ಮಕ್ಕಳ ಉತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

ಮುಂಬೈ: ಮಲಾಡ್‍ಪೂರ್ವದ ಶ್ರೀ ವರಮಹಾಲಕ್ಷ್ಮಿ ಪೂಜಾ ಸಮಿತಿಯ ಯುವ ವಿಭಾಗದ ಆಶ್ರಯದಲ್ಲಿ ಅಕ್ಟೋಬರ್ 30ರಂದು ಮಲಾಡ್ ಪೂರ್ವದ ಚಿಲ್ಡ್ರನ್ಸ್ ಅಕಾಡೆಮಿ ಶಾಲೆಯ ಸಭಾಂಗಣದಲ್ಲಿ ದಿನಪೂರ್ತಿ ನಡೆಯಲಿರುವ ಮಕ್ಕಳ ಉತ್ಸವದ ಆಮಂತ್ರನ ಪತ್ರಿಕೆಯನ್ನು ಬಿಲ್ಲವರ ಅಸೋಸಿಯೇಷನ್ ಮಲಾಡ್ ಸ್ಥಳೀಯ ಕಚೇರಿಯ ಕಾರ್ಯಾಲಯದಲ್ಲಿ ಪೂಜಾ ಸಮಿತಿಯ ಅಧ್ಯಕ್ಷರಾದ ನ್ಯಾಯವಾದಿ ಜಗನ್ನಾಥ್ ಎನ್ ಶೆಟ್ಟಿ ಪಣಿಯೂರು ಬಿಡುಗಡೆಗೊಳಿಸಿದರು.

ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಮಾತನಾಡಿದ ಜಗನ್ನಾಥ್ ಶೆಟ್ಟಿ ಅವರು ಮಕ್ಕಳ ಉತ್ಸವ ಮಾಡಬೇಕೆನ್ನುವ ಕನಸು ನಮ್ಮಲ್ಲಿ ಬಹಳ ವರ್ಷಗಳಿಂದ ಇತ್ತು ಅದು ಇಂದು ಪೂರ್ಣಗೊಳ್ಳುತ್ತಿದೆ, ಮಲಾಡ್ ಪರಿಸರದ ತುಳು ಕನ್ನಡಿಗರ ಮಕ್ಕಳ ಪ್ರತಿಭೆ ಆವರಣ ಕೊಳ್ಳುವುದಕ್ಕೆ ಇದು ಸೂಕ್ತ ವೇದಿಕೆಯಾಗಿದೆ, ಯುವ ಸಮುದಾಯ ಜಾಗೃತರದಾಗ ಧರ್ಮ ಮತ್ತು ಸಮಾಜ ಬಲಿಷ್ಠಗೊಳ್ಳಲು ಸಾಧ್ಯವಾಗುತ್ತದೆ ಎಂದರು.

ಯುವ ವಿಭಾಗದ ಕಾರ್ಯಧ್ಯಕ್ಷೆ ರಶ್ಮಿ ಎಸ್ ಪೂಜಾರಿ ಮಾತನಾಡುತ್ತಾ ಸಮಿತಿಯ ಸದಸ್ಯರ ಮಾರ್ಗದರ್ಶನದಲ್ಲಿ ಉತ್ಸವ ರೂಪಗೊಂಡಿದೆ, ದಾನಿಗಳು ವಿವಿಧ ಸಮಾಜದ ಬಂಧುಗಳು ನಮ್ಮನ್ನು ಹಾರೈಸಿದರಿಂದ ಉತ್ಸವಕ್ಕೆ ಹೊಸತನದ ಚೈತನ್ಯದ ಶಕ್ತಿ ಬಂದಿದೆ, ದಿನಪೂರ್ತಿ ನಡೆಯುವ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳನ್ನು ಸೇರಿಸುವಂತೆ ಪಾಲಕರು ಸಹಕಾರ ನೀಡಬೇಕು, ಶಿಕ್ಷಣದೊಂದಿಗೆ ಸಾಂಸ್ಕೃತಿಕವಾಗಿ ಬೆಳೆಯ ಬೇಕು ಎನ್ನುವ ನಮ್ಮ ಉದ್ದೇಶವಾಗಿದೆ ಎಂದರು.

