ಮತಾಂತರ ನಿಷೇಧ ಕಾಯ್ದೆ ಜಾರಿ ಸ್ವಾಗತಾರ್ಹ : ಶ್ರೀರಾಮ ಸೇನೆಯ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಹೇಳಿಕೆ

ಈಗಾಗಲೇ ಸರಕಾರ ಎಲ್ಲಾ ಜಿಲ್ಲೆಗಳಲ್ಲಿ ಮತಾಂತರ ನಿಷೇಧ ಜ್ಯಾರಿಗೆ ತರುತ್ತಿರುವುದು ಸ್ವಾಗತಾರ್ಹವಾಗಿದ್ದು, ಸರಕಾರ ತಕ್ಷಣ ಮತಾಂತರ ಕಾಯ್ದೆ ಜ್ಯಾರಿಗೆ ತರಬೇಕು ಎಂದು ಶ್ರೀರಾಮ ಸೇನೆಯ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ತಿಳಿಸಿದ್ದಾರೆ.

ಅವರು ಪುತ್ತೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ದೇಶದಲ್ಲಿ ಸುಮಾರು ಆರು ಸಾವಿರ ಅನಧೀಕೃತ ಚರ್ಚ್‍ಗಳಿದ್ದು, ಈ ಮೂಲಕ ಬುಡಕಟ್ಟು ಜನಾಂಗ, ದಲಿತರ ಮತಾಂತರ ಪ್ರಕ್ರಿಯೆಗಳು ನಡೆಯುತ್ತಿದೆ. ತಕ್ಷಣ ಈ ಅನಧಿಕೃತ ಚರ್ಚ್‍ಗಳ ಧ್ವಂಸಕ್ಕೆ ಸರಕಾರ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು.

ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದಲ್ಲಿ ಮೀನಿನ ವ್ಯಾಪಾರ, ಅಡಕೆ ವ್ಯಾಪಾರದ ಲಾಭಿ ಇದ್ದು, ಹಿಂದೂ ಸಮುದಾಯ ಯಾವಾಗ ಹಲಾಲ್ ಮುಕ್ತ, ಮುಸ್ಲಿಂ ಸಮುದಾಯವರೊಟ್ಟಿಗೆ ವ್ಯಾಪಾರ ಮುಕ್ತವಾಗುತ್ತದೆ ಆಗ ಹಿಂದೂ ಸಮಾಜಕ್ಕೆ ಒಳಿತು ಸಾಧ್ಯ ಎಂದ ಅವರು, ಪ್ರವೀಣ್ ನೆಟ್ಟಾರು ಕುಟುಂಬಕ್ಕೆ ನ್ಯಾಯ ಸಿಗುವವರೆಗೆ ನಾವು ಬಿಡುವುದಿಲ್ಲ. ಕೊಲೆ ವ್ಯರ್ಥ ಮಾಡಲು ಬಿಡುವುದಿಲ್ಲ. ಕೊಲೆ ಆರೋಪಿಗಳಿಗೆ ಗಲ್ಲು ಶಿಕ್ಷೆ ಆಗುವವರೆಗೆ ನಾವು ವಿರಮಿಸುವುದಿಲ್ಲ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಶ್ರೀರಾಮ ಸೇನೆಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಆನಂದ ಶೆಟ್ಟಿ ಅಡ್ಯಾರು, ಮುಖಂಡರಾದ ಧನ್ಯ ಕುಮಾರ್ ಬೆಳಂದೂರು, ಜಯರಾಮ ಅಂಬೆಕಲ್ಲು ಮೋಹನ್ ಭಟ್ ಉಪಸ್ಥಿತರಿದ್ದರು.

Related Posts

Leave a Reply

Your email address will not be published.