ಜೈವಿಕ ಸರಪಳಿಯನ್ನು ಸಂರಕ್ಷಿಸೋಣ : ಡಾ|| ಚೂಂತಾರು

ನಿರಂತರವಾಗಿ ಪರಿಸರದ ಮೇಲೆ ಉಂಟಾಗುತ್ತಿರುವ ದೌರ್ಜನ್ಯದಿಂದಾಗಿ ಪರಿಸರದಲ್ಲಿ ಬದುಕು ಕಟ್ಟಿಕೊಂಡಿರುವ ಜೀವ ಸಂಕುಲಗಳು ನಾಶವಾಗಿ, ಪರಿಸರದ ಸಮತೋಲನ ತಪ್ಪಿ ಹೋಗುತ್ತಿದೆ. ಜೈವಿಕ ಸರಪಳಿ ನಾಶವಾಗಿ ಹಲವಾರು ವಿರಳ ಗಿಡ ಸಸ್ಯಗಳು ಮತ್ತು ಪ್ರಾಣಿ ಸಂಕುಲಗಳು ನಾಶವಾಗಿ ಹೋಗುತ್ತಿದೆ. ಈ ನಿಟ್ಟಿನಲ್ಲಿ ನಾವೆಲ್ಲಾ ಕೂಡಲೇ ಎಚ್ಚೆತ್ತುಕೊಂಡು ಗಿಡಗಳನ್ನು ನೆಟ್ಟು ಮರಗಳನ್ನು ಪೋಷಿಸಿ ಪರಿಸರವನ್ನು ರಕ್ಷಿಸಬೇಕು. ಹಾಗಾದರೆ ಮಾತ್ರ ನಾಡು ಸಮೃದ್ಧವಾಗಿ ಕಾಲ ಕಾಲಕ್ಕೆ ಮಳೆ, ಬಿಸಿಲು ಸರಿಯಾಗಿ ದೊರಕಿ, ಪರಿಸರ ಮಾಲಿನ್ಯ ನಿವಾರಣೆಯಾಗಿ ಹಾಗೂ ಪರಿಸರ ನಾಶವಾಗುವುದು ತಪ್ಪಿ ಹೋಗಿ ಸುದೃಢ, ಸುಭೀಕ್ಷ ನಾಡು ನಿರ್ಮಾಣವಾಗಬಹುದು ಎಂದು ದ. ಕ ಜಿಲ್ಲಾ ಗೃಹರಕ್ಷಕ ದಳದ ಸಮಾದೇಷ್ಟರಾದ ಡಾ|| ಮುರಲೀ ಮೋಹನ್ ಚೂಂತಾರು ನುಡಿದರು.

22 ನೇ ಶುಕ್ರವಾರದಂದು ಮೂಲ್ಕಿಯ ಗೃಹರಕ್ಷಕ ದಳ ಕಚೇರಿ ಆವರಣದಲ್ಲಿ ಗಿಡ ನೆಡುವುದರ ಮೂಲಕ ವನಮಹೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಎಲ್ಲಾ ಗೃಹರಕ್ಷಕರಿಗೆ ಈ ಸಂದರ್ಭದಲ್ಲಿ ಗಿಡ ವಿತರಣೆ ಮಾಡಲಾಯಿತು. ಪ್ರತೀ ಗೃಹರಕ್ಷಕರಿಗೆ ವರ್ಷಕ್ಕೆ ಒಂದು ಗಿಡ ನೆಟ್ಟು ಪೋಷಿಸಲು ವಿನಂತಿ ಮಾಡಲಾಯಿತು. ಈ ಸಂದರ್ಭದಲ್ಲಿ ಮೂಲ್ಕಿ ಘಟಕದ ಪ್ರಭಾರ ಘಟಕಾಧಿಕಾರಿ ಶ್ರೀ ಲೋಕೇಶ್ ಮತ್ತು ಸಮಾಜ ಸೇವಕ ಹಾಗೂ ಪರಿಸರ ಪ್ರೇಮಿ ಶ್ರೀ ವೆಂಕಟರಮಣರವರು ಉಪಸ್ಥಿತರಿದ್ದರು. ಸುಮಾರು 35 ಮಂದಿ ಗೃಹರಕ್ಷಕರು ಈ ಸಂದರ್ಭದಲ್ಲಿ ಹಾಜರಿದ್ದರು.

Related Posts

Leave a Reply

Your email address will not be published.