ಮುಂಬಯಿ : ಕ್ರೈಸ್ತ ಸಮುದಾಯದ ಸಂವಹನ ಸಭೆ

ರಾಷ್ಟ್ರದ ಸೇವೆಯಲ್ಲಿ ವಿಶೇಷವಾಗಿ ಶಿಕ್ಷಣ ಮತ್ತು ಆರೋಗ್ಯದ ಸೇವೆಯಲ್ಲಿ ಕ್ರೈಸ್ತರ ಕೊಡುಗೆ ಏನೆಂದು ಇಡೀ ವಿಶ್ವಕ್ಕೆ ತಿಳಿದಿದೆ. ದೇಶವನ್ನು ಸುಶಿಕ್ಷಿತರನ್ನಾಗಿಸಿ ಆರೋಗ್ಯವಂತವಾಗಿಸಿದ ಹೆಗ್ಗಳಿಕೆ ಕ್ರೈಸ್ತರದ್ದಾಗಿದೆ. ಇಂತಹ ಕ್ರೈಸ್ತ ಸಮುದಾಯದ ಕಡೆಗಣನೆ ಬರೇ ರಾಜಕೀಯ ಪ್ರೇರಿತವಾಗಿದೆ. ಪ್ರಧಾನಮಂತ್ರಿ ಮೋದಿ ಮತ್ತು ಎನ್‌ಡಿಎ ಕೂಟವು ರಾಷ್ಟ್ರದ ಮೈನಾರಿಟಿ ಮತ್ತು ಮೆಜಾರಿಟಿ ಬಗ್ಗೆ ಮಾತೆತ್ತುವುದೇ ಹಾಸ್ಯಾಸ್ಪದವಾಗಿದೆ ಎಂದು ಮಾಜಿ ಎಂಎಲ್‌ಸಿ ಐವಾನ್ ಡಿ’ಸೋಜಾ ತಿಳಿಸಿದರು.
ಮುಂಬಯಿ ಉಪನಗರದ ಅಂಧೇರಿ ಪೂರ್ವದ ಚಕಲಾ ಹೊಟೇಲ್ ಸಾಯಿ ಪ್ಯಾಲೇಸ್‌ನಲ್ಲಿ ಆಯೋಜಿಸಿದ್ದ ಸಂವಹನ ಸಭೆಯ ಅಧ್ಯಕ್ಷತೆ ವಹಿಸಿ ಐವಾನ್ ಡಿ’ಸೋಜಾ ಮಾತನಾಡಿದರು.
ಸುರೇಶ್ ಹೆಚ್.ಶೆಟ್ಟಿ ಮಾತನಾಡಿ, ಇಂದಿನ ಈ ಸಭೆಯು ಕಾಂಗ್ರೇಸ್ ಪಕ್ಷದ ಉತ್ಸಾಹವನ್ನು ತೋರುತ್ತದೆ. ರಾಷ್ಟ್ರೀಯ ಭಾವೈಕ್ಯತೆಗೆ ಕ್ರೈಸ್ತರ ಪಾತ್ರ ಮಹತ್ತರದ್ದಾಗಿದೆ. ಭಾರತದಲ್ಲಿ ಮತಾಂತರದ ಬಗ್ಗೆ ಯಾವುದೇ ಪುರಾವೆಯಿಲ್ಲ. ಇದೆಲ್ಲವೂ ರಾಜಕಿಯ ಪ್ರೇರಿತ ಷಡ್ಯಾಂತ್ರವಾಗಿದೆ. ಕ್ರೈಸ್ತ ಬಂಧುಗಳು ಯಾವೊತ್ತೂ ರಾಷ್ಟ್ರದ ನಿಷ್ಕಳಂಕಮಯ ಪ್ರಜೆಗಲಾಗಿದ್ದಾರೆ. ಇಂತಹ ಜನತೆಯ ಮೇಲಿನ ದೌರ್ಜನ್ಯ, ದಬ್ಬಾಳಿಕೆ ಸೃಷ್ಟಿಕರ್ತನೂ ಸಹಿಸಲಾರನು ಎಂದರು.
ಜಯಪ್ರಕಾಶ್ ಹೆಗ್ಡೆ ಅವರು ಮಾತನಾಡಿ, ಭಾರತದ ರಾಜಕಾರಣದಲ್ಲಿ ಬದಲಾವಣೆಯ ಪರ್ವ ಆರಂಭವಾಗಿದೆ. ಹತ್ತು ವರ್ಷಗಳನ್ನಾಳಿದ ಮೋದಿ ಸರ್ಕಾರವು ದೇಶದ ಸವಿಂಧಾನವನ್ನೇ ಬದಲಾಹಿಸಲು ಹೊರಟಿರುವುದು ರಾಷ್ಟ್ರದ ದುರಂತ. ಸವಿಂಧಾನದ ತಿದ್ದುಪಡಿ, ಸುಧಾರಣೆ ಸಾಧ್ಯವೇ ಹೊರತು ಬದಲಾವಣೆ ಅಸಾಧ್ಯ. ಸ್ವಸ್ಥ ರಾಷ್ಟ್ರ ನಿರ್ಮಾಣಕ್ಕೆ ಮತದಾನ ಎಷ್ಟು ಅಗತ್ಯವೋ ಅರ್ಹ ವ್ಯಕ್ತಿಯ ಆಯ್ಕೆಯೂ ಅಷ್ಟೇ ಮುಖ್ಯವಾಗಿದೆ. ಈ ಹೊಣೆಗಾರಿಕೆ ನಿಮ್ಮೆಲ್ಲರ ಜವಾಬ್ದಾರಿ ಆಗಬೇಕು ಎಂದು ತಿಳಿಸಿದರು.
ಸಭೆಯಲ್ಲಿ ಅಂಧೇರಿ ಜಿಲ್ಲಾ ಮುಂಬಯಿ ಕಾಂಗ್ರೆಸ್ (ಐ) ಪಕ್ಷದ ಅಧ್ಯಕ್ಷ ಕ್ಲೈವ್ ಡಾಯಸ್, ಕಥೋಲಿ ಸಭಾ ಮುಂಬಯಿ ಮಾಜಿ ಉಪಾಧ್ಯಕ್ಷ ಲಾರೆನ್ಸ್ ಡಿಸೋಜಾ ಮುಲುಂಡ್, ಡೈಮೆನ್ಸಿಯನ್ (ಗ್ಲೋಬಲ್ ಕ್ರಿಶ್ಚನ್‌ಸ್ ಛೇಂಬರ್ ಆಫ್ ಕಾಮರ್ಸ್) ನಿರ್ದೇಶಕರುಗಳಾದ ಸಿಲ್ವೆಸ್ಟರ್ ರೋಡ್ರಿಗಸ್, ಸ್ಟೀವನ್ ಫೆರ್ನಾಂಡಿಸ್, ಸಿಎ| ಅರುಣ್ ವಾಸ್, ನಿಲೇಶ್ ಮಿನೇಜಸ್, ಸದಸ್ಯರಾದ ಐವಾನ್ ಆನಂದ್ ಡಿ’ಸೋಜಾ ನಕ್ರೆ, ಡೋಲ್ಫಿ ಡಿ’ಸೋಜಾ ಉಪಸ್ಥಿತರಿದ್ದರು.
