ಉಡುಪಿಯ ರಿದ್ಧಿ ಕ್ರಿಯೇಷನ್ಸ್ ಸಿನಿ ಸ್ಟುಡಿಯೋದಲ್ಲಿ ನಡೆದ “ನಾದಾರ್ಚನೆ” ಸಪ್ತ ಸ್ವರಗಳಲ್ಲಿ ನವ ವೈಭವ ಕಾರ್ಯಕ್ರಮ
ನವರಾತ್ರಿಯ ಅಂಗವಾಗಿ ವಿ4 ನ್ಯೂಸ್ ಉಡುಪಿ ವತಿಯಿಂದ ನಿಕ್ಸ್ ಪ್ಯೂರ್ ಸ್ಪೈಸಸ್ & ಮಸಾಲಾಸ್ ಅರ್ಪಿಸುವ “ನಾದಾರ್ಚನೆ” ಸಪ್ತ ಸ್ವರಗಳಲ್ಲಿ ನವ ವೈಭವ, ಖ್ಯಾತ ಹಾಗೂ ಉದಯೋನ್ಮುಖ ಗಾಯಕರಿಂದ ಸಂಗೀತ ಗೋಷ್ಠಿ ಕಾರ್ಯಕ್ರಮವು ಉಡುಪಿಯ ರಿದ್ಧಿ ಕ್ರಿಯೇಷನ್ಸ್ ಸಿನಿ ಸ್ಟುಡಿಯೋದಲ್ಲಿ ಜರುಗಿತ್ತು.
ಇದರ ಉದ್ಘಾಟನಾ ಸಮಾರಂಭದಲ್ಲಿ ಕರ್ನಾಟಕ ಕಲಾಶ್ರೀ ಪ್ರಶಸ್ತಿ ಪುರಸ್ಕøತ ಶ್ರೀ ಟಿ. ರಂಗ ಪೈ ಮುಖ್ಯ ಅತಿಥಿಯಾಗಿ ಆಗಮಿಸಿ, ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಸಂಗೀತ ಕಾರ್ಯಕ್ರಮದಲ್ಲಿ ಭಾಗವಹಿಸಿದ ಕಲಾವಿದರು ಕೂಡ ಉಪಸ್ಥಿತರಿದ್ದರು.