ಮುಂಬೈ : ಕಟೀಲು ಗೋಪಾಲಕೃಷ್ಣ ಆಸ್ರಣ್ಣರ ಸಂಸ್ಮರಣಾ ಕಾರ್ಯಕ್ರಮ
ಮುಂಬೈ ಮಹಾನಗರದಲ್ಲಿ ಕೀರ್ತಿಶೇಷ ಕಟೀಲು ಗೋಪಾಲಕೃಷ್ಣ ಆಸ್ರಣ್ಣರ ಸಂಸ್ಮರಣಾ ಕಾರ್ಯಕ್ರಮ ಸಯನ್ ಗೋಕುಲ ಸರಸ್ವತಿ ಸಭಾಗೃಹ ಬಿ ಎಸ್ ಕೆ ಬಿ ಅಸೋಸಿಯೇಷನ್ ಸಹಕಾರದೊಂದಿಗೆ ಯುವ ನ್ಯಾಯವಾದಿ ರವಿ ಕೋಟ್ಯಾನ್‌ರವರ ನೇತೃತ್ವದಲ್ಲಿ ಅರ್ಥಪೂರ್ಣವಾಗಿ ನಡೆಯಿತು.
ಕೀರ್ತಿಶೇಷ ಕಟೀಲು ಗೋಪಾಲಕೃಷ್ಣ ಆಸ್ರಣ್ಣರ ಸಂಸ್ಮರಣ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಕೀರ್ತಿಶೇಷ ಗೋಪಾಲಕೃಷ್ಣ ಆಶ್ರಣ್ಣರ ಸುಪುತ್ರ ಕಟೀಲಿನ ಅನುವಂಶಕ ಅರ್ಚಕ ನಾರಾಯಣ ಆಸ್ರಣ್ಣ ಆಶೀರ್ವಚನದ ಮಾತುಗಳನ್ನಾಡುತ್ತಾ ಯಕ್ಷಗಾನ ಎಂದರೆ ಬಹಳ ಅಭಿಮಾನವನ್ನು ಇರಿಸಿಕೊಂಡಿದ್ದ ನನ್ನ ತೀರ್ಥರೂಪರು, ಕಲಾವಿದರಾಗಿ ಕೂಡ ಯಕ್ಷಗಾನದಲ್ಲಿ ಸಂಭ್ರಮಿಸಿದವರು, ಕಳೆದ ಎರಡು ದಶಕಗಳಿಂದ ಪದ್ಮನಾಭ ಕಟೀಲ್ ಅವರು ಬಹಳ ವಿಜ್ರಂಭಣೆಯಿ oದ ಕಲಾವಿದರನ್ನು ಗೌರವಿಸಿ ಅವರಿಗೆ ಹಾರ್ದಿಕ ಸಹಕಾರ ನೀಡುವ ಮೂಲಕ ಸಂಸ್ಕರಣ ಕಾರ್ಯಕ್ರಮವನ್ನು ನಡೆಸುತ್ತಾ ಬಂದಿದ್ದಾರೆ ಎಂದರು.
ಸಮಾರoಭದ ಅಧ್ಯಕ್ಷತೆಯನ್ನು ವಹಿಸಿದ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಅವರು ಮಾತನಾಡುತಾ,್ತ ನಾನು ಈ ನಗರಕ್ಕೆ ಬರುವಾಗ ಕಟೀಲು ಕ್ಷೇತ್ರದ ಪ್ರಸಾದವನ್ನು ಮಾತ್ರ ತಂದಿದ್ದೆ, ನನ್ನ ಏನು ಸಾಧನೆಗಳಿದೆ ಅದೆಲ್ಲ ಶ್ರೀ ಕ್ಷೇತ್ರದ ಅನುಗ್ರಹದಿಂದಾಗಿದೆ. ನನ್ನ ಜೀವನದ ಸದಾ ಉಸಿರು ಕಟೀಲಿಗೆ ಅರ್ಪಣೆಯಾಗಿದೆ ಎಂದರು.
