ಮುಲ್ಕಿ ವಿಜಯ ಕಾಲೇಜ್ ಬಡ ವಿದ್ಯಾರ್ಥಿಗಳ ವಿದ್ಯಾನಿಧಿಗೆ ಹಳೆ ವಿದ್ಯಾರ್ಥಿಗಳಿಂದ ದೇಣಿಗೆ
ಮುಲ್ಕಿ ವಿಜಯ ಕಾಲೇಜಿಗೆ 1994-97ರಲ್ಲಿ ಬಿಕಂ ಪದವಿ ಪಡೆದು ಹೊರ ಬಂದ ಹಳೆ ವಿದ್ಯಾರ್ಥಿಗಳು, ತಾವು ಕಲಿತ ಸಂಸ್ಥೆಯ ಬಡ ವಿದ್ಯಾರ್ಥಿಗಳ ವಿದ್ಯಾನಿಧಿಗೆ ಒಂದು ಲಕ್ಷ ರೂಪಾಯಿ ದೇಣಿಗೆ ನೀಡುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.
ನೂರಕ್ಕೂ ಅಧಿಕ ಹಳೆ ವಿದ್ಯಾರ್ಥಿಗಳು ತಾವು ಪದವಿ ಮುಗಿಸಿ 25ವರ್ಷಗಳ ಸುದೀರ್ಘ ಅವಧಿಯ ಬಳಿಕ ಎಲ್ಲರೂ ಒಂದಾಗಿ ಇಪ್ಪತ್ತೈದರ ಸಂಭ್ರಮಾಚರಣೆಯನ್ನು ತಮಗೆ ವಿದ್ಯಾದಾನ ಮಾಡಿದ ಗುರುಗಳಿಗೆ ಗುರುವಂದನೆಯ ಮೂಲಕ ಅರ್ಥಪೂರ್ಣವಾಗಿ ಪಡುಬಿದ್ರಿಯ ಖಾಸಗಿ ಸಭಾಂಗಣದಲ್ಲಿ ನಡೆಸಿ ಜನರಿಂದ ಸೈ ಎಣಿಸಿಕೊಂಡಿದ್ದು, ಈ ಕಾರ್ಯಕ್ರಮದಲ್ಲಿನ ಉಳಿಕೆ ಹಣ ಒಂದು ಲಕ್ಷ ರೂಪಾಯಿ ಮೊತ್ತವನ್ನು ಕಾಲೇಜಿನ ಪ್ರಾಂಶುಪಾಲೆಯವರಿಗೆ ಹಳೆ ವಿದ್ಯಾರ್ಥಿ ಸಮೂಹದ ಅಧ್ಯಕ್ಷ ಅನಿಲ್ ಶೆಟ್ಟಿ ಹಸ್ತಾಂತರಿಸಿದ್ದಾರೆ. ಈ ಸಂದರ್ಭ ಕಾರ್ಯದರ್ಶಿ ರೋಹಿತಾಕ್ಷ, ಸದಸ್ಯರಾದ ಮಹೇಶ್ ಕುಮಾರ್, ದಿವಾಕರ್, ಪ್ರವೀಣ್ ಹಾಗೂ ಮನೋಜ್ ಉಪಸ್ಥಿತರಿದ್ದರು.