ಮುಲ್ಕಿ: ಪಾವಂಜೆಯಲ್ಲಿ ಸರಣಿ ಅಪಘಾತ: ಆಟೋದಲ್ಲಿದ್ದ ಮಹಿಳೆಗೆ ಗಾಯ

ಮೂಲ್ಕಿ ರಾಷ್ಟ್ರೀಯ ಹೆದ್ದಾರಿ 66 ರ ಹಳೆಯಂಗಡಿ ಸಮೀಪದ ಪಾವಂಜೆ ಸೇತುವೆಯಲ್ಲಿ ಆಟೋ ಮತ್ತು ಬಸ್ ಹಾಗೂ ಲಾರಿಗಳ ನಡುವೆ ಸರಣಿ ಅಪಘಾತ ಸಂಭವಿಸಿದ್ದು ಆಟೋದಲ್ಲಿದ್ದ ಮಹಿಳೆ ಗಂಭೀರ ಗಾಯಗೊಂಡಿದ್ದ, ಮಹಿಳೆಯನ್ನು ಸ್ಧಳೀಯ ಆಸ್ಪತ್ರಗೆ ದಾಖಲಿಸಿದ್ದಾರೆ.

ಗಾಯಗೊಂಡ ಮಹಿಳೆಯನ್ನು ಮಂಗಳೂರು ನಿವಾಸಿ ಸರಸ್ವತಿ ಎಂದು ಗುರುತಿಸಲಾಗಿದೆ. ಆಟೋ ಮಂಗಳೂರಿನಿಂದ ಮೂಲ್ಕಿ ಕಡೆಗೆ ಹೋಗುತ್ತಿದ್ದು ಆಟೋಗೆ ಪಾವಂಜೆ ಸೇತುವೆ ಬಳಿ ಮುಂಬೈ ಬಸ್ ಹಿಂದಿನಿಂದ ಡಿಕ್ಕಿ ಹೊಡೆದಿದೆ. ಈ ಸಂದರ್ಭದಲ್ಲಿ ಹಿಂದೆ ಇದ್ದ ಲಾರಿ ಬಸ್ಸಿಗೆ ಡಿಕ್ಕಿ ಹೊಡೆದು ಸರಣಿ ಅಪಘಾತ ಸಂಭವಿಸಿದೆ.

ಅಫಘಾತದಲ್ಲಿ ಮೂರು ವಾಹನಗಳಿಗೆ ಹಾನಿಯಾಗಿದ್ದು, ಅಫಘಾತದಿಂದ ಕೆಲವು ಗಂಟೆಗಳ ಕಾಲ ರಾಷ್ಟ್ರೀಯ ಹೆದ್ದಾರಿ ವ್ಯತ್ಯಯಗೊಂಡಿದ್ದು ಸ್ಧಳಕ್ಕೆ ಮಂಗಳೂರು ಉತ್ತರ ಟ್ರಾಫಿಕ್ ಭೇಟಿ ನೀಡಿ ಪರಿಶೀಲಿಸಿ, ಅಪಘಾತದ ವಾಹನಗಳನ್ನು ತೆರವುಗೊಳಿಸಿ ಹೆದ್ದಾರಿ ಸಂಚಾರ ಮುಕ್ತಗೊಳಿಸಿದ್ದಾರೆ.