ಮುಖ್ಯ ಅತಿಥಿ ಪಾಲ್ಗೊಂಡಿದ್ದ ಅಖಿಲ ಭಾರತ ತುಳು ಒಕ್ಕೂಟದ ಅಧ್ಯಕ್ಷ ಧರ್ಮಪಾಲ ದೇವಾಡಿಗ ಮಾತನಾಡುತ್ತಾ ಆಶ್ರಣ್ಣರು ಸಂಸ್ಕಾರಣ ಕಾರ್ಯಕ್ರಮದಲ್ಲಿ ಎರಡನೇ ಬಾರಿ ಪಾಲ್ಗೊಂಡಿದ್ದೇನೆ ನನ್ನ ಬದುಕನ್ನು ಪಾವನಗೊಳಿಸಿದೆ ಎಂದರು. ಗೌರವ ಅತಿಥಿ ಕರ್ನಾಟಕಮಲ್ಲ ಪತ್ರಿಕೆಯ ಸಂಪಾದಕ ಚಂದ್ರಶೇಖರ್ ಪಾಲತ್ತಾಡಿ ಅವರು ಮಾತನಾಡುತ್ತಾ ಸಾಮಾಜಿಕ ಧಾರ್ಮಿಕ ಚಿಂತಕ ಆಶ್ರಣ್ಣರು ಸ್ಮರಿಸುವ ಅಗತ್ಯದ ಸೇವೆಯಾಗಿದೆ. ಅದರೊಂದಿಗೆ ಯಕ್ಷಗಾನವನ್ನು ಕಲೆಯನ್ನು ಕೂಡ ಬೆಳೆಸುವ ಉಳಿಸುವ ಕಾರ್ಯ ನಡೆದಿದೆ.
ಶ್ರೀ ಉಮಾಮಹೇಶ್ವರಿ ದೇವಸ್ಥಾನ ಜೇರಿ ಮೇರಿ ಇದರ ಪ್ರಧಾನ ಅರ್ಚಕ ಎಸ್‌ಎನ್ ಉಡುಪ ಅವರು ಆಶೀರ್ವಾದದ ಮಾತುಗಳನ್ನಾಡಿ ಕೀರ್ತಿಶೇಷ ಕಟೀಲು ಗೋಪಾಲಕೃಷ್ಣ ಆಸ್ರಣ್ಯರ ಸಮಾಜದಲ್ಲಿ ಆದರ್ಶಪ್ರಾಯರಾಗಿ ಬಾಳಿ ಬದುಕಿದವರು, ನಡೆದಾಡುವ ದೇವರಾಗಿದ್ದರು, ಅಂತ ಯುಗ ಪುರುಷನನ್ನು ಈ ಗೋಕುಲದ ಬ್ರಹ್ಮಕಲಸದ ನೆನಪು ಮಸುದರ ಮೊದಲೇ ಇಲ್ಲಿ ಅವರ ಸಂಸ್ಮರಣೆ ನಡೆದಿರುವುದು ಬಹಳ ಅರ್ಥಪೂರ್ಣವಾಗಿದೆ. ಗೋಕುಲಕ್ಕೆ ತಾಯಿ ಭ್ರಮರಾಂಬಿಕೆಯ ಆಶೀರ್ವಾದ ನೀಡಿದಂತೆ ವತಾಗಿದೆ ಎಂದು ನುಡಿದರು.
ವೇದಿಕೆಯಲ್ಲಿ ಒಡಿಯೂರು ಶ್ರೀ ಗುರುದೇವ ಸೇವಾ ಬಳಗದ ಮಹಾರಾಷ್ಟ ಘಟಕದ ಉಪಾಧ್ಯಕ್ಷ ಬೊಳ್ಳಾಡು ಗುತ್ತು ಚಂದ್ರಹಾಸ್ ಎಂ. ರೈ, ಉದ್ಯಮಿ ಜಿ.ಸಿ. ಕುಮಾರ. ಹೋಟೆಲ್ ಉದ್ಯಮಿ ವಾಮಯ್ಯ ಶೆಟ್ಟಿ, ವಸೈ ತಾಲೂಕ ಹೋಟೆಲ್ ಅಸೋಸಿಯೇಷನ್ ನ ಅಧ್ಯಕ್ಷ ನಾಗರಾಜ್ ಎನ್. ಶೆಟ್ಟಿ , ಅಶೋಕ್ ಇಂಡಸ್ಟಿಸ್ ನ ಮಾಲಕ ಅಶೋಕ್ ಶೆಟ್ಟಿ ಪೆರ್ಮುದ್ದೆ ಕಲ್ಪವೃಕ್ಷ, ಮೀರಾ ಭಯಂದರ್ ನ ರೈ ಸುಮತಿ ಎಜುಕೇಶನ್ ಟ್ರಸ್ಟ್, ಸೇಂಟ್ ಆಗ್ನೆಸ್ ಆಂಗ್ಲ ಪ್ರೌಢಶಾಲೆ, ಕೆ.ಎಸ್. ಮೆಹ್ತಾ ಶಾಲೆ ಮತ್ತು ಜೂನಿಯರ್ ಕಾಲೇಜು ಆಡಳಿತ ನಿರ್ದೇಶಕ. ಡಾ, ಅರುಣೋದಯ ಎಸ್. ರೈ ಉಪಸ್ಥಿತಿದ್ದರು. ಕಾರ್ಯಕ್ರಮವನ್ನು ಸಂಘಟಕ ಕರ್ನೂರು ಮೋಹನ್ ರೈ ನಿರೂಪಿಸಿದರು, ಅತಿಥಿ ಗಣ್ಯರಿಗೆ ಕಾರ್ಯಕ್ರಮದ ಸಂಘಟಕ ಕಟೀಲಿನ ಪರಮ ಭಕ್ತ ಯುವ ನ್ಯಾಯವಾದಿ ರವಿ ಕೋಟ್ಯಾನ್. ಮೇಲದ ಮುಂಬೈ ಸಂಚಾಲಕ ಪ್ರಕಾಶ್ ಎಂ ಶೆಟ್ಟಿ ಸುರತ್ಕಲ್ ಗೌರವಿಸಿದರು,
ಸಭಾ ಕಾರ್ಯಕ್ರಮದ ಬಳಿಕ ಶ್ರೀ ಪೆರ್ಡೂರು ಮೇಳ ಮತ್ತು ಅತಿಥಿ ಕಲಾವಿದರ ಕೂಡುವಿಕೆಯಿಂದ ಸಂಪೂರ್ಣ ಶ್ರೀ ದೇವಿ ಮಹಾತ್ಮ ಯಕ್ಷಗಾನ ದರ್ಶನ ನಡೆಯಿತು ಬಡಗುತಿಟ್ಟಿನ ಕಲಾವಿದ ನಂದೀಶ ಜನ್ನಾಡಿ ಮಹಿಷಾಸುರನ ವಿಶೇಷ ಮೆರುಗು ನೀಡಿದರು, ಕಾರ್ಯಕ್ರಮ ಯಶಸ್ವಾಗುವಲ್ಲಿ ಅಣ್ಣಯ್ಯ ಜಿ. ಪೂಜಾರಿ, ರಜನಿ ಶೆಟ್ಟಿ (ಕಲಾ ಪೋಷಕರು) , ಕರುಣಾಕರ್ ಪಿ. ಶೆಟ್ಟಿ, ಸಾಂತೂರು, ಜಗದೀಶ್ ಸುವರ್ಣ, ಕಿರಣ್ ಕೋಟ್ಯಾನ್ ಸಹಕರಿಸಿದರು.