೈಮಂಡ್ ಆಭರಣಗಳ ಪ್ರದರ್ಶನ ಮತ್ತು ಮಾರಾಟಕ್ಕೆ ಚಾಲನೆ ನೀಡಲಾಯಿತು.ನವನಾರಿಗಳಾದ ಡಾ| ಆಶಾ ಜ್ಯೋತಿ ರೈ, ಡಾ| ಮಾಲಿನಿ ಹೆಬ್ಬಾರ್, ದೀಪಾ ಕಾಮತ್, ಕೋಮಲ್ ಪ್ರಭು, ಶುಭಮಣಿ ಶೇಖರ್, ಮಮತಾ, ಚೇತನ, ಸುಮನ ಪೆÇಳಲಿ, ಪ್ರಜ್ಞಾ ಡಿ.ಎಸ್. ಕಾರ್ಯಕ್ರಮ ಉದ್ಘಾಟಿಸಿದರು.

ಈ ವೇಳೆ ಮಾತನಾಡಿದ ಬಂಟರ ಸಂಘದ ಅಧ್ಯಕ್ಷರಾದ ಡಾ| ಆಶಾ ಜ್ಯೋತಿ ರೈ ಅವರು, ಮಾತನಾಡಿದ ಡಾ. ಆಶಾಜ್ಯೋತಿ ರೈ “ಇಲ್ಲಿನ ಪ್ರತಿಯೊಂದು ಡಿಸೈನ್‍ಗಳೂ ಯೂನಿಕ್ ಆಗಿವೆ” ಎಂದರು. ಮುಖ್ಯ ಅತಿಥಿಗಳಾದ ಡಾ. ಮಾಲಿನಿ ಹೆಬ್ಬಾರ್ “ಮಹಿಳೆಯರು ಜವಾಬ್ದಾರಿಯುಳ್ಳವರು, ಉಳಿತಾಯ ಮತ್ತು ಧರಿಸಲು ಚಿನ್ನದ ಹೂಡಿಕೆ ಅಗತ್ಯ, ನನಗೆ ಈ ಅನುಭವ ಇದೆ” ಎಂದರು.

ಆನಂತರ ಸ್ವಸ್ತಿಕಾ ನ್ಯಾಷನಲ್ ಸ್ಕೂಲ್‍ನ ಪ್ರಿನ್ಸಿಪಾಲ್ ಡಾ. ಮಾಲಿನಿ ಹೆಬ್ಬಾರ್ ಅವರು ಮಾತನಾಡಿ, ಇವತ್ತು ಎಲ್ಲೆಡೆ ಓಣಂ ಹಬ್ಬದ ಸಂಭ್ರಮ. ಅದರ ಜೊತೆಗೆ ಮುಳಿಯ ಜ್ಯುವೆಲ್ಸ್ ಮತ್ತು ಕಿಸ್ನಾ ಡೈಮಂಡ್ ಆಭರಣಗಳ ಸಹಯೋಗದೊಂದಿಗೆ ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ. ಇದೀಗ ನವನಾರಿಗಳಾಗಿ ನಮ್ಮನ್ನು ಆಹ್ವಾನಿಸಿದ ಮುಳಿಯ ಜ್ಯುವೆಲ್ಲರ್ಸ್‍ಗೆ ಧನ್ಯವಾದಗಳನ್ನು ತಿಳಿಸಿದರು.

ಇದೇ ವೇಳೆ ಮ್ಯಾನೆಜಿಂಗ್ ಡೈರೆಕ್ಟರ್ ಕೃಷ್ಣ ನಾರಾಯಣ ಮುಳಿಯ ಪ್ರಸ್ತಾವನೆ ಮಾಡಿದರು. ಈ ಸಂದರ್ಭದಲ್ಲಿ ನಾಮದೇವ ಮಲ್ಯ, ಸಂಜೀವ ಹಾಗೂ ಕಿಸ್ನ ಡೈಮಂಡ್ ಚಾನಲ್‍ನ ಪಾಟ್ರ್ನರ್ ಪ್ರಕಾಶ್ ಸಿಂಥ್ರೆ ಉಪಸ್ಥಿತರಿದ್ದರು. ಇಷಾ ಮುಳಿಯ ಸ್ವಾಗತಿಸಿದರು. ಶ್ರೀಮತಿ ಭವ್ಯ ಕಾರ್ಯಕ್ರಮ ನಿರೂಪಿಸಿದರು, ಸಲಹೆಗಾರ ವೇಣು ಶರ್ಮ ವಂದಿಸಿದರು.

ಎಕ್ಸಿಬಿಷನ್ ನಲ್ಲಿ ಇತ್ತೀಚೆಗೆ ಜಾಗತಿಕವಾಗಿ ಅನಾವರಣಗೊಳಿಸಲಾದ ಮತ್ತು ವಿನೂತನ ಶೈಲಿಯ ಆಭರಣಗಳನ್ನು ಸಂಗ್ರಹವಿದೆ. ಮಂಗಳೂರು ಶೈಲಿಯ ವಿವಿದ ವಿನ್ಯಾಸದ ಕರ ಕುಶಲದ ಕರಿಮಣಿಗಳು, ಕೊಡಗಿನ ಮತ್ತು ಕರಾವಳಿಯ ಪರಂಪರಾಗತ ಆಭರಣಗಳು ಇಲ್ಲಿ ಲಭ್ಯ. ಕಿಸ್ನ ಬ್ರ್ಯಾಂಡ್ ಡೈಮಂಡ್ ಆಭರಣಗಳು ಪ್ರದರ್ಶನದ ವಿಶೇಷವಾಗಿದೆ. 5 ಸಾವಿರದಿಂದ 8 ಲಕ್ಷಕ್ಕೂ ಮೇಲಿನ ಡೈಮಂಡ್ ಆಭರಣಗಳು ಲಭ್ಯವಿದೆ. ಮುಳಿಯಯ ಆಭರಣ ಯುನಿಕ್ ಡಿಸೈನ್‍ಗಳಾಗಿದ್ದು, ಕೆಲಸಗಾರರ ಪರ್ಫೆಕ್ಷನ್ ಮತ್ತು ಗ್ರಾಹಕ ಸ್ನೇಹಿ ಮತ್ತು ಪಾರದರ್ಶಕ ವ್ಯವಹಾರವನ್ನೂ ನಂಬಿಕೆಯನ್ನು ಹೆಚ್ಚಿಸಿದೆ.

Related Posts

Leave a Reply

Your email address will not be published.