ಮುಂಬೈ ಕುಲಾಲ ಸಂಘದ ನೂತನ ಅಧ್ಯಕ್ಷರಾಗಿ ರಘು ಎ ಮೂಲ್ಯ ಪಾದೆಬೆಟ್ಟು ಅವಿರೋಧ ಆಯ್ಕೆ

ಮುಂಬೈ. ಮರಾಠಿ ಮಣ್ಣಿನಲ್ಲಿ ಸುಮಾರು 93 ವರ್ಷಗಳ ಇತಿಹಾಸ ಇರುವ ಕುಲಾಲ ಸಮಾಜದ ಪ್ರತಿಷ್ಠಿತ ಸಂಸ್ಥೆ ಮುಂಬೈ ಕುಲಾಲ ಸಂಘಕ್ಕೆ ಎರಡು ವರ್ಷಗಳ ಕಾಲಾವಧಿಗೆ ಅಧ್ಯಕ್ಷರಾಗಿ ರಘು ಎ ಮೂಲ್ಯ ಪಾದಬೆಟ್ಟು ಆಯ್ಕೆಯಾಗಿದ್ದಾರೆ .
ನವಿ ಮುಂಬೈಯಲ್ಲಿ ವಾಸ್ತವಿರುವ ರಘು ಮೂಲ್ಯ ಅವರು ಬಾಲಾಜಿ ಟ್ರಾನ್ಸ್ಪೋರ್ಟ್ ಎಂಬ ಕಂಪನಿಯ ಪಾಲುದಾರರಾಗಿದ್ದಾರೆ. ಕುಲಾಲ ಸಂಘ ಕಾಪು ವಲಯದ ಗೌರವ ಅಧ್ಯಕ್ಷ ರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ . ನವಿ ಮುಂಬೈ ಲಯನ್ಸ್ ಕ್ಲಬ್_(NRI) ಸದಸ್ಯರು. ನವಿ ಮುಂಬೈ ಕನ್ನಡ ಸಂಘದ ಸಾಂಸ್ಕೃತಿಕ ವಿಭಾಗದ ಕಾರ್ಯಾಧ್ಯಕ್ಷರಾಗಿ. ರಂಗಭೂಮಿ ಫೈನ್ ಆರ್ಟ್ಸ್ ಕೋಶಧಿಕಾರಿಯಾಗಿ, ಮುಂಬೈ ಕುಲಾಲ ಸಂಘದ ನವಿ ಮುಂಬೈ ಸ್ಥಳೀಯ ಸಮಿತಿಯ ಮಾಜಿ ಕಾರ್ಯ ಧ್ಯಕ್ಷರಾಗಿ ಕಾರ್ಯನಿರ್ವಹಿಸಿದರು. ಪ್ರಸ್ತುತ ಮುಂಬೈ ಕುಲಾಲ ಸಂಘದ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದರು. ಕುಲಶೇಖರ ಶ್ರೀ ವೀರನಾರಾಯಣ ದೇವಸ್ಥಾನದ ಜೀರ್ಣೋದ್ಧಾರದ ಮುಂಬೈ ಸಮಿತಿಯ ಸಲಹೆಗಾರಗಿದ್ದಾರೆ,ನವಂಬರ್ 29ರಂದು ಸಂಘದ ಕಾರ್ಯಾಲಯದಲ್ಲಿ ನಡೆದ ಕಾರ್ಯಕಾರಿ ಸಮಿತಿಯ ಸಭೆಯಲ್ಲಿ ಈ ಆಯ್ಕೆಯನ್ನು ಮಾಡಲಾಯಿತು