ಯುವ ವಿಭಾಗದ ಕಾರ್ಯದರ್ಶಿ ಸೌಮ್ಯ ಜೆ ಮೆಂಡನ್ ಮಾತನಾಡುತ್ತಾ ಉತ್ಸವದಲ್ಲಿ ಸುಮಾರು 2000 ಜನ ಸೇರುವ ನಿರೀಕ್ಷೆ ಇಟ್ಟುಕೊಂಡಿದ್ದೇವೆ, ಅದಕ್ಕೆಲ್ಲ ಸಿದ್ಧತೆಯನ್ನು ಮಾಡಿಕೊಂಡಿದ್ದೇವೆ ಮಲಾಡನ ಸುಮಾರು ನೂರಕ್ಕೂ ಮಿಕ್ಕು ಮಕ್ಕಳು ವಿವಿಧ ರೀತಿಯಲ್ಲಿ ತಮ್ಮ ಪ್ರತಿಭೆಗಳನ್ನು ಪ್ರದರ್ಶನ ಮಾಡಲಿದ್ದಾರೆ. ಮಕ್ಕಳಿಗೆ ಧೈರ್ಯ ತುಂಬುವುದಕ್ಕಾಗಿ ವಿವಿಧ ರೀತಿಯಲ್ಲಿ ಮಾರ್ಗದರ್ಶನ ನೀಡುವ ನಾಟಕಗಳು. ವಿವಿಧ ರೀತಿಯಲ್ಲಿ ಅನುಭವವನ್ನು ಹೊಂದಿರುವ ತಜ್ಞರಿಂದ ಮಾರ್ಗದರ್ಶನವನ್ನು ಕಾರ್ಯಕ್ರಮ ಕೂಡ ಆಯೋಜಿಸಿಕೊಂಡಿದ್ದೇವೆ ಎಂದರು.

ನಟ, ನಿರ್ದೇಶಕ ಬಾಬಾ ಪ್ರಸಾದ ಅರಸ ಪ್ರಾರ್ಥನೆ ಮಾಡಿದರು. ಯುವ ವಿಭಾಗದ ಉಪ ಕಾರ್ಯಾಧ್ಯಕ್ಷ ಸುದೀಪ್ ಡಿ ಪೂಜಾರಿ ಸ್ವಾಗತಿಸಿದರು. ಸಮಿತಿಯ ಸದಸ್ಯ ಸುಂದರ ಪೂಜಾರಿ ಶ್ರೀ ದೇವರು ಮಂತ್ರ ಪಠಣೆ ಮಾಡಿದರು ,ಜಯ ಪೂಜಾರಿ ಆರತಿ ಮಾಡಿದ ಸಮಿತಿಯ ಕೋಶಾಧಿಕಾರಿ ಜಗನ್ನಾಥ್ ಮೆಂಡನ್ ಸಾಲಿಗ್ರಾಮ ಧನ್ಯವಾದ ನೀಡಿದರು, ಈ ಸಂದರ್ಭದಲ್ಲಿ ಸಮಿತಿಯ ಸಂಚಾಲಕ ಬಿ ದಿನೇಶ್ ಕುಲಾಲ್, ಸಮಿತಿ ಸದಸ್ಯರುಗಳಾದ ದಿನೇಶ್ ಪೂಜಾರಿ, ಸನತ್ ಪೂಜಾರಿ, ಹರೀಶ್ ಪೂಜಾರಿ, ಯುವ ವಿಭಾಗದ ಡಾ. ಶಶಿನ್ ಕೆ ಆಚಾರ್ಯ, ರೋನಿತ್ ಜಿ ಪೂಜಾರಿ ಉಪಸ್ಥಿತರಿದ್ದರು.

Related Posts

Leave a Reply

Your email address will not be published